header

DIRECTORATE OF RESEARCH ಸಂಶೋಧನಾ ನಿರ್ದೇಶನಾಲಯ

 

DR

Mruthunjaya C. Wali   M.Sc.(Agri.); Ph.D

ಮೃತ್ಯುಂಜಯ ಸಿ. ವಾಲಿ   ಎಂ.ಎಸ್ಸಿ (ಕೃಷಿ), ಪಿಎಚ್.ಡಿ


   Director of Research    ಸಂಶೋಧನಾ ನಿರ್ದೇಶಕರು
dr@uahs.edu.in
+91 94808 38956
+91 8182 267016

ಸಂಶೋಧನಾ ನಿರ್ದೇಶಕರ ಸಂದೇಶ Message from the Director of Research

ಸಂಶೋಧನಾ ನಿರ್ದೇಶನಾಲಯವು ನೇರವಾಗಿ ಕುಲಪತಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇವರಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ ಮತ್ತು ಚಿತ್ರದುರ್ಗ ಈ ಏಳು ಜಿಲ್ಲೆಗಳಲ್ಲಿ ಪಾಲ್ಗೊಳ್ಳುವಿಕೆಯ ಮೂಲಕ ಸಂಶೋಧನೆ, ಬೀಜೋತ್ಪಾದನೆ ಮತ್ತು ಬಿತ್ತನೆ ಸಾಮಗ್ರಿಗಳನ್ನು ಒದಗಿಸುವಲ್ಲಿ ಸಹಕರಿಸುತ್ತಿದೆ. ರಾಜ್ಯದ ಕೃಷಿ-ಹವಾಮಾನ ವಲಯಗಳಲ್ಲಿ ಕೇಂದ್ರ ಒಣ ಪ್ರದೇಶ ವಲಯ (4), ದಕ್ಷಿಣ ಉಷ್ಣವಲಯ (7), ಬೆಟ್ಟ ಪ್ರದೇಶ ವಲಯ (9) ಮತ್ತು ಕರಾವಳಿ ವಲಯ (10)ಪ್ರದೇಶಗಳನ್ನು ಒಳಗೊಂಡಿರುತ್ತದೆ. ಈ ಪ್ರದೇಶಗಳಲ್ಲಿ ಮಳೆಯು 650 ಮಿ.ಮೀ. ನಿಂದ 4,000 ಮಿ.ಮೀ. ವರೆಗೆ ಬೀಳುತ್ತದೆ. ವಿಶ್ವವಿದ್ಯಾಲಯವು ನಾಲ್ಕು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳನ್ನು ಹೊಂದಿದ್ದು ಮತ್ತು ಒಂಭತ್ತು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳ ಒಳಗೊಂಡು, ಎಲ್ಲಾ ಹವಾಮಾನ ಪರಿಸ್ಥಿತಿಗಳನ್ನು ಪ್ರತಿನಿಧಿಸುತ್ತವೆ. ವಿವಿಧ ವಲಯಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಉದಾಹರಣೆಗೆ ರಾಗಿ, ಕಡಲೆಕಾಯಿ, ಎಳ್ಳು, ತೊಗರಿ, ತಿಂಗಳ ಹುರಳಿ, ಹರಳು, ಮೆಕ್ಕೆ ಜೋಳ, ಹತ್ತಿ, ಭತ್ತ ಇತ್ಯಾದಿ. ಈ ಭಾಗದಲ್ಲಿ ಬೆಳೆಯುವ ಪ್ರಮುಖ ತೋಟಗಾರಿಕೆ ಬೆಳೆಗಳೆಂದರೆ ದಾಳಿಂಬೆ, ಪಪ್ಪಾಯ, ಬಾಳೆ, ಅಂಜೂರದ ಹಣ್ಣು, ತೆಂಗು, ಗೋಡಂಬಿ, ಬೆಂಡೆ, ಟೊಮೆಟೊ, ಬದನೆ, ಈರುಳ್ಳಿ, ಪಡವಲಕಾಯಿಗಳು, ಮೆಣಸಿನಕಾಯಿ, ಏಲಕ್ಕಿ, ಶುಂಠಿ, ಸೊಪ್ಪು, ಸುಗಂಧರಾಜ, ಚಂಡುಹೂ, ಕನಕಾಂಬರ ಇತ್ಯಾದಿಗಳು. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಉತ್ಪಾದಕತೆಯನ್ನು ಹೆಚ್ಚಿಸಲು ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಕುರಿತಾದ ಸಂಶೋಧನೆ ನಡೆಸುವುದು ವಿಶ್ವವಿದ್ಯಾಲಯದ ಉದ್ದೇಶವಾಗಿದೆ. ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ ಮತ್ತು ಕೊಡಗು ಜಿಲ್ಲೆಗಳಲ್ಲಿ ನಾಲ್ಕು ಕೃಷಿ ಹವಾಮಾನ ವಲಯಗಳನ್ನು ಹೊಂದಿರುತ್ತದೆ.

ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪ್ರಮುಖ ವಲಯಗಳೆಂದರೆ ಕೇಂದ್ರ ಒಣ(ವಲಯ-4), ದಕ್ಷಿಣದ ಉಷ್ಣವಲಯ (ವಲಯ-7), ಬೆಟ್ಟಪ್ರದೇಶ (ವಲಯ-9) ಮತ್ತು ಕರಾವಳಿ (ವಲಯ-10). ಈ ವಲಯಗಳು ವೈವಿಧ್ಯಮಯ ಕೃಷಿ ಹವಾಮಾನ ಪರಿಸ್ಥಿತಿಗಳನ್ನು (ಕಡಿಮೆ ಮಳೆಯಿಂದ ಅತಿ ಹೆಚ್ಚು ಮಳೆ ಬೀಳುವಿಕೆ) ಮತ್ತು ವಿವಿಧ ಮಣ್ಣಿನ ಪರಿಸ್ಥಿತಿಗಳನ್ನು (ಮರಳು, ಕೆಂಪು ಬಣ್ಣದ ಆಳವಾದ ಕಪ್ಪು ಮಣ್ಣು) ಒಳಗೊಂಡಿದೆ. ಶೇಂಗಾ, ತೆಂಗು, ಕಾಫಿ, ಏಲಕ್ಕಿ, ಮೆಣಸು, ಕೋಕೋ, ಜಾಯಿಕಾಯಿ, ಮಾವು, ಬಾಳೆ, ಸಪೊಟಾ, ದಾಳಿಂಬೆ, ಅಂಜೂರದ ಹಣ್ಣು, ಮಲ್ಲಿಗೆ, ಸೇವಂತಿಗೆ, ಚೆಂಡುಹೂ, ಟೊಮೆಟೊ, ಈರುಳ್ಳಿ, ಬೆಂಡೆ, ಬದನೆ, ಭತ್ತ, ರಾಗಿ, ನೆಲಗಡಲೆ, ಸೂರ್ಯಕಾಂತಿ, ಸಜ್ಜೆ, ತಂಬಾಕು, ಮೆಕ್ಕೆಜೋಳ ಮತ್ತು ಇತರೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ನಾಲ್ಕು ವಲಯದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳಡಿಯಲ್ಲಿ ಒಂಭತ್ತು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳಿವೆ. ಇವು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಯಡಿಯಲ್ಲಿ ಬರುವ ಏಳು ಜಿಲ್ಲೆಗಳ ರೈತರ ಅಗತ್ಯತೆಗಳನ್ನು ಪೂರೈಸುತ್ತವೆ. ಕೃಷಿ ಮತ್ತು ತೋಟಗಾರಿಕೆ ಸಮಗ್ರ ಬೆಳೆಗಳ ಕಾರಣದಿಂದಾಗಿ ಈ ವಿಶ್ವವಿದ್ಯಾಲಯವು ಇತರ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದೆ. ತೋಟಗಾರಿಕೆ ಬೆಳೆಗಳಲ್ಲಿ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳ ಜೊತೆಗೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ವಾರ್ಷಿಕವಾಗಿ ವೈವಿಧ್ಯಮಯ ಬೆಳೆಗಳನ್ನು ಸಹ ಬೆಳೆಯಲಾಗುತ್ತಿದೆ.

ವಿಶ್ವವಿದ್ಯಾಲಯವು ಇತ್ತೀಗಷ್ಟೇ ಬೆಳೆಯುತ್ತಿರುವ ಸಂಸ್ಥೆಯಾಗಿದ್ದು, ಈಗಾಗಲೇ 13 ಅಖಿಲ ಭಾರತ ಸಮನ್ವಯ ಸಂಶೋಧನಾ ಪ್ರಾಯೋಜನೆ(ಎಐಸಿಆರ್‍ಪಿ), ವಿವಿಧ ಹಣಕಾಸು ಸಂಸ್ಥೆಗಳ ನೆರವಿನಿಂದ 25 ಹಾಗೂ 33 ಪ್ರಾಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ವಿಶ್ವವಿದ್ಯಾಲಯವು ವಿವಿಧ ಬೆಳೆಗಳಲ್ಲಿ ಹಲವು ತಂತ್ರಜ್ಞಾನಗಳನ್ನು ಹಾಗೂ ತಳಿಗಳನ್ನು ಬಿಡುಗಡೆಗೊಳಿಸಿದೆ. ರೈತ ಸಮುದಾಯಕ್ಕೆ ಅನುಕೂಲವಾಗುವಂತೆ ಉಪಕರಣಗಳನ್ನು ವಿನ್ಯಾಸಗೊಳಿಸಲಾಗಿದೆ. ರೈತರಿಗೆ ಉತ್ತಮ ಗುಣಮಟ್ಟದ ಮತ್ತು ಪ್ರಮಾಣದ ಬೀಜಗಳು ಹಾಗೂ ಬಿತ್ತನೆ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.

The Directorate of Research is functioning directly under the Vice Chancellor, University of Agricultural and Horticultural Sciences, Shivamogga. It is coordinating the research, seed production and planting material in the participatory approach of the seven districts namely Shivamogga, Chikkmagaluru, Udupi, Dakshina Kannada, Kodagu, Davanagere and Chitradurga. It is covering Central Dry (4), Southern Transitional (7), Hilly (9) and coastal (10) zones of the agro-climate of the state. The rainfall varies from 650 mm to 4,000 mm. The University has four Zonal Agricultural and Horticultural Research Stations and nine Agricultural and Horticultural Research Stations representing all the climatic conditions. Varied crop are grown in different zones, such as Ragi, Groundnut, Sesamum, Redgram, Field bean, Castor, Maize, Cotton, Paddy, etc. The important horticulture crops cultivated are Pomegranate, Papaya, Banana, Fig, Areca nut, Coconut, Cashew, Okra, Tomato, Brinjal, Onion, Gourds, Chillies, Cardamom, Ginger, Chrysanthemum, Tuberose, Marigold, Crossandra etc. The University of Agricultural and Horticultural Sciences, Shivamogga is functioning under tripartite system on Teaching, Research and Extension areas. The mission of University is to conduct research on agriculture and horticulture crops to increase the productivity. The University has seven districts under its jurisdiction namely Shivamogga, Chikkamagalur, Chitradurga, Dakshina Kannada, Udupi, Davanagere and Kodagu districts comprising four agro-climatic zones.

The important zones coming under the University are Central Dry (Zone-4), Southern Transitional (Zone-7), Hilly (Zone-9) and Coastal (Zone-10). The zones depict varied climatic conditions (low to very high rain fall) and varied soil conditions (sandy, red to deep black soils). The most important crops cultivated are arecanut, coconut, coffee, cardamom, pepper, cocoa, nutmeg, mango, banana, sapota, pomegranate, fig, jasmine, chrysanthemum, marigold, tomato, onion, okra, brinjal, paddy, ragi, redgram, groundnut, sunflower, bajra, tobacco, maize and others.

There are nine Agricultural and Horticultural Research Stations under four Zonal Agricultural and Horticultural Research Stations which cater to the needs of the farmers of seven districts under the jurisdiction of UAHS, Shivamogga. The University has great many challenges because of the integration of both Agriculture and Horticulture crops. The cropping position varies from annuals both in Agriculture and Horticulture, in addition to the perennial horticulture crops.

The University is very young and it has 13 All India Coordinate Research Projects (AICRP), 25 and 33 projects from different funding agencies. The University has already released varieties and has several technologies in different crops. It has designed equipments for the benefit of farming community. In addition, it is producing good quality and quantity of seeds, planting materials for distributing to the farmers.

RESEARCH STATION (ZONE WISE AREA OF UAHS FARMS) ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ನಾಲ್ಕು ಕೃಷಿ ವಲಯಗಳ ಹದಿಮೂರು ಸಂಶೋಧನಾ ಕೇಂದ್ರಗಳು ಈ ಕೆಳಗಿನ ವಿವಿಧ ಬೆಳೆಗಳ ಮೇಲೆ ಸಂಶೋಧನೆಗಳನ್ನು ನಡೆಸುತ್ತಿವೆ.

Zone ವಲಯ Name of the Farm ಸಂಶೋಧನಾ ಕೇಂದ್ರದ ಹೆಸರು Year of Establishment ಸ್ಥಾಪನೆಯ ವರ್ಷ Area (ha) ವಿಸ್ತೀರ್ಣ (ಹೆ) Mandate crops ನಿಯೋಜಿತ ಬೆಳೆಗಳು
4 Zonal Agricultural & Horticultural Research Station, Hiriyur ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಹಿರಿಯೂರು 1916 81.50 Coconut, Pomegranate, Castor, Sweet orange & Vegetables ತೆಂಗು, ದಾಳಿಂಬೆ, ಹರಳು, ಮೋಸಂಬಿ ಮತ್ತು ತರಕಾರಿಗಳು
Zonal Agricultural & Horticultural Research Station, Shivamogga ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ 1976 78.00 Arecanut, Tobacco, Paddy ಅಡಿಕೆ, ತಂಬಾಕು ಮತ್ತು ಭತ್ತ
7 Agricultural & Horticultural Research Station, Kathalagere ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕತ್ತಲಗೆರೆ 1975 124.92 Paddy, Sugarcane, Maize & Cotton ಭತ್ತ, ಕಬ್ಬು, ಮೆಕ್ಕೆ ಜೋಳ ಮತ್ತು ಹತ್ತಿ
Agricultural & Horticultural Research Station, Honnavile ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಹೊನ್ನವಿಲೆ 1974 50.20 Arecanut, Coconut, Mango, Paddy & Sugarcane ಅಡಿಕೆ, ತೆಂಗು, ಮಾವು, ಭತ್ತ ಮತ್ತು ಕಬ್ಬು
Agricultural & Horticultural Research Station, Bavikere ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬಾವಿಕೆರೆ 1990 102.95 Paddy, Arecanut, Coconut & Sugarcane ಭತ್ತ, ದ್ವಿದಳ ಧಾನ್ಯಗಳು, ಎಣ್ಣೆಕಾಳು ಬೆಳಗಳು, ಅಡಿಕೆ, ತೆಂಗು, ತಾಳೆ ಎಣ್ಣೆ ಮರ ಮತ್ತು ಕಬ್ಬು
Zonal Agricultural & Horticultural Research Station Mudigere ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಮೂಡಿಗೆರೆ 1957 189.49 Cardamom, Pepper, Sapota, Banana, Paddy ಏಲಕ್ಕಿ, ಕರಿಮೆಣಸು, ಸಪೋಟ, ಬಾಳೆ, ಭತ್ತ
Agricultural & Horticultural Research Station, Kademadkal ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕಡೇಮಡ್ಕಲ್ 2014 20.80 Paddy seed production ಭತ್ತದ ಬೀಜೋತ್ಪಾದನೆ, ಮೀನು ಸಾಕಣೆ
9 Agricultural & Horticultural Research Station, Sringeri ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಶೃಂಗೇರಿ 2009 2.40 Arecanut – YLD ಅಡಿಕೆ - ಹಳದಿ ಎಲೆ ರೋಗ
Agricultural & Horticultural Research Station, Ponnampet ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಪೊನ್ನಂಪೇಟೆ 1951 23.88 Paddy ಭತ್ತ
Agricultural & Horticultural Research Station, Madikeri ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಮಡಿಕೇರಿ 1965 4.12 Paddy ಹೂವಿನ ಬೆಳೆಗಳು ಮತ್ತು ಭತ್ತ
Agricultural & Horticultural Research Station, Thirthahalli ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ತೀರ್ಥಹಳ್ಳಿ 2008 15.25 Arecanut-Koleroga, Minor fruits, Rubber ಅಡಿಕೆ – ಕೊಳೆ ರೋಗ, ಅಪ್ರಧಾನ ಹಣ್ಣುಗಳು ಮತ್ತು ರಬ್ಬರ್
10 Zonal Agricultural & Horticultural Research Station, Brahmavar ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ 1981 139.29 Paddy, Arecanut, Sugarcane, Banana, Pulses, Oil seeds ಭತ್ತ, ಅಡಿಕೆ, ಕಬ್ಬು, ಬಾಳೆ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಸಪೋಟ, ಪಪ್ಪಾಯ
Agricultural & Horticultural Research Station, Ullal ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಉಳ್ಳಾಲ 1953 14.10 Cashew ಗೇರು
Total Total 846.90  

CONTACTಸಂಪರ್ಕಿಸಿ

DIRECTORATE OF RESERCH

ಸಂಶೋಧನಾ ನಿರ್ದೇಶನಾಲಯ

university of agricultural and horticultural sciences,
SHIVAMOGGA, KARNATAKA INDIA
ಕೃಷಿ ಮತ್ತು ತೋಟಕಾರಿಕೆ ವಿಶ್ವವಿದ್ಯಾಲಯ,
ಶಿವಮೊಗ್ಗ, ಕರ್ನಾಟಕ, ಭಾರತ
+91 94808 38956
+91 8182 267013
dr@uahs.edu.in

Correspondence: ಪತ್ರವ್ಯವಹಾರ:
University of Agricultural and Horticultural Sciences ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ
Navile,
SHIVAMOGGA - 577204,
KARNATAKA, INDIA
ನವಿಲೆ,
ಶಿವಮೊಗ್ಗ - 577204,
ಕರ್ನಾಟಕ, ಭಾರತ
Communication: ಸಂವಹನ:
Vice Chancellor ಕುಲಪತಿಗಳ ಕಛೇರಿ   +91 8182 267001,   vcuahss2014@gmail.com
Registrar ಕುಲಸಚಿವರ ಕಛೇರಿ   +91 8182 267011,   registrarshimoga@gmail.com
Director of Research ಸಂಶೋಧನಾ ನಿರ್ದೇಶನಾಲಯ   +91 8182 267013,   druahs@gmail.com
Director of Extension ವಿಸ್ತರಣಾ ನಿರ್ದೇಶನಾಲಯ   +91 8182 267015,   uahsde@gmail.com
Director of Education ಶಿಕ್ಷಣ ನಿರ್ದೇಶನಾಲಯ   +91 8182 267013,   doe.uahs@gmail.com
Director of PG Studies ಸ್ನಾತಕೋತ್ತರ ನಿರ್ದೇಶನಾಲಯ   +91 8182 267012,   deanpgs.uahs@gmail.com
Director of SC/ST Cell ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕ   +91 94808 38207,   dirscstcelluahs@gmail.com
Page Hits : 232895
ಪುಟ ಭೇಟಿ : 232895
Last modified on :
16 November 2021
ಕೊನೆಯ ಬಾರಿ ಮಾರ್ಪಡಿಸಲಾಗಿದೆ :
16 November 2021

Designed, Developed and Maintained by PRABHAT SERVICES ®™© for UAHS® All right Reserved.