- ಈ ಸಹನಾ ಎನ್. ಬಣಕಾರ, ಮತ್ತು ಶ್ರೀಶೈಲ್ ಸೋನ್ಯಾಳ', 'ಸಾವಯವ ಸಂಶೋಧನಾ ಕೇಂದ್ರ, ಶಿವಮೊಗ್ಗ 'ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆ (ಅಡಿಕೆ), ಶಿವಮೊಗ್ಗ
ಇಂಗು ತೆಂಗು ಇದ್ದರೆ ಮಂಗಮ್ಮ ಅಡುಗೇನು ಚೆಂದ ಅನ್ನೋ ಗಾದೆ ಇದೆ. ಭಾರತೀಯ ಅಡುಗೆಯಲ್ಲಿ ಇಂಗಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಅಡುಗೆಯ ರುಚಿಯನ್ನು ಹೆಚ್ಚಿಸುವಲ್ಲಿ ಇಂಗಿನ ಪಾತ್ರ ಬಹಳ ದೊಡ್ಡದು. ಭಾರತೀಯ ಪಾಕಪದ್ಧತಿಯಲ್ಲಿ ಇಂಗು ಅತ್ಯಗತ್ಯ ಮಸಾಲೆ ಎನ್ನಿಸಿದೆ. ಇಂಗನ್ನು ಅಫ್ಘಾನಿಸ್ತಾನ ಮತ್ತು ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತದೆ. ಆರೋಗ್ಯಕ್ಕೂ ಇಂಗು ಬಹಳ ಪ್ರಯೋಜನಕಾರಿಯಾಗಿದೆ. ಅನೇಕ ಮನೆ ಮದ್ದುಗಳಿಗೆ ಇಂಗಿನ ಬಳಕೆ ಮಾಡಲಾಗುತ್ತದೆ. ಹಾಗಾಗಿ ಕೃಷಿ ವಿಜ್ಞಾನಿಗಳು ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಇಂಗು ಬೆಳೆಯುವ ಕುರಿತು ಸಂಶೋಧನೆ ನಡೆಸುತ್ತಿದ್ದರು. ಹಿಮಾಲಯನ್ ಇನ್ಸಿಟ್ಯೂಟ್ ಆಫ್ ಬಯೋಟೆಕ್ನಾಲಜಿ (ಐಎಚ್‌ಬಿಟಿ), ಪಾಲಂಪುರದ ವಿಜ್ಞಾನಿಗಳು ಅಪಘಾನಿಸ್ತಾನ ಹಾಗೂ ಇರಾನ್‌ನಿಂದ ಇಂಗಿನ ಬೀಜಗಳನ್ನು ಭಾರತಕ್ಕೆ ತಂದು ಪ್ರಯೋಗ ನಡೆಸಿದ್ದಾರೆ.
ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಇಂಗನ್ನು ಬಳಕೆ ಮಾಡುವ ದೇಶವಾಗಿದೆ. ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು 1500 ಟನ್ ಇಂಗು ಬಳಕೆಯಾಗುತ್ತದೆ. ಇಷ್ಟು ಪ್ರಮಾಣದ ಇಂಗಿನ ಬೆಲೆ 940 ಕೋಟಿಗಿಂತಲೂ ಹೆಚ್ಚಾಗಿದೆ. ಭಾರತವು ಅಪಘಾನಿಸ್ತಾನದಿಂದ ಪ್ರತಿಶತ 90, ಇರಾನ್‌ನಿಂದ ಪ್ರತಿಶತ 2 ಮತ್ತು ಉಜೇಕಿಸ್ತಾನದಿಂದ ಪ್ರತಿಶತ 8 ರಷ್ಟು ಇಂಗನ್ನು ಆಮದು ಮಾಡಿಕೊಳ್ಳುತ್ತಿದೆ.
ಅಫ್ಘಾನಿಸ್ತಾನ ಹಾಗೂ ಇರಾನ್‌ನಿಂದ ಇಂಗಿನ ಗಿಡದ ಬೀಜಗಳನ್ನು ತಂದು ಹಿಮಾಚಲ ಪ್ರದೇಶದ ಕೆಲವು ರೈತರಿಗೆ ಇಂಗಿನ ಕೃಷಿಯ ಬಗ್ಗೆ ತರಬೇತಿ ನೀಡಿ, ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. 2020ರಲ್ಲಿ ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಸುಮಾರು 11000 එයි ಎತ್ತರದಲ್ಲಿ ಇಂಗಿನ ಗಿಡಗಳನ್ನು ನಾಟಿಮಾಡಲಾಯ್ತು. ಸುಮಾರು 3 ವರ್ಷಗಳ ಸತತ ಪರಿಶ್ರಮದ ನಂತರ ಐಎಚ್ ಬಿಟಿ ವಿಜ್ಞಾನಿಗಳು ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯಲ್ಲಿ ಇಂಗಿನ ಗಿಡಗಳನ್ನು ಬೆಳೆಯುವಲ್ಲಿ ಸಫಲರಾಗಿದ್ದಾರೆ. ಈಗ ಇಂಗಿನ ಗಿಡಗಳು ಚೆನ್ನಾಗಿ ಬೆಳೆದಿದ್ದು ಮುಂಬರುವ ಎರಡು ವರ್ಷಗಳಲ್ಲಿ ಬೆಳೆ ಕೈ ಸೇರಲಿದೆ. ಹಿಮಾಚಲ ಪ್ರದೇಶ ಮಾತ್ರವಲ್ಲದೆ ಉತ್ತರಾಖಂಡ, ಲಡಾಕ್, ಕಿನ್ನೆರ್ ಹಾಗೂ ಜಾಂಝೇಲಿಯ ಗುಡ್ಡಗಾಡು ಪ್ರದೇಶಗಳು ಇಂಗಿನ ಕೃಷಿಗೆ ಸೂಕ್ತ ಸ್ಥಳ ಎಂದು ಗುರುತಿಸಲಾಗಿದೆ. ಈಗಾಗಲೇ ಸುಮಾರು 7 ಹೆಕ್ಟೇರ್ ಪ್ರದೇಶಗಳಲ್ಲಿ 47 ಸಾವಿರ ಇಂಗಿನ ಗಿಡಗಳನ್ನು ಬೆಳೆಸಲಾಗಿದೆ.
ಇಂಗಿನ ಕೃಷಿಗೆ 20 ರಿಂದ 30 ಡಿಗ್ರಿ ತಾಪಮಾನದ ಅಗತ್ಯವಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಇಂಗಿಗೆ 30 ರಿಂದ 40 ಸಾವಿರ ರೂಪಾಯಿಗಳ ದರವಿದೆ. ಇಂಗಿನ ಗಿಡವನ್ನು ಬೆಳೆಸಿದ 5 ವರ್ಷದಲ್ಲಿ ಇಂಗು ಮತ್ತು ಅದರ ಬೀಜವನ್ನು ಪಡೆಯಬಹುದಾಗಿದೆ. ಒಂದು ಗಿಡದಿಂದ ಸುಮಾರು ಅರ್ಧ ಕೆಜಿ ಇಂಗನ್ನು ಪಡೆಯಬಹುದು. ಇಂಗಿನ ಕೃಷಿಯಿಂದ ಬೆಳೆಗಾರರಿಗೂ ಒಳ್ಳೆಯ ಲಾಭವಾಗಲಿದೆ. ಇಂಗು ಬೇಸಾಯ ಮಾಡಿ ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಗಳಿಸಬಹುದು. ಇದನ್ನು ತಂಪು ಪ್ರದೇಶದಲ್ಲಿ ಬೇಸಾಯ ಮಾಡುತ್ತಾರೆ. ಇಂಗು ಕೃಷಿಗೆ ಬಸಿಗಾಲುವೆ ಸಹಿತ ಮರಳು ಮಿಶ್ರಿತ ಮಣ್ಣು ಸೂಕ್ತ. ಭಾರತೀಯ ಹವಾಮಾನದ ಪ್ರಕಾರ ಆಗಸ್ಟ್‌ನಿಂದ ಸೆಪ್ಟೆಂಬರ್ ನಡುವಿನ ಸಮಯವು ಅದರ ನೆಡುವಿಕೆಗೆ ಉತ್ತಮವಾಗಿದೆ. ಪ್ರಪಂಚದಲ್ಲಿ ಸುಮಾರು 130 ವಿಧದ ಇಂಗಿನ ತಳಿಗಳು ಕಂಡುಬರುತ್ತವೆ. ಇದರಲ್ಲಿ 3 ರಿಂದ 4 ಜಾತಿಗಳು ಭಾರತದ ಹವಾಮಾನಕ್ಕೆ ಅನುಗುಣವಾಗಿ ಸೂಕ್ತವಾದ ಬೆಳೆಗಳಾಗಿವೆ.
ಈ ಸಸ್ಯದ ಬೇರಿನಿಂದ ತೆಗೆದ ರಸದಿಂದ ಇಂಗು ತಯಾರಿಸಲಾಗುತ್ತದೆ. ಬೇರುಗಳಿಂದ ರಸವನ್ನು ತೆಗೆದ ನಂತರ ಇಂಗು ತಯಾರಿಸುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ತಿನ್ನಬಹುದಾದ ಗಮ್ ಮತ್ತು ಪಿಷ್ಟವನ್ನು ಬೆರೆಸಿ ಇದನ್ನು ಸಣ್ಣ ತುಂಡುಗಳಾಗಿ ತಯಾರಿಸಲಾಗುತ್ತದೆ. ಅಸಾಫೋಟಿಡಾ ಫೆನ್ನೆಲ್ ಜಾತಿಯ ಇರಾನ್ ಮೂಲದ 1 ರಿಂದ 1.5 ಮೀಟರ್ ಎತ್ತರ ಸಸ್ಯವನ್ನು ಬಳಸುತ್ತಾರೆ. ಈ ಸಸ್ಯಗಳು ಮೆಡಿಟರೇನಿಯನ್ ಪ್ರದೇಶದಿಂದ ಮಧ್ಯ ಏಷ್ಯಾದವರೆಗೆ ಬೆಳೆಯುತ್ತವೆ. ಭಾರತದಲ್ಲಿ ಇದು ಕಾಶ್ಮೀರ ಮತ್ತು ಪಂಜಾಬ್ ಭಾಗಗಳಲ್ಲಿ ಹೆಚ್ಚು ಬೆಳೆಯುತ್ತಾರೆ. ತುಂಬೆ ಸೊಪ್ಪು ತೋರಣವಲ್ಲ