ಕನ್ನಡ English
logo

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ

University of Agricultural and Horticultural Sciences, Shivamogga

ವಿಶ್ವವಿದ್ಯಾಲಯದ ಉಗಮ ಮತ್ತು ಇತಿಹಾಸ

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ (ಯುಎಹೆಚ್‍ಎಸ್) ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದ ಮೊಟ್ಟಮೊದಲ ಕೃಷಿ ಮತ್ತು ತೋಟಗಾರಿಕೆ ಎರಡೂ ವಿಜ್ಞಾನಗಳ ವಿಷಯಗಳನ್ನೊಳಗೊಂಡ ಸಮಗ್ರ ವಿಶ್ವವಿದ್ಯಾಲಯವಾಗಿದೆ. ಕರ್ನಾಟಕ ಕಾಯ್ದೆ ಸಂಖ್ಯೆ 38, 2012 ಅಧಿಸೂಚನೆ ಸಂಖ್ಯೆ ಸಂ.ವ್ಯ. ಶಾ. ಇಲಾಖೆ, 19 ಶಾಸನ, 2012, ದಿನಾಂಕ 21-09-2012 ರಂದು ಕರ್ನಾಟಕ ವಿಶೇಷ ಗೆಜೆಟ್‍ನ ಭಾಗ IV-J ಸಂಖ್ಯೆ 656 ರಲ್ಲಿ ಪ್ರಕಟಿಸಲಾಗಿದ್ದು, ವಿಶ್ವವಿದ್ಯಾಲಯವು 2013 ಏಪ್ರಿಲ್ 01 ರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

ಕೃಷಿ ಸಮಾಜದ ಸುಸ್ಥಿರ ಅಭಿವೃದ್ಧಿಗಾಗಿ ನಮ್ಮೊಂದಿಗೆ ಕೈಜೋಡಿಸಿ

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ(ಯುಎಹೆಚ್‍ಎಸ್) ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಕೃಷಿ ಮತ್ತು ತೋಟಗಾರಿಕೆ ಎರಡೂ ವಿಜ್ಞಾನಗಳ ವಿಷಯಗಳನ್ನೊಳಗೊಂಡ ಸಮಗ್ರ ವಿಶ್ವವಿದ್ಯಾಲಯವಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಈ ಎರಡೂ ವಿಜ್ಞಾನಗಳು ಇದರ ವ್ಯಾಪ್ತಿಗೆ ಬರುತ್ತವೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಕೇಂದ್ರಸ್ಥಾನವಾಗಿದ್ದು, ಶಿವಮೊಗ್ಗದಿಂದ ರಾಜ್ಯದ ರಾಜಧಾನಿ ಬೆಂಗಳೂರಿಗೆ ರಸ್ತೆ(ಎನ್‍ಹೆಚ್-206) ಮತ್ತು ರೈಲು ಮಾರ್ಗವು 270 ಕಿ.ಮೀ. ಅಂತರದಲ್ಲಿದೆ. ಈ ಕೇಂದ್ರಸ್ಥಾನದ ಸುತ್ತಮುತ್ತಲು ಜೋಗದ ಜಲಪಾತ, ಆಗುಂಬೆ, ಭದ್ರಾ ಮತ್ತು ಕುದುರೆ ಮುಖ ಮೀಸಲು ಅರಣ್ಯಗಳು ಇತ್ಯಾದಿಗಳು ಪ್ರಸಿದ್ಧ ಪ್ರವಾಸಿ ತಾಣಗಳಿವೆ.

ತಾತ್ವಿಕತೆ

ಸುಸ್ಥಿರತೆಯೊಂದಿಗೆ ಅಭಿವೃದ್ಧಿಯ ನೂತನ ಮಾರ್ಗಗಳನ್ನು ಸೃಷ್ಟಿಸುವ ವಿಕಸನದ ಪ್ರಕ್ರಿಯೆ

ದೂರದೃಷ್ಟಿ

ಪ್ರಬಲವಾದ ಜ್ಞಾನದ ಮೂಲವನ್ನು ಒದಗಿಸುವ ಮೂಲಕ ತಂತ್ರಜ್ಞರನ್ನು ಹಾಗೂ ತಂತ್ರಜ್ಞಾನಗಳು ಪ್ರಸರಿಸಲು ಅಭಿವೃದ್ಧಿಪಡಿಸುವುದು. ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಕ್ಷೇತ್ರದಲ್ಲಿ ಪ್ರಯೋಗ ಮತ್ತು ಪರಿಣಿತಿಯನ್ನು ಅನ್ವೇಷಿಸಲು ನಾವು ಬದ್ಧರಾಗಿದ್ದೇವೆ. ನಾವು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಥ ತಂತ್ರಜ್ಞಾನದ ಆಧಾರದ ಮೇಲೆ ಬಳಸಿಕೊಳ್ಳುವುದಕ್ಕಾಗಿ ಸಾಮಾಜಿಕ ಸಾಂಸ್ಕೃತಿಕ ಚಿಂತನೆಯ, ಮೌಲ್ಯಾಧಾರಿತ ಚಿಂತನೆಯನ್ನು ಪ್ರರೇಪಿಸುವುದು.

ಸಂಸ್ಥೆಯ ಧ್ಯೇಯ

ಸೃಜನಾತ್ಮಕ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸುವುದರ ಮೂಲಕ ಸುಸ್ಥಿರವಾದ ಕೃಷಿ ಪರಿಸರವನ್ನು ಬೆಳೆಸಲು, ನಮ್ಮ ಫಲಾನುಭವಿಗಳಿಗೆ ಪರಸ್ಪರ ಕಲಿಕೆ ಮತ್ತು ಪರಿಶೋಧನೆಗಾಗಿ ಕೈ ಜೋಡಿಸುವುದು, ನಮ್ಮ ಆಹಾರ ಮತ್ತು ಜೀವನೋಪಾಯದ ಭದ್ರತೆಯನ್ನು ಬಲಪಡಿಸಲು ಹೊಸ ಆಯಾಮಗಳು ಮತ್ತು ತಂತ್ರಜ್ಞಾನಗಳನ್ನು ವಿನೂತನಗೊಳಿಸುವುದು.

ಉದ್ದೇಶಗಳು

  1. ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಸಂಬಂಧಿತ ವಿಜ್ಞಾನಗಳ ವಿವಿಧ ವಿಭಾಗಗಳಲ್ಲಿ ನುರಿತ ಮಾನವ ಸಂಪನ್ಮೂಲವನ್ನು ಜಾಗೃತಗೊಳಿಸಲು ಉನ್ನತ ಶಿಕ್ಷಣ ನೀಡುವುದು.

  2. ಕೃಷಿ, ತೋಟಗಾರಿಕೆ, ಅರಣ್ಯ ಮತ್ತು ಸಂಬಂಧಿತ ಇತರ ವಿಜ್ಞಾನಗಳಲ್ಲಿ ಸಂಶೋಧನೆ ಕೈಗೊಳ್ಳುವುದರ ಮೂಲಕ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುವುದು.

  3. ವಿಶೇಷವಾಗಿ ರಾಜ್ಯದ ಗ್ರಾಮೀಣ ಜನರಿಗೆ ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ವಿಸ್ತರಣಾ ಶಿಕ್ಷಣದ ಮೂಲಕ ತಲುಪಿಸುವುದು.

  4. ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಮತ್ತು ಕೃಷಿ ಆಧಾರಿತ ಕೈಗಾರಿಕೆ/ಉದ್ದಿಮೆಗಳೊಂದಿಗೆ ಸಮನ್ವಯತೆಯನ್ನು ಸಾಧಿಸುವುದು.

uahs uahs
dean_pgs

Dr. M. Manjunatha M.Sc. (Agri.), Ph.D,Post Doc.(U.K.)

Dr. M. Manjunatha M.Sc. (Agri.), Ph.D,Post Doc.(U.K.)

Director of Education, UAHS, Shivamogga, Karnataka, INDIA ಶಿಕ್ಷಣ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ,ಶಿವಮೊಗ್ಗ, ಕರ್ನಾಟಕ, ಭಾರತ

doe.uahs@gmail.com
+91 94808 38960
+91 8182 267013

ಶಿಕ್ಷಣ ನಿರ್ದೇಶನಾಲಯದ ಬಗ್ಗೆ

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿನ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಸೇರಿದಂತೆ ಸಮಗ್ರ ಕೃಷಿ ಸನ್ನಿವೇಶಗಳನ್ನು ಒಳಗೊಂಡಿರುತ್ತದೆ. ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಕ್ಷೇತ್ರಗಳಲ್ಲಿ ನಡೆಸಲಾಗುತ್ತಿರುವ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಬಲವಾದ ಹಿನ್ನೆಲೆಯನ್ನು ಒದಗಿಸುತ್ತಿದೆ ಮತ್ತು ಭವಿಷ್ಯದಲ್ಲಿ ಈ ವಿಶ್ವವಿದ್ಯಾಲಯದೊಂದಿಗೆ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ಶಿಕ್ಷಣದ ಉದ್ದೇಶಿತ ಸಮರ್ಥನೆ ಒದಗಿಸುತ್ತದೆ.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದ ಮೊಟ್ಟಮೊದಲ ಕೃಷಿ ಮತ್ತು ತೋಟಗಾರಿಕೆ ಎರಡೂ ವಿಜ್ಞಾನಗಳ ವಿಷಯಗಳನ್ನೊಳಗೊಂಡ ಸಮಗ್ರ ವಿಶ್ವವಿದ್ಯಾಲಯವಾಗಿರುತ್ತದೆ. ಕರ್ನಾಟಕ ಕಾಯ್ದೆ ಸಂಖ್ಯೆ 38, 2012 ಅಧಿಸೂಚನೆ ಸಂಖ್ಯೆ ಸಂ.ವ್ಯ. ಶಾ. ಇಲಾಖೆ, 19 ಶಾಸನ, 2012, ದಿನಾಂಕ 21-09-2012 ರಂದು ಕರ್ನಾಟಕ ವಿಶೇಷ ಗೆಜೆಟ್‍ನ ಭಾಗ IV–ಎ ಸಂಖ್ಯೆ 656 ರಲ್ಲಿ ಪ್ರಕಟಿಸಲಾಗಿದ್ದು, ವಿಶ್ವವಿದ್ಯಾಲಯವು 2013 ಏಪ್ರಿಲ್ 01 ರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗಳಾದ ಸ್ನಾತಕ-ಸ್ನಾತಕೋತ್ತರದಲ್ಲಿ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಕೃಷಿಯ ಐದು ವಿಭಾಗಗಳಲ್ಲಿ ಪಿಎಚ್.ಡಿ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಅಲ್ಲದೆ ಮೆಟ್ರಿಕ್ಯುಲೇಶನ್ ನಂತರದ ಎರಡು ವರ್ಷದ ಡಿಪ್ಲೊಮಾ(ಕೃಷಿ)ಕಾರ್ಯಕ್ರಮವು ಸಹ ಒಳಗೊಂಡಿರುತ್ತದೆ. ವಿಶ್ವವಿದ್ಯಾಲಯವು ಹೊಸದಾಗಿ ರೂಪುಗೊಂಡಿದ್ದರೂ (2013), ಬಹುತೇಕ 20-25 ವರ್ಷಗಳ ಹಿಂದೆಯೇ ಮಹಾವಿದ್ಯಾಲಯಗಳು ಸ್ಥಾಪನೆಯಾಗಿದ್ದವು. ಇವುಗಳು ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ.

ಈ ಮಹಾವಿದ್ಯಾಲಯಗಳು ಉತ್ತಮ ಬೆಂಬಲದೊಂದಿಗೆ ಅಭಿವೃದ್ಧಿ ಹೊಂದಿದ್ದು, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳಲ್ಲಿ 100 ವರ್ಷಗಳ ಹಿಂದೆಯೇ ಒಂದು ಸಂಶೋಧನಾ ಕೇಂದ್ರವು ಸ್ಥಾಪನೆಯಾಗಿದ್ದು ಹಾಗೂ ಇತರೆ ಹಲವು ಕೇಂದ್ರಗಳು 50-60 ವರ್ಷಗಳ ಹಿಂದೆಯೇ ಸ್ಥಾಪಿಸಲಟ್ಟಿವೆ.

ವಿಶ್ವವಿದ್ಯಾಲಯವು 2017ರಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನಿಂದ ಮಾನ್ಯತೆ ಪಡೆದಿರುತ್ತದೆ. ಅಲ್ಲದೆ ಉನ್ನತ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದ್ದು, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಸ್ಥಾಪನೆಯಾದ ಮೊಟ್ಟಮೊದಲ ವರ್ಷದಲ್ಲಿಯೇ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನವರು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 45 ಜೂನಿಯರ್ ರಿಸರ್ಚ್ ಫೆಲೋಶಿಪ್‍ಗಳನ್ನು ರಾಷ್ಟ್ರಮಟ್ಟದಲ್ಲಿ ಮೂರನೇ ಅತ್ಯಧಿಕ ಸಂಖ್ಯೆಯಲ್ಲಿ ಪಡೆದುಕೊಂಡಿದೆ. ಈ ವಿಶ್ವವಿದ್ಯಾಲಯದಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಒಟ್ಟು 120 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಅದರಲ್ಲಿ ಸುಮಾರು 60 ವಿದ್ಯಾರ್ಥಿಗಳು ಫೆಲೋಶಿಪ್ ಪಡೆಯದೇ(ನಾನ್‍ಜೆಆರ್‍ಎಫ್) ಉತ್ತೀರ್ಣರಾಗಿದ್ದು, 23 ವಿದ್ಯಾರ್ಥಿಗಳು ಫೆಲೋಶಿಪ್‍ನೊಂದಿಗೆ ಜೆಆರ್‍ಎಫ್ ಅನ್ನು ಪಡೆದಿದ್ದಾರೆ.

2016-17ನೇ ಸಾಲಿನಲ್ಲ್ಲಿ, ಈ ವಿಶ್ವವಿದ್ಯಾಲಯದ 64 ವಿದ್ಯಾರ್ಥಿಗಳಿಗೆ ಐಸಿಎಆರ್‍ನ ಜೆಆರ್‍ಎಫ್/ ನಾನ್ ಜೆಆರ್‍ಎಫ್ ಮತ್ತು ಎಸ್‍ಆರ್‍ಎಫ್ ದೊರೆತಿದೆ. ಇವುಗಳಲ್ಲಿ ಐಸಿಎಆರ್ ನಿಂದ 28 ಜೆಆರ್‍ಎಫ್, 35 ನಾನ್ ಜೆಆರ್‍ಎಫ್ ಹಾಗೂ ಒಂದು ನಾನ್ ಎಸ್‍ಆರ್‍ಎಫ್ ಪಡೆದಿದ್ದಾರೆ. ಶ್ರೀ ನಿಖಿಲ್, ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು ಇವರು ಅಖಿಲ ಭಾರತ ಮಟ್ಟದಲ್ಲಿ ಮೊದಲನೆ ರ್ಯಾಂಕ್ ನೊಂದಿಗೆ ಜೆಆರ್‍ಎಫ್ ಉತ್ತೀರ್ಣರಾಗಿದ್ದಾರೆ. ಶ್ರೀ ಗಿರೀಶ್ ಬಿ.ಆರ್. ಕೃಷಿ ಮಹಾವಿದ್ಯಾಲಯ, ಶಿವಮೊಗ್ಗದ ವಿದ್ಯಾರ್ಥಿ 16ನೇ ಸ್ಥಾನದೊಂದಿಗೆ ಎಸ್‍ಆರ್‍ಎಫ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಶ್ವವಿದ್ಯಾಲಯವು ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಡಿ 9 ಜೆಆರ್‍ಎಫ್‍ಗಳನ್ನು ಪಡೆದಿದ್ದಕ್ಕೆ ರಾಷ್ಟ್ರಮಟ್ಟದಲ್ಲಿ ಎರಡನೇ ಬಹುಮಾನವನ್ನು ಪಡೆದಿರುತ್ತದೆ.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಶೈಕ್ಷಣಿಕ ವರ್ಷ 2017-18ನೇ ಸಾಲಿನಲ್ಲಿ, ಒಟ್ಟು 374 ವಿದ್ಯಾರ್ಥಿಗಳು ಕೆಇಎ, ಐಸಿಎಆರ್, ಎನ್‍ಆರ್‍ಐ ಮತ್ತು ಲ್ಯಾಟರಲ್ ಎಂಟ್ರಿಗಳ ಮೂಲಕ ವಿವಿಧ ಪದವಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದಿದ್ದಾರೆ. ಬ್ರಹ್ಮಾವರ ಮತ್ತು ಕತ್ತಲಗೆರೆಗಳಲ್ಲಿ ಡಿಪ್ಲೊಮಾ ಮಹಾವಿದ್ಯಾಲಯಗಳಿಗೆ 70 ವಿದ್ಯಾರ್ಥಿಗಳು ಕೃಷಿಯಲ್ಲಿ ಡಿಪ್ಲೊಮಾಕ್ಕೆ ಪ್ರವೇಶ ಪಡೆದಿದ್ದಾರೆ.

ವಿಶ್ವವಿದ್ಯಾಲಯವು ಸೆಮಿಸ್ಟರ್ ವ್ಯವಸ್ಥೆಯಲ್ಲಿ ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನದ ಎರಡು ವ್ಯವಸ್ಥೆಯನ್ನು ಹೊಂದಿರುವ ಶಿಕ್ಷಣವನ್ನು ನೀಡುತ್ತ್ತಿದೆ. ಅಲ್ಪ ಮಾರ್ಪಾಡುಗಳೊಂದಿಗೆ ಐಸಿಎಆರ್‍ ನ ಐದನೇ ಡೀನ್ಸ್ ಕಮಿಟಿ ಶಿಫಾರಸುಗಳ ಪ್ರಕಾರ ವಿಶ್ವವಿದ್ಯಾಲಯವು ಕೋರ್ಸುಗಳನ್ನು ಮತ್ತು ಪಠ್ಯಕ್ರಮವನ್ನು ಅಳವಡಿಸಿಕೊಂಡಿರುತ್ತದೆ. ಪ್ರಾಯೋಗಿಕ ಕಲಿಕೆ ಮತ್ತು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಗಳ ಮೂಲಕ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಉದ್ಯೋಗಿಗಳಾಗುವ ಬದಲಾಗಿ ಕೃಷಿ ಉದ್ಯಮಿಗಳಾಗಲು ನೆರವು ಮಾಡುವ ಗುರಿಯನ್ನು ಸಹ ಇದು ಹೊಂದಿದೆ.

ಮಹಾವಿದ್ಯಾಲಯಗಳ ಆವರಣಗಳು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಗೊಂಡಿದ್ದು, ನೈಜ ಸನ್ನಿವೇಶದಲ್ಲಿ ಕೃಷಿ ಶಿಕ್ಷಣವನ್ನು ಒದಗಿಸುತ್ತಿವೆ. ಇಂತಹ ಸನ್ನಿವೇಶದಿಂದ ಹೊರಬರುತ್ತಿರುವ ವಿದ್ಯಾರ್ಥಿಗಳು ನಗರೀಕೃತರಾಗದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಆಸಕ್ತಿವಹಿಸುತ್ತಿದ್ದಾರೆ.

ಇಲ್ಲಿ ವ್ಯಕ್ತಿತ್ವ ವಿಕಾಸ ಮತ್ತು ವೃತ್ತಿ ಮಾರ್ಗದರ್ಶನಗಳ ಕಾರ್ಯಕ್ರಮಗಳನ್ನು ಸಾಕಷ್ಟು ನಡೆಸಲಾಗುತ್ತಿದೆ. ಉತ್ತಮ ಉದ್ಯೋಗಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ನೆರವು, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಮಾಹಿತಿ ಕೇಂದ್ರಗಳನ್ನು ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಳ ಮಟ್ಟದಲ್ಲಿ ಸ್ಥಾಪಿಸಲಾಗಿದೆ.

ಶಿಕ್ಷಣ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುವ ವಿಶ್ವವಿದ್ಯಾಲಯ ಪರೀಕ್ಷಾ ಕೇಂದ್ರವು ಅಂತಿಮ ಬಾಹ್ಯ ಪರೀಕ್ಷೆಗಳನ್ನು ನಡೆಸುವುದು ಮತ್ತು ವಿಶ್ವವಿದ್ಯಾಲಯದಲ್ಲಿನ ಎಲ್ಲಾ ಸ್ನಾತಕ ಪದವೀಧರರ ಶೈಕ್ಷಣಿಕ ಫಲಿತಾಂಶಗಳನ್ನು ಪ್ರಕಟಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

ಶಿಕ್ಷಣ ನಿರ್ದೇಶನಾಲಯದಡಿಯಲ್ಲಿ ವಿಶ್ವವಿದ್ಯಾಲಯದ ಸಂವಹನ ಕೇಂದ್ರ ಮತ್ತು ಕನ್ನಡ ಅಧ್ಯಯನ ವಿಭಾಗವು ಕಾರ್ಯನಿರ್ವಹಿಸುತ್ತಿವೆ.

ವಿಶ್ವವಿದ್ಯಾಲಯ ಸಂವಹನ ಕೇಂದ್ರವು (ಯುಸಿಸಿ) ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆಡಳಿತ, ಸಂಶೋಧನೆ, ಬೋಧನೆ, ಹಾಗೂ ವಿಸ್ತರಣೆ ವಿಭಾಗಗಳ ಪ್ರಕಟಣೆಗಳನ್ನು ಹೊರತರುತ್ತಿದೆ. ಶ್ರವ್ಯ-ದೃಶ್ಯಗಳ ನೆರವು, ಗ್ರಾಫಿಕ್, ಆರ್ಟ್‍ವರ್ಕ್, ಫೋಟೋಗ್ರಾಫಿಕ್ ಮತ್ತು ಮುದ್ರಣ ಕಾರ್ಯಗಳಲ್ಲಿ ನೆರವು ನೀಡುವ ಸಂಸ್ಥೆಯಾಗಿದೆ. ಮುದ್ರಣ ಕಾರ್ಯಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಂದ ಕೋರಿಕೆ ಬಂದಲ್ಲಿ ನಮ್ಮ ಕೇಂದ್ರದಿಂದ ನೆರವು ನೀಡುತ್ತಿದೆ. ಸಂವಹನ ಕೇಂದ್ರವು ವಿಶ್ವವಿದ್ಯಾಲಯದ ವೈಜ್ಞಾನಿಕ ನಿಯತಕಾಲಿಕಗಳು, ನಿಯತಕಾಲಿಕಗಳು ಮತ್ತು ನ್ಯೂಸ್‍ಲೆಟರ್‍ಗಳನ್ನು ಹೊರತರುತ್ತಿದೆ. ಜೊತೆಗೆ ವಾರ್ಷಿಕ ವರದಿಯ ಮುದ್ರಣ ಮತ್ತು ಘಟಿಕೋತ್ಸವದ ಭಾಷಣ, ವಿಶ್ವವಿದ್ಯಾಲಯ ಕ್ಯಾಲೆಂಡರ್ ಮುಂತಾದ ಪ್ರಕಟಣೆಗಳಿಗೆ ನೆರವು ನೀಡುತ್ತಿದೆ.

ಕನ್ನಡ ಅಧ್ಯಯನ ವಿಭಾಗವು ರೈತರಿಗೆ ಮತ್ತು ವಿಸ್ತರಣಾ ಕಾರ್ಯಕರ್ತರ ಅನುಕೂಲಕ್ಕಾಗಿ ಕನ್ನಡದಲ್ಲಿ ಪುಸ್ತಕಗಳು, ವರದಿಗಳು, ಸುದ್ದಿಪತ್ರಗಳು ಮತ್ತು ನಿಯತಕಾಲಿಕಗಳನ್ನು ಹೊರತರುವ ಜವಾಬ್ದಾರಿಯನ್ನು ಹೊಂದಿದೆ. ಇಂಗ್ಲಿಷ್‍ನಲ್ಲಿ ಲಭ್ಯವಿರುವ ಇತ್ತೀಚಿನ ವೈಜ್ಞಾನಿಕ ಹಾಗೂ ಭಾಗಶಃ-ವೈಜ್ಞಾನಿಕ ಸಾಹಿತ್ಯವನ್ನು ಪರಿಣಾಮಕಾರಿಯಾಗಿ ಕನ್ನಡಕ್ಕೆ ಭಾಷಾಂತರ ಮಾಡುವ ಕಾರ್ಯವನ್ನು ಸಹ ನಿರ್ವಹಿಸುತ್ತಿದೆ.

About Directorate of Education

The jurisdictional area of the University of Agricultural and Horticultural Sciences, Shivamogga is endowed with integrated farming situations involving Agriculture, Horticulture, Animal Husbandry, Fisheries and Forestry. This provides a strong backdrop for ongoing educational programmes in the fields of Agriculture, Horticulture and Forestry in the University at present and a justification for the proposed integration of veterinary and fisheries education also with this university in future.

University of Agricultural and Horticultural Sciences, Shivamogga is the first Integrated University in the state of Karnataka which has both agricultural and horticultural sciences under its purview. The University is functioning from 21st September, 2012 through a Special Gazette notification of Karnataka Act No. 38 of 2012 and has come into independent existence with effect from 1st April, 2013. It has the operational jurisdiction in seven districts viz. Shivamogga, Davanagere, Chikkamagaluru, Udupi, Dakshina Kannada, Kodagu and Chitradurga.

The Educational Programme of the university consists of Undergraduate and Master’s programmes in Agriculture, Horticulture and Forestry and Ph.D. programmes in five branches of Agriculture. It also consists of post matriculate two years Diploma (Agri.) programme. Though the University is newly formed (2013), the constituent Colleges were established almost 20-25 years ago are very well developed and have a reckoning at State and National levels.

These Colleges are well supported by well developed Agricultural and Horticultural Research Stations. One of the research station was established 100 years back and many others about 50-60 years ago.

The University is accredited by the ICAR during 2017. High quality education is provided, it is a fact that during its very first year of existence of the University of Agricultural and Horticultural Sciences, Shivamogga it has bagged third highest numbers of Junior Research Fellows in the country out of 45 Universities in the competitive examination conducted by ICAR, New Delhi. Twenty three Students have obtained JRF with fellowship, while nearly 60 students have cleared JRF without fellowship out of 120 Students appeared for the competitive examination from this university.

During 2016-17, about 64 students of this University have got ICAR JRF/Non JRF and SRF. Out of which 28 have got ICAR JRF, 35 Non JRF and 1 Non SRF. Mr. Nikhil H.N., student from College of Horticulture, Hiriyur has passed JRF examination with 1st rank at all India level. Mr. Girish B.R. student from College of Agriculture, Shivamogga has passed SRF examination with 16th rank.

The University was awarded 2nd prize for getting 9 JRF’s under Horticulture and Foerstry disciplins.

During the Academic year 2017-18, a total of 374 students have gained entrance to the different degree programmes of UAHS, Shivamogga through KEA, ICAR, NRI and Lateral Entries. For Diploma in Agriculture 70 students are admitted to the Diploma Colleges in Brahmavar and Kathalagere.

The University imparts education in Semester system having both internal and external evaluation. The University has adopted course curricula and syllabi as per ICAR Fifth Dean’s Committee recommendations with slight modifications. High emphasis is given to practical education through Experimental Learning and Rural Work Experience Programmes aiming at helping the graduates to become agricultural entrepreneurs rather than job seekers.

The College campuses are situated in rural areas providing agricultural education in real situation. Students coming out of this situation do not tend to get urbanized and feel comfortable to work in rural areas.

Adequate programmes on personality development and career guidance are also conducted. Career guidance and placement cells are established at University as well as college levels to help the students to secure good jobs.

The University Examination Centre which is responsible for conducting final external examinations and announcing of results for all the undergraduate courses in the university is functioning under this Directorate.

University Communication Centre and Kannada Studies Section are functioning under the Directorate of Education,

University Communication Centre (UCC) is a co-ordination body to help the UAHS Administration, Research, Teaching and Extension wings in respect of publications, Audio-visual Aids, Graphic, Artwork, Photographic and Printing work. This service of printing work is also provided by the Centre to various Departments of the University on request. The Communication Centre will bring out scientific journals, Periodicals and Newsletters of the University besides printing of annual report and convocation speech, University Calendar and the like.

Kannada Studies Section has the responsibility of bringing out books, bulletins and journals in Kannada for the benefit of the farmers and extension workers. It will also arrange for effective translation of latest scientific and semi-scientific literature available in English to Kannada language.

DR

Dr. B. R. Gurumurthy M.Sc.(Agri.), Ph.D

Director of Research, UAHS, Shivamogga - 577204, Karnataka, India ಸಂಶೋಧನಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ - 577204
druahs@gmail.com
+91-94808 38955
+91 8182 267013

ಸಂಶೋಧನಾ ನಿರ್ದೇಶಕರ ಸಂದೇಶ

ಸಂಶೋಧನಾ ನಿರ್ದೇಶನಾಲಯವು ನೇರವಾಗಿ ಕುಲಪತಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇವರಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ ಮತ್ತು ಚಿತ್ರದುರ್ಗ ಈ ಏಳು ಜಿಲ್ಲೆಗಳಲ್ಲಿ ಪಾಲ್ಗೊಳ್ಳುವಿಕೆಯ ಮೂಲಕ ಸಂಶೋಧನೆ, ಬೀಜೋತ್ಪಾದನೆ ಮತ್ತು ಬಿತ್ತನೆ ಸಾಮಗ್ರಿಗಳನ್ನು ಒದಗಿಸುವಲ್ಲಿ ಸಹಕರಿಸುತ್ತಿದೆ. ರಾಜ್ಯದ ಕೃಷಿ-ಹವಾಮಾನ ವಲಯಗಳಲ್ಲಿ ಕೇಂದ್ರ ಒಣ ಪ್ರದೇಶ ವಲಯ (4), ದಕ್ಷಿಣ ಉಷ್ಣವಲಯ (7), ಬೆಟ್ಟ ಪ್ರದೇಶ ವಲಯ (9) ಮತ್ತು ಕರಾವಳಿ ವಲಯ (10)ಪ್ರದೇಶಗಳನ್ನು ಒಳಗೊಂಡಿರುತ್ತದೆ. ಈ ಪ್ರದೇಶಗಳಲ್ಲಿ ಮಳೆಯು 650 ಮಿ.ಮೀ. ನಿಂದ 4,000 ಮಿ.ಮೀ. ವರೆಗೆ ಬೀಳುತ್ತದೆ. ವಿಶ್ವವಿದ್ಯಾಲಯವು ನಾಲ್ಕು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳನ್ನು ಹೊಂದಿದ್ದು ಮತ್ತು ಒಂಭತ್ತು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳ ಒಳಗೊಂಡು, ಎಲ್ಲಾ ಹವಾಮಾನ ಪರಿಸ್ಥಿತಿಗಳನ್ನು ಪ್ರತಿನಿಧಿಸುತ್ತವೆ. ವಿವಿಧ ವಲಯಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಉದಾಹರಣೆಗೆ ರಾಗಿ, ಕಡಲೆಕಾಯಿ, ಎಳ್ಳು, ತೊಗರಿ, ತಿಂಗಳ ಹುರಳಿ, ಹರಳು, ಮೆಕ್ಕೆ ಜೋಳ, ಹತ್ತಿ, ಭತ್ತ ಇತ್ಯಾದಿ. ಈ ಭಾಗದಲ್ಲಿ ಬೆಳೆಯುವ ಪ್ರಮುಖ ತೋಟಗಾರಿಕೆ ಬೆಳೆಗಳೆಂದರೆ ದಾಳಿಂಬೆ, ಪಪ್ಪಾಯ, ಬಾಳೆ, ಅಂಜೂರದ ಹಣ್ಣು, ತೆಂಗು, ಗೋಡಂಬಿ, ಬೆಂಡೆ, ಟೊಮೆಟೊ, ಬದನೆ, ಈರುಳ್ಳಿ, ಪಡವಲಕಾಯಿಗಳು, ಮೆಣಸಿನಕಾಯಿ, ಏಲಕ್ಕಿ, ಶುಂಠಿ, ಸೊಪ್ಪು, ಸುಗಂಧರಾಜ, ಚಂಡುಹೂ, ಕನಕಾಂಬರ ಇತ್ಯಾದಿಗಳು. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಉತ್ಪಾದಕತೆಯನ್ನು ಹೆಚ್ಚಿಸಲು ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಕುರಿತಾದ ಸಂಶೋಧನೆ ನಡೆಸುವುದು ವಿಶ್ವವಿದ್ಯಾಲಯದ ಉದ್ದೇಶವಾಗಿದೆ. ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ ಮತ್ತು ಕೊಡಗು ಜಿಲ್ಲೆಗಳಲ್ಲಿ ನಾಲ್ಕು ಕೃಷಿ ಹವಾಮಾನ ವಲಯಗಳನ್ನು ಹೊಂದಿರುತ್ತದೆ.

ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪ್ರಮುಖ ವಲಯಗಳೆಂದರೆ ಕೇಂದ್ರ ಒಣ(ವಲಯ-4), ದಕ್ಷಿಣದ ಉಷ್ಣವಲಯ (ವಲಯ-7), ಬೆಟ್ಟಪ್ರದೇಶ (ವಲಯ-9) ಮತ್ತು ಕರಾವಳಿ (ವಲಯ-10). ಈ ವಲಯಗಳು ವೈವಿಧ್ಯಮಯ ಕೃಷಿ ಹವಾಮಾನ ಪರಿಸ್ಥಿತಿಗಳನ್ನು (ಕಡಿಮೆ ಮಳೆಯಿಂದ ಅತಿ ಹೆಚ್ಚು ಮಳೆ ಬೀಳುವಿಕೆ) ಮತ್ತು ವಿವಿಧ ಮಣ್ಣಿನ ಪರಿಸ್ಥಿತಿಗಳನ್ನು (ಮರಳು, ಕೆಂಪು ಬಣ್ಣದ ಆಳವಾದ ಕಪ್ಪು ಮಣ್ಣು) ಒಳಗೊಂಡಿದೆ. ಶೇಂಗಾ, ತೆಂಗು, ಕಾಫಿ, ಏಲಕ್ಕಿ, ಮೆಣಸು, ಕೋಕೋ, ಜಾಯಿಕಾಯಿ, ಮಾವು, ಬಾಳೆ, ಸಪೊಟಾ, ದಾಳಿಂಬೆ, ಅಂಜೂರದ ಹಣ್ಣು, ಮಲ್ಲಿಗೆ, ಸೇವಂತಿಗೆ, ಚೆಂಡುಹೂ, ಟೊಮೆಟೊ, ಈರುಳ್ಳಿ, ಬೆಂಡೆ, ಬದನೆ, ಭತ್ತ, ರಾಗಿ, ನೆಲಗಡಲೆ, ಸೂರ್ಯಕಾಂತಿ, ಸಜ್ಜೆ, ತಂಬಾಕು, ಮೆಕ್ಕೆಜೋಳ ಮತ್ತು ಇತರೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ನಾಲ್ಕು ವಲಯದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳಡಿಯಲ್ಲಿ ಒಂಭತ್ತು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳಿವೆ. ಇವು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಯಡಿಯಲ್ಲಿ ಬರುವ ಏಳು ಜಿಲ್ಲೆಗಳ ರೈತರ ಅಗತ್ಯತೆಗಳನ್ನು ಪೂರೈಸುತ್ತವೆ. ಕೃಷಿ ಮತ್ತು ತೋಟಗಾರಿಕೆ ಸಮಗ್ರ ಬೆಳೆಗಳ ಕಾರಣದಿಂದಾಗಿ ಈ ವಿಶ್ವವಿದ್ಯಾಲಯವು ಇತರ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದೆ. ತೋಟಗಾರಿಕೆ ಬೆಳೆಗಳಲ್ಲಿ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳ ಜೊತೆಗೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ವಾರ್ಷಿಕವಾಗಿ ವೈವಿಧ್ಯಮಯ ಬೆಳೆಗಳನ್ನು ಸಹ ಬೆಳೆಯಲಾಗುತ್ತಿದೆ.

ವಿಶ್ವವಿದ್ಯಾಲಯವು ಇತ್ತೀಗಷ್ಟೇ ಬೆಳೆಯುತ್ತಿರುವ ಸಂಸ್ಥೆಯಾಗಿದ್ದು, ಈಗಾಗಲೇ 13 ಅಖಿಲ ಭಾರತ ಸಮನ್ವಯ ಸಂಶೋಧನಾ ಪ್ರಾಯೋಜನೆ(ಎಐಸಿಆರ್‍ಪಿ), ವಿವಿಧ ಹಣಕಾಸು ಸಂಸ್ಥೆಗಳ ನೆರವಿನಿಂದ 25 ಹಾಗೂ 33 ಪ್ರಾಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ವಿಶ್ವವಿದ್ಯಾಲಯವು ವಿವಿಧ ಬೆಳೆಗಳಲ್ಲಿ ಹಲವು ತಂತ್ರಜ್ಞಾನಗಳನ್ನು ಹಾಗೂ ತಳಿಗಳನ್ನು ಬಿಡುಗಡೆಗೊಳಿಸಿದೆ. ರೈತ ಸಮುದಾಯಕ್ಕೆ ಅನುಕೂಲವಾಗುವಂತೆ ಉಪಕರಣಗಳನ್ನು ವಿನ್ಯಾಸಗೊಳಿಸಲಾಗಿದೆ. ರೈತರಿಗೆ ಉತ್ತಮ ಗುಣಮಟ್ಟದ ಮತ್ತು ಪ್ರಮಾಣದ ಬೀಜಗಳು ಹಾಗೂ ಬಿತ್ತನೆ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.

Message from the Director of Research

The Directorate of Research is functioning directly under the Vice Chancellor, University of Agricultural and Horticultural Sciences, Shivamogga. It is coordinating the research, seed production and planting material in the participatory approach of the seven districts namely Shivamogga, Chikkmagaluru, Udupi, Dakshina Kannada, Kodagu, Davanagere and Chitradurga. It is covering Central Dry (4), Southern Transitional (7), Hilly (9) and coastal (10) zones of the agro-climate of the state. The rainfall varies from 650 mm to 4,000 mm. The University has four Zonal Agricultural and Horticultural Research Stations and nine Agricultural and Horticultural Research Stations representing all the climatic conditions. Varied crop are grown in different zones, such as Ragi, Groundnut, Sesamum, Redgram, Field bean, Castor, Maize, Cotton, Paddy, etc. The important horticulture crops cultivated are Pomegranate, Papaya, Banana, Fig, Areca nut, Coconut, Cashew, Okra, Tomato, Brinjal, Onion, Gourds, Chillies, Cardamom, Ginger, Chrysanthemum, Tuberose, Marigold, Crossandra etc. The University of Agricultural and Horticultural Sciences, Shivamogga is functioning under tripartite system on Teaching, Research and Extension areas. The mission of University is to conduct research on agriculture and horticulture crops to increase the productivity. The University has seven districts under its jurisdiction namely Shivamogga, Chikkamagalur, Chitradurga, Dakshina Kannada, Udupi, Davanagere and Kodagu districts comprising four agro-climatic zones.

The important zones coming under the University are Central Dry (Zone-4), Southern Transitional (Zone-7), Hilly (Zone-9) and Coastal (Zone-10). The zones depict varied climatic conditions (low to very high rain fall) and varied soil conditions (sandy, red to deep black soils). The most important crops cultivated are arecanut, coconut, coffee, cardamom, pepper, cocoa, nutmeg, mango, banana, sapota, pomegranate, fig, jasmine, chrysanthemum, marigold, tomato, onion, okra, brinjal, paddy, ragi, redgram, groundnut, sunflower, bajra, tobacco, maize and others.

There are nine Agricultural and Horticultural Research Stations under four Zonal Agricultural and Horticultural Research Stations which cater to the needs of the farmers of seven districts under the jurisdiction of UAHS, Shivamogga. The University has great many challenges because of the integration of both Agriculture and Horticulture crops. The cropping position varies from annuals both in Agriculture and Horticulture, in addition to the perennial horticulture crops.

The University is very young and it has 13 All India Coordinate Research Projects (AICRP), 25 and 33 projects from different funding agencies. The University has already released varieties and has several technologies in different crops. It has designed equipments for the benefit of farming community. In addition, it is producing good quality and quantity of seeds, planting materials for distributing to the farmers.

DE

Dr. T. H. Gowda M.Sc.(Agri.), Ph.D, M.F.(USA), PGDAEM

Director of Extension, UAHS, Shivamogga

uahsde@gmail.com gowdath@gmail.com
+91 94808 38957
+91 8182 267015

Message from the Director of Extension

The Directorate of Extension of the University of Agricultural and Horticultural Sciences, Shivamogga has a statutory role to play with regard to extension. Extension service is a vehicle, which carries scientific agricultural technology interventions developed at the Research Stations to the farm, for the overall benefit of the farming community. This noble activity facilitates in bridging the identified technological gaps existing with the farmers. The ultimate goal of this important function of the University is to enhance the sustainable net income of the farmer, by taking all the enterprises on the farm into consideration, integrating them and treating the whole farm as one unit.

This major function of extension is accomplished through dissemination of farm information, training of farmers and extension functionaries, educating the farmers through field activities such as demonstrations, field visits, field days, farm advisory service etc. To carry out these activities, four Krishi Vignana Kendras located at Shivamogga, Hiriyur, Brahmavar and Mudigere, Two Extension Education Units at situated at Kattalagere and Madikeri.The Extension Units at working under the jurisdiction of the University of Agricultural and Horticultural Sciences, Shivamogga.

The farming community can avail the services of the units of the Directorate of Extension to get the solutions to their farming problems and to increase their economic status.

ವಿಸ್ತರಣಾ ನಿರ್ದೇಶಕರ ಸಂದೇಶ

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯವು, ವಿಸ್ತರಣೆಗೆ ಸಂಬಂಧಿಸಿದಂತೆ ಶಾಸನಬದ್ಧವಾದ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ. ವಿಶ್ವವಿದ್ಯಾಲಯದ ಮೂರು ಮುಖ್ಯ ಕಾರ್ಯಚಟುವಟಿಕೆಗಳಲ್ಲಿ ಒಂದಾದ ಇದು ಕೃಷಿ, ತೋಟಗಾರಿಕೆ, ಅರಣ್ಯ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ವರ್ಗಾವಣೆ ಮಾಡುವುದಾಗಿರುತ್ತದೆ. ರೈತ ಸಮುದಾಯಕ್ಕೆ ವಿಸ್ತರಣಾ ಚಟುವಟಿಕೆಗಳ ಧ್ಯೇಯವಾಗಿರುವ ಸಂಶೋಧನಾ ಫಲಿತಾಂಶಗಳನ್ನು ಪ್ರಸಾರ ಮಾಡುವುದಾಗಿದೆ. ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯವು ವಿಸ್ತೃತ ಶೈಕ್ಷಣಿಕ ಚಟುವಟಿಕೆಗಳಲ್ಲಿ ನಿರ್ದೇಶನ ಹಾಗೂ ನಾಯಕತ್ವವನ್ನು ವಹಿಸುವ ನೋಡಲ್ ಸಂಸ್ಥೆಯಾಗಿದೆ.

ವಿಸ್ತರಣೆ’ ಸೇವಾ ವಾಹನವಿದ್ದಂತೆ, ಕೃಷಿ ಸಮುದಾಯದ ಒಟ್ಟಾರೆ ಪ್ರಯೋಜನಕ್ಕಾಗಿ ಕೃಷಿ ಕ್ಷೇತ್ರಕ್ಕೆ ಸಂಶೋಧನಾ ಕೇಂದ್ರಗಳಲ್ಲಿ ಅಭಿವೃದ್ಧಿಪಡಿಸಿದ ವೈಜ್ಞಾನಿಕ ಕೃಷಿ ತಂತ್ರಜ್ಞಾನದ ವರ್ಗಾವಣೆಗೆ ಇದು ಮಧ್ಯಸ್ಥಿಕೆಯನ್ನು ವಹಿಸುತ್ತದೆ. ಇಂತಹ ಉದಾತ್ತ ಚಟುವಟಿಕೆಯ