Mr. K. G. Chamaraja ಶ್ರೀ. ಕೆ.ಜಿ.ಚಮರಾಜ
B.E (Civil) ಬಿ.ಇ (ಸಿವಿಲ್)
Estate Branch comes under the Administrative section of the University. The Estate Officer is the head of the Estate branch.
The Estate Officer shall have the assistance of Officers and staff namely Executive Engineer (G/P), Assistant Executive Engineer, Assistant Engineer, Junior Engineer and supporting staff which shall be entrusted with the responsibility of preparation of Estimates for new works, maintenance and repair works for residential and non-residential buildings, roads and gardens of the University. works shall be carried out through e- tender as per KTPP rules.
The Stores Purchase Officer and supporting staff, which shall be entrusted with the responsibility of preparation of Estimates maintaining the University Stores inventory of all University property, purchasing through e-tenders for furniture, equipment and supplies as may be required by various Departments.
The Executive Engineer (P) shall scrutiny the estimates; prepare the tender documents and annual programme of works under plan/ non-plan schemes. Submit the progress report and annual progress report and the supervise the original works, maintenance works and development works
The Assistant Executive Engineer shall be in charge of original works, maintenance works and development works at the control of Executive Engineer of concerned division. A E E shall prepare the estimate check measure the work and scrutinize the bills and furnish progress report to the Executive Engineer. The subordinate Assistant Engineer/ Junior Engineer shall inspect and maintain the works in charge.
The Engineering staff shall look after the construction, maintenance and repairs of buildings, roads, gardens, machineries, Vehicles, electrical works and water supply and drainage system and other related works.
ಆಸ್ತಿ ವಿಭಾಗವು ವಿಶ್ವವಿದ್ಯಾಲಯದ ಆಡಳಿತ ವಿಭಾಗದಡಿಯಲ್ಲಿ ಬರುತ್ತದೆ. ಆಸ್ತಿ ಅಧಿಕಾರಿಯು ಆಸ್ತಿ ವಿಭಾಗದ ಮುಖ್ಯಸ್ಥರಾಗಿರುತ್ತಾರೆ.
ಆಸ್ತಿ ಅಧಿಕಾರಿಗಳ ನೆರವಿಗೆ ಬರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳೆಂದರೆ ಕಾರ್ಯಕಾರಿ ಇಂಜಿನಿಯರ್ (ಸಾಮಾನ್ಯ/ಯೋಜನೆ), ಸಹಾಯಕ ಕಾರ್ಯಕಾರಿ ಇಂಜಿನಿಯರ್, ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್ ಮತ್ತು ಬೆಂಬಲಿತ ಸಿಬ್ಬಂದಿಗಳಾಗಿರುತ್ತಾರೆ. ವಿಶ್ವವಿದ್ಯಾಲಯದ ಗಾರ್ಡನ್ಗಳು ಮತ್ತು ರಸ್ತೆಗಳು, ವಸತಿ, ಕಚೇರಿ ಕಟ್ಟಡಗಳು ದುರಸ್ತಿ ಕಾಮಗಾರಿಗಳು ಹಾಗೂ ನಿರ್ವಹಣೆ, ನೂತನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಂದಾಜು ಸಿದ್ಧಪಡಿಸುವ ಜವಾಬ್ದಾರಿಯನ್ನು ಈ ಮೇಲಿನ ಸಿಬ್ಬಂದಿಗಳು ನಿರ್ವಹಿಸಬೇಕಾಗಿರುತ್ತದೆ. ಕೆಟಿಪಿಪಿ ನಿಯಮಗಳ ಪ್ರಕಾರ ಇ-ಟೆಂಡರ್ ಮೂಲಕ ಕಾಮಗಾರಿಗಳನ್ನು ನಡೆಸಲಾಗುತ್ತದೆ.
ದಾಸ್ತಾನು ಖರೀದಿ ಅಧಿಕಾರಿ ಮತ್ತು ಬೆಂಬಲಿತ ಸಿಬ್ಬಂದಿಗಳು ವಿಶ್ವವಿದ್ಯಾಲಯದ ಆಸ್ತಿಗಳ ಪಟ್ಟಿಯನ್ನು ಮತ್ತು ವಿಶ್ವವಿದ್ಯಾಲಯದ ದಾಸ್ತಾನುಗಳ ಸರಕನ್ನು ನಿರ್ವಹಿಸುವ ಹಾಗೂ ಅಂದಾಜುಗಳನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಜೊತೆಗೆ ವಿವಿಧ ವಿಭಾಗಗಳಿಂದ ಬರುವ ಕೋರಿಕೆಯಂತೆ ಪೀಠೋಪಕರಣಗಳು, ಸಲಕರಣೆಗಳು ಹಾಗೂ ಪೂರೈಕೆಯನ್ನು ಇ-ಟೆಂಡರ್ ಮೂಲಕ ಖರೀದಿಸುತ್ತಾರೆ.
ಕಾರ್ಯಕಾರಿ ಇಂಜಿನಿಯರ್ (ಯೋಜನೆ)ರವರು ಅಂದಾಜುಗಳನ್ನು ಪರಿಶೀಲಿಸುವುದು; ಯೋಜನೆ/ಯೋಜನೇತರ ಯೋಜನೆಗಳ ಅಡಿಯಲ್ಲಿ ಕಾಮಗಾರಿಗಳ ಟೆಂಡರ್ ದಾಖಲೆಗಳು ಹಾಗೂ ವಾರ್ಷಿಕ ಕಾರ್ಯಕ್ರಮಗಳನ್ನು ಸಿದ್ಧಪಡಿಸ ಬೇಕಾಗಿರುತ್ತದೆ. ಪ್ರಗತಿ ವರದಿ ಮತ್ತು ವಾರ್ಷಿಕ ಪ್ರಗತಿ ವರದಿಯನ್ನು ಸಲ್ಲಿಸುವುದು, ಮೂಲ ಕಾಮಗಾರಿಗಳು, ಕಾಮಗಾರಿಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ ಮಾಡುವುದಾಗಿರುತ್ತದೆ.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವರು ಸಂಬಂಧಪಟ್ಟ ವಿಭಾಗದ ಕಾರ್ಯಕಾರಿ ಇಂಜಿನಿಯರ್ ನಿಯಂತ್ರಣದಲ್ಲಿ ಮೂಲ ಕಾಮಗಾರಿಗಳು, ಕಾಮಗಾರಿಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಬೇಕಾಗಿರುತ್ತದೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ರವರು ಕಾಮಗಾರಿಯ ಅಂದಾಜಿನ ಮೌಲ್ಯಮಾಪನ ಮಾಡುವಿಕೆ ಮತ್ತು ಬಿಲ್ಲುಗಳನ್ನು ಪರಿಶೀಲನೆ ಹಾಗೂ ಕಾರ್ಯಕಾರಿ ಇಂಜಿನಿಯರ್ ಅವರಿಗೆ ಪ್ರಗತಿ ವರದಿ ಒಪ್ಪಿಸಬೇಕಾಗಿರುತ್ತದೆ. ಇವರ ಅಧೀನದಲ್ಲಿ ಬರುವ ಸಹಾಯಕ ಇಂಜಿನಿಯರ್/ಜೂನಿಯರ್ ಇಂಜಿನಿಯರ್ಗಳು ಕಾಮಗಾರಿಗಳ ಪರಿಶೀಲನೆ ಮತ್ತು ನಿರ್ವಹಣೆಯ ಕಾರ್ಯವನ್ನು ನಿರ್ವಹಿಸಬೇಕಾಗಿರುತ್ತದೆ.
ಕಟ್ಟಡಗಳು, ರಸ್ತೆಗಳು, ಗಾರ್ಡನ್ಗಳು, ಯಂತ್ರೋಪಕರಣಗಳು, ವಾಹನಗಳು, ವಿದ್ಯುತ್ ಕಾಮಗಾರಿಗಳು, ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆ ಹಾಗೂ ಇತರ ಸಂಬಂಧಿತ ಕಾಮಗಾರಿಗಳ ನಿರ್ಮಾಣ, ನಿರ್ವಹಣೆ, ದುರಸ್ತಿಗಳ ಕಾಮಗಾರಿಗಳನ್ನು ಇಂಜಿನಿಯರಿಂಗ್ ಸಿಬ್ಬಂದಿಗಳು ನೋಡಿಕೊಳ್ಳಬೇಕಾಗಿರುತ್ತದೆ.
Government of Karnataka sanctioned 777 acres 07 guntes of land for establishment of new campus for University of Agricultural & Horticultural sciences, Shivamogga at Iruvakki in Sagar taluk vide Government Order No RD-40-L. ES-2012 Bangalore dated 31-01-2015. Further an additional area of 9 acres 36 guntes also allotted for the above purpose.
The development activities of the new campus has been taken up on 166 acres out of 777.07 acres.
The development of main campus and various infrastructural facilities at Iruvakki has been entrusted to Karnataka Housing board by the Government of Karnataka vide G. O 07/2015 dated 17-3-2016. The M O U is also entered between Housing commissioner, Karnataka Housing Board, Bangalore and The Registrar, UAHS Shivamogga on 18-04-2016.
ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ನೂತನ ಆವರಣ ಸ್ಥಾಪಿಸಲು 777 ಎಕರೆ 07 ಗುಂಟೆಗಳನ್ನು ಕರ್ನಾಟಕ ಸರ್ಕಾರವು ಮಂಜೂರು ಮಾಡಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ ಆರ್ಡಿ -40-ಎಲ್.ಇಎಸ್-2012 ಬೆಂಗಳೂರು ದಿನಾಂಕ 31-01-2015. ಈ ಮೇಲಿನ ಉದ್ದೇಶಕ್ಕಾಗಿ 9 ಎಕರೆ 36 ಗುಂಟೆಗಳ ಹೆಚ್ಚುವರಿ ಪ್ರದೇಶವನ್ನು ಕೂಡಾ ನಿಗದಿ ಮಾಡಿರುತ್ತದೆ.
ಈಗಾಗಲೇ 777.07 ಎಕರೆಗಳಲ್ಲಿ 166 ಎಕರೆಯ ಸ್ಥಳದಲ್ಲಿ ನೂತನ ಆವರಣದ ಅಭಿವೃದ್ಧಿ ಚಟುವಟಿಕೆಗಳನ್ನು ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.
ಇರುವಕ್ಕಿಯಲ್ಲಿ ವಿವಿಧ ಮೂಲ ಸೌಕರ್ಯಗಳು ಹಾಗೂ ಮುಖ್ಯ ಆವರಣದ ಅಭಿವೃದ್ಧಿ ಕಾರ್ಯಗಳನ್ನು ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: 07/2015 ದಿನಾಂಕ 17.3.2016 ರಂತೆ ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದೆ. ಈ ಕುರಿತಂತೆ ಆಯುಕ್ತರು, ಕರ್ನಾಟಕ ಗೃಹ ಮಂಡಳಿ ಹಾಗೂ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಕುಲಸಚಿವರೊಂದಿಗೆ ದಿನಾಂಕ 18.04.2016ರಂದು ಒಂಡಂಬಡಿಕೆ ಮಾಡಿಕೊಳ್ಳಲಾಗಿದೆ.
Designed, Developed and Maintained by PRABHAT SERVICES ®™© for UAHS® All right Reserved.