ಈ ದೇವರಾಜು, ಬಸವಲಿಂಗಯ್ಯ ಮತ್ತು ಸುಷ್ಮಾ ಅಶೋಕ ಚೌಗುಲೆ, ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ
ಕಾಳು ಮೆಣಸು ಬಹುವಾರ್ಷಿಕ ಹಬ್ಬುವ ಬಳ್ಳಿ ಈ ಬೆಳೆಯನ್ನು ಇದರ ಕಾಳುಗಳಿಗೋಸ್ಕರ ಕೃಷಿಮಾಡುತ್ತಿದ್ದು, ಹದಮಾಡಿದ ಮೆಣಸಿನ ಕಾಳುಗಳನ್ನು ಪ್ರಮುಖವಾಗಿ ಸಾಂಬಾರು ಪದಾರ್ಥವಾಗಿ ಬಳಸುವುದಲ್ಲದೆ, ಔಷಧಿಗಳ ತಯಾರಿಕೆಯಲ್ಲೂ ಹೆಚ್ಚಿನ ಮಹತ್ವವನ್ನು ಪಡೆದಿದೆ. ಭಾರತ ಕರಿಮೆಣಸು ಉತ್ಪಾದನೆ, ಬಳಕೆ ಹಾಗೂ ರಫ್ತು ಮಾಡುವಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ಅಧಿಕ ಇಳುವರಿ ಮತ್ತು ಉತ್ತಮ ಆದಾಯಕ್ಕಾಗಿ ಕಾಳು ಮೆಣಸಿನ ಬೆಳೆಯಲ್ಲಿ ಸುಧಾರಿತ ತಳಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ.
ಕಾಳು ಮೆಣಸಿನ ಸುಧಾರಿತ ತಳಿಗಳು
- ಕೂರ್ಗ್ ಎಕ್ಸೆಲ್: ಕೂರ್ಗ್ ಎಕ್ಸೆಲ್ ಹೆಚ್ಚು ಇಳುವರಿಯನ್ನು ಕೊಡುವ ಉದ್ದವಾದ ಹೂವಿನ ದಂಡುಗಳನ್ನು ಮತ್ತು ದಪ್ಪ ಕಾಳುಗಳನ್ನು ಹೊಂದಿದೆ.
- ಐಐಎಸ್‌ಆರ್ ಶ್ರೀಕರ: ಕೇರಳ ಮತ್ತು ದಕ್ಷಿಣ ಕರ್ನಾಟಕದ ಎಲ್ಲಾ ಮೆಣಸು ಬೆಳೆಯುವ ಪ್ರದೇಶಗಳಿಗೆ ಸೂಕ್ತವಾಗಿದೆ.
- ಐಐಎಸ್‌ಆರ್ ಸುಭಾಕರ: 1990ರಲ್ಲಿ ಬಿಡುಗಡೆಯಾದ, ಕರಿಮುಂಡಾ ವಂಶಾವಳಿಯಿಂದ ಆಯ್ಕೆಯಾಗಿರುವ (ಕೆಎಸ್-14) ಈ ತಳಿಯು ಮಧ್ಯಮ ಪಕ್ವತೆ ಗುಂಪಿಗೆ ಸೇರಿದ್ದು, 2,677 ಕೆಜಿ ಒಣ ಮೆಣಸು, ಪ್ರತಿ ಹೆಕ್ಟೇ ಇಳುವರಿಯನ್ನು ನೀಡುತ್ತದೆ. ಪ್ರತಿ ಹೆಕ್ಟೇರ್‌ಗೆ ಗರಿಷ್ಟವಾಗಿ 4,200 ಕೆಜಿ ಒಣ ಮೆಣಸು ಪಡೆಯಬಹುದಾಗಿದೆ.
- ಐಐಎಆರ್ ತೇವಂ: ಈ ತಳಿ ಕಾಲು ಕೊಳೆತವನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಎತ್ತರದ ಮತ್ತು ಬಯಲು ಪ್ರದೇಶಗಳಿಗೆ ಸೂಕ್ತವಾಗಿದೆ. ಪ್ರತಿ ಹೆಕ್ಟೇರ್‌ಗೆ ಇದು ಸರಾಸರಿ 2481 ಕೆಜಿ ಒಣಮೆಣಸು ಇಳುವರಿ ಪಡೆಯಬಹುದು.
- ಐಐಎಸ್‌ಆರ್-ಗಿರಿಮುಂಡ: ಮಧ್ಯಮ ಪಕ್ವತೆಯ ಗುಂಪು ಸೇರಿದಂತೆ ಮಳೆಯಾಶ್ರಿತ ಪರಿಸ್ಥಿತಿಗಳಿಗೆ ಶಿಫಾರಸ್ಸು ಮಾಡಲಾಗಿದೆ.
- ಐಐಎಸ್‌ಆರ್-ಮಲಬಾರ್ ಎಕ್ಸೆಲ್: 2004ರಲ್ಲಿ ಬಿಡುಗಡೆಗೊಂಡ ಈ ಸಂಕರ ತಳಿ (ಚೋಳಮುಂಡಿ X ಪನ್ನಿಯೂರ್-1), ಎತ್ತರದ ಪ್ರದೇಶಗಳಿಗೆ ಸೂಕ್ತವಾಗಿದೆ ಮತ್ತು ಒಲಿಯೊರೆಸಿನಲ್ಲಿಯು ಸಮೃದ್ಧವಾಗಿದೆ. ಪ್ರತಿ ಸಾಲಿಗೆ ಸರಾಸರಿ 2.78 ಕೆಜಿ ತಾಜಾ ಮೆಣಸಿನಕಾಯಿ ಮತ್ತು ಪ್ರತಿ ಹೆಕ್ಟೇರ್‌ಗೆ ಸರಾಸರಿ 1440 ಕೆಜಿ ಒಣ ಮೆಣಸು ಇಳುವರಿಯನ್ನು ಪಡೆಯಬಹುದಾಗಿದೆ.
- ಐಐಎಸ್‌ಆರ್-ಶಕ್ತಿ: ಕಾಲು ಕೊಳೆತವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ತಳಿ, ಪ್ರತಿ ಹೆಕ್ಟೇರ್ ಸರಾಸರಿ 2253 ಕೆಜಿ ಒಣ ಮೆಣಸು ಇಳುವರಿಯನ್ನು ನೀಡುತ್ತದೆ.
- ಕರಿಮುಂಡ: ವ್ಯಾಪಕ ಹೊಂದಾಣಿಕೆಯನ್ನು ಹೊಂದಿರುವ ಈ ತಳಿ, ಸ್ಥಿರ ಇಳುವರಿಯನ್ನು ನೀಡುತ್ತದೆ ಮತ್ತು ಕೇರಳದಲ್ಲಿ ಅತ್ಯಂತ ಜನಪ್ರಿಯ ತಳಿಯಾಗಿದೆ. ಇದು ಉತ್ತಮ ಗುಣಮಟ್ಟದ ಮೆಣಸನ್ನು ಉತ್ಪಾದಿಸಿ, ಪ್ರತಿ ಗಿಡಕ್ಕೆ ಸರಾಸರಿ 2.3 ಕೆಜಿ ಇಳುವರಿಯನ್ನು ಪಡೆಯಬಹುದಾಗಿರುತ್ತದೆ.
- ಪಂಚಮಿ: ಈ ತಳಿ, ಹೆಚ್ಚಿನ ಇಳುವರಿಯನ್ನು ನೀಡುತ್ತಿದ್ದು, ಓಲಿಯೊರೆಸಿನ್ ಅಂಶವನ್ನು ಹೆಚ್ಚಾಗಿ ಹೊಂದಿರುವ ಈ ತಳಿ, ತಡವಾಗಿ ಪಕ್ವಗೊಳ್ಳುವ, ವರ್ಷಕ್ಕೆ ಪ್ರತಿ ಹೆಕ್ಟೇರ್‌ಗೆ 1410 ಕೆಜಿ (ಒಣ) ಕಾಳುಗಳನ್ನು ಪಡೆಯಬಹುದು.
- ಪಣಿಯೂರ್ 1: ಮೂರು ದಶಕಗಳ ಹಿಂದೆ ಕೇರಳದ ಪಣಿಯೂ ಮೆಣಸು ಸಂಶೋಧನಾ ಕೇಂದ್ರದಲ್ಲಿ ಉತ್ಪಾದನೆಯಾದ ಪಣಿಯೂರ್ ವಿಶ್ವದ ಮೊದಲ ಸಂಕರ ತಳಿ ಕಾಳುಮೆಣಸಾಗಿದೆ. ಇದು ದೊಡ್ಡ ಹಣ್ಣುಗಳೊಂದಿಗೆ ಉದ್ದವಾದ ಹೂವಿನ ದಂಡುಗಳನ್ನು ಹೊಂದಿದ್ದು, ಭಾರೀ ನೆರಳಿನ ಹೊರತು, ಎಲ್ಲಾ ಮೆಣಸು ಬೆಳೆಯುವ ಪ್ರದೇಶಗಳಿಗೆ ಸೂಕ್ತವಾಗಿದೆ. ಪ್ರತಿ ಹೆಕ್ಟೇರ್‌ಗೆ ಒಣ ಮೆಣಸಿನ ಸರಾಸರಿ ಇಳುವರಿಯು ಸುಮಾರು 1242 ಕೆಜಿ ಯಷ್ಟು ಪಡೆಯಬಹುದು.
- ಪಣಿಯೂರ್ 2: ಇದನ್ನು ಕೇರಳದ ಪಣಿಯೂರ್ ಮೆಣಸು ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ನೆರಳನ್ನು ಸಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲಾ ಮೆಣಸು ಬೆಳೆಯುವ ಪ್ರದೇಶಗಳಿಗೆ ಸೂಕ್ತವಾಗಿದೆ. ಪ್ರತಿ ಹೆಕ್ಟೇರ್ ಒಣ ಮೆಣಸಿನ ಸರಾಸರಿ ಇಳುವರಿಯು ಸುಮಾರು 2570 ಕೆಜಿ ಪಡೆಯಬಹುದು.
- ಪಣಿಯೂರ್ 3: ಇದನ್ನು ಕೇರಳದ ಪಣಿಯೂರ್ ಮೆಣಸು ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ತಡವಾಗಿ ಪಕ್ವವಾಗುವ ತಾಣ ಹೊಂದಿದ್ದು, ಎಲ್ಲಾ ಮೆಣಸು ಬೆಳೆಯುವ ಪ್ರದೇಶಗಳಿಗೆ ಇದು ಸೂಕ್ತವಾಗಿದೆ. ಪ್ರತಿ ಹೆಕ್ಟೇರ್‌ಗೆ ಒಣ ಮೆಣಸಿನ ಸರಾಸರಿ ಇಳುವರಿಯು ಸುಮಾರು 1953 ಕೆಜಿ ಪಡೆಯಬಹುದು.
- ಪಣಿಯೂರ್ 4: ಸ್ಥಿರ ಇಳುವರಿ ಕೊಡುವ ವಿಧವಾಗಿದೆ. ಎಲ್ಲಾ ಮೆಣಸು ಬೆಳೆಯುವ ಪ್ರದೇಶಗಳಿಗೆ ಇದು ಸೂಕ್ತವಾಗಿದೆ. ಪ್ರತಿ ಹೆಕ್ಟೇರ್‌ಗೆ ಒಣ ಮೆಣಸಿನ ಸರಾಸರಿ ಇಳುವರಿಯು ಸುಮಾರು 1277 ಕೆಜಿ ಯಷ್ಟು ನೀಡುತ್ತದೆ.
- ಪಣಿಯೂರ್ 5: ಇದು ಹೆಚ್ಚಿನ ಇಳುವರಿ ಮತ್ತು ನಿಯಮಿತ ಕಾಳುಗಳನ್ನು ಉತ್ಪಾದಿಸುವ ವಿಧವಾಗಿದೆ. ಈ ವಿಧವು ಎಲ್ಲಾ ಮೆಣಸು ಬೆಳೆಯುವ ಪ್ರದೇಶಗಳಿಗೆ ಸೂಕ್ತವಾಗಿದೆ. ಇದು ನೆರಳು ಹಾಗೂ ನರ್ಸರಿ ರೋಗಗಳಿಗೆ ಸಹಿಷ್ಣುವಾಗಿದೆ. ಹೆಕ್ಟೇರ್‌ಗೆ ಇದು ವರ್ಷಕ್ಕೆ 1098 ಕೆಜಿ (ಒಣ) ಕಾಳುಗಳನ್ನು ಪಡೆಯಬಹುದು.
- ಪಣಿಯೂರ್ 6: ಸ್ಥಳೀಯ ತಳಿ ‘ಕರಿಮುಂಡ’ದಿಂದ ಆಯ್ಕೆಯಾಗಿದೆ. ಇದು ಸ್ಥಿರ ಮತ್ತು ನಿಯಮಿತ ಇಳುವರಿಯನ್ನು ನೀಡುತ್ತಿದ್ದು, ಎಲ್ಲಾ ಮೆಣಸು ಬೆಳೆಯುವ ಪ್ರದೇಶಗಳಿಗೆ ಇದು ಸೂಕ್ತವಾಗಿದೆ. ಇದು ವರ್ಷಕ್ಕೆ ಪ್ರತಿ ಹೆಕ್ಟೇರ್‌ಗೆ 2127 ಕೆಜಿ (ಒಣ) ಕಾಳುಗಳನ್ನು ಪಡೆಯಬಹುದು.
- ಪಣಿಯೂರ್ 7: ಒಂದು ಶಕ್ತಿಯುತ ನಿಯಮಿತ ಹಣ್ಣುಗಳನ್ನು ಉತ್ಪಾದಿಸುವ ವಿಧವಾಗಿದೆ. ಎಲ್ಲ ಕರಿಮೆಣಸು ಪ್ರದೇಶಗಳಿಗೆ ಇದು ಸೂಕ್ತವಾಗಿದೆ. ಇದು ವರ್ಷಕ್ಕೆ ಪ್ರತಿ ಹೆಕ್ಟೇರ್‌ಗೆ 1410 ಕೆಜಿ (ಒಣ) ಕಾಳುಗಳನ್ನು ಪಡೆಯಬಹುದು.
- ಪೌರ್ಣಮಿ: ಬೇರು ಗಂಟು ನೆಮಟೋಡ್ ಅನ್ನು ಸಹಿಸಿಕೊಳ್ಳುವ ಈ ಬಳ್ಳಿ, ಹೆಚ್ಚಿನ ಒಲಿಯೊರೆಸಿನ್ ಅಂಶವನ್ನು ಹೊಂದಿದ್ದು, ಮಧ್ಯಮ ಹಾಗೂ ಹೆಚ್ಚು ಇಳುವರಿ ನೀಡುವ ವಿಧವಾಗಿದೆ. ಇದು. ಇದು ವರ್ಷಕ್ಕೆ ಪ್ರತಿ ಹೆಕ್ಟೇರ್‌ಗೆ 2333 ಕೆಜಿ (ಒಣ) ಕಾಳುಗಳನ್ನು ಪಡೆಯಬಹುದು.








