ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ ಯೋಜನೆ: ಮೀನುಗಾರಿಕೆಗೆ ಮತ್ತೊಂದು ಗರಿ

Fisheries scheme
ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ ಯೋಜನೆ: ಮೀನುಗಾರಿಕೆಗೆ ಮತ್ತೊಂದು ಗರಿ

ಭಾರತವು ಶ್ರೀಮಂತ ಮತ್ತು ವೈವಿಧ್ಯಮಯ ಮೀನುಗಾರಿಕೆ ಸಂಪನ್ಮೂಲಗಳನ್ನು ಹೊಂದಿದೆ. ಸಾಂಪ್ರದಾಯಿಕವಾಗಿ ಲಕ್ಷಾಂತರ ಜನರ ಜೀವನೋಪಾಯವನ್ನು ಬೆಂಬಲಿಸುವ ವಲಯವಾಗಿದ್ದು, ವೈವಿಧ್ಯಮಯ ಮೀನು ಪ್ರಭೇದಗಳಿಂದ ಕೂಡಿದೆ. ಭಾರತೀಯ ಮೀನುಗಾರಿಕೆ ವಲಯವನ್ನು ಜೀವನೋಪಾಯ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವ ಕೇಂದ್ರವಾಗಿದ್ದು, ಪೋಷಣೆ ಮತ್ತು ಆಹಾರ ಭದ್ರತೆಯನ್ನು ಖಾತರಿಪಡಿಸುವ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಮೂಲಕ ರಾಷ್ಟ್ರದ ಆರ್ಥಿಕತೆಗೆ ಕೊಡುಗೆ ನೀಡುವ ಸೂರ್ಯೋದಯ ವಲಯಎಂದು ಪರಿಗಣಿಸಲಾಗಿದೆ.

ಭಾರತೀಯ ಮೀನುಗಾರಿಕೆ ವಲಯವು ಹಂತ ಹಂತವಾಗಿ ಬೆಳೆಯುತ್ತಿದ್ದು, ಕ್ರಮೇಣವಾಗಿ ಬೆಳವಣಿಗೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಪ್ರಸ್ತುತ, ಭಾರತವು ಮೀನು ಉತ್ಪಾದನೆಯಲ್ಲಿ ಶೇ. 8ರಷ್ಟು ಜಾಗತಿಕ ಪಾಲನ್ನು ಹೊಂದಿರುವ ಎರಡನೇ ಅತಿಡ್ಡ ದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ. ಇದು ಜಲಚರ ಸಾಕಣೆ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ಸಮುದ್ರ ಮೀನುಗಾರಿಕೆಯಲ್ಲಿ 3ನೇ ಸ್ಥಾನದಲ್ಲಿದೆ ಹಾಗೂ ಸಿಗಡಿ ಉತ್ಪಾದಿಸುವ ಹಾಗೂ ರಫ್ತು ಮಾಡುವ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ.

2015ರಿಂದ, ಮೀನುಗಾರಿಕೆ ಕ್ಷೇತ್ರದಲ್ಲಿ ಹೂಡಿಕೆಯು ಹೆಚ್ಚಾಗಿದ್ದು, ಇದು ಒಟ್ಟಾರೆಯಾಗಿ ಶೇ. 38,572 ಕೋಟಿ ರೂ.ಗಳ ಗರಿಷ್ಠ ಹೂಡಿಕೆಯಾಗಿದೆ. ನೀಲಿ ಕ್ರಾಂತಿ ಯೋಜನೆ, ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್.ಐ.ಡಿ.ಎಫ್.), ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿ.ಎಂ.ಎಮ್.ಎಸ್.ವೈ) ಮತ್ತು ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ ಯೋಜನೆ (ಪಿ.ಎಂ.-ಎಮ್.ಕೆ.ಎಸ್.ಎಸ್.ವೈ.) ಮುಂತಾದ ವಿವಿಧ ಯೋಜನೆಗಳು ಮತ್ತು ಉಪಕ್ರಮಗಳ ಮೂಲಕ ಈ ವಲಯದಲ್ಲಿ ಹೂಡಿಕೆಯನ್ನು ಮಾಡಲಾಗಿದೆ.

ಪಿ.ಎಂ-ಎಮ್.ಕೆ.ಎಸ್.ಎಸ್.ವೈ ಒಂದು ಪರಿಚಯ:

ಕೇಂದ್ರ ಸಚಿವ ಸಂಪುಟವು ಫೆಬ್ರವರಿ 8, 2024 ರಂದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ (ಪಿಎಮ್‌ಎಮ್‌ಎಸ್‌ವೈ) ಅಡಿಯಲ್ಲಿ ಕೇಂದ್ರ ವಲಯದ ಉಪ-ಯೋಜನೆಯಾದ ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ-ಯೋಜನೆ (ಪಿ.ಎಂ.-ಎಮ್.ಕೆ.ಎಸ್.ಎಸ್.ವೈ.) ಅನ್ನು 2023-24 ಹಣಕಾಸು ವರ್ಷದಿಂದ 2026-27 ಹಣಕಾಸು ವರ್ಷಕ್ಕೆ ನಾಲ್ಕು ವರ್ಷಗಳ ಅವಧಿಗೆ ಅನುಮೋದಿಸಿರುತ್ತದೆ. ಪಿ.ಎಂ.-ಎಮ್.ಕೆ.ಎಸ್.ಎಸ್.ವೈ.ಯ ಪ್ರಯೋಜನಗಳನ್ನು ಭಾರತೀಯ ನಾಗರಿಕರಿಗೆ ವಿಸ್ತರಿಸಲಾಗಿದೆ.

ಪಿ.ಎಂ.-ಎಮ್.ಕೆ.ಎಸ್.ಎಸ್.ವೈ.ಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂದಾಜು ಮೊತ್ತದೊಂದಿಗೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ರೂ. 6000 ಕೋಟಿ ವೆಚ್ಚದಲ್ಲಿ ಪಿ.ಎಂ.-ಎಮ್.ಕೆ.ಎಸ್.ಎಸ್.ವೈ. ನಿಗದಿಪಡಿಸಿರುತ್ತದೆ. ತಾಂತ್ರಿಕ ಮಧ್ಯಸ್ಥಿಕೆಯ ಮೂಲಕ ಈ ವಲಯದ ಅಂತರ್ಗತ ದೌರ್ಬಲ್ಯಗಳನ್ನು ಪರಿಹರಿಸಲು ಉದ್ದೇಶಿಸಲಾಗಿದೆ. ಮೀನುಗಾರಿಕೆ ವಲಯದ ಪರಿವರ್ತನೆಯನ್ನು ಬೆಂಬಲಿಸಲು ಸಂಸ್ಥಾರೂಪದ ಸುಧಾರಣೆಗಳನ್ನು ತರುವುದು ಮತ್ತು ದೀರ್ಘಕಾಲದವರೆಗೆ ಕೊಂಡೊಯ್ಯುವುದು ಇದರ ಆಶಯವಾಗಿದೆ.

ಪಿ.ಎಂ.-ಎಮ್.ಕೆ.ಎಸ್.ಎಸ್.ವೈ. ಗುರಿಗಳು ಮತ್ತು ಉದ್ದೇಶಗಳು
  • ಸುಧಾರಿತ ಸೇವಾ ವಿಸ್ತರಣೆಗಾಗಿ ರಾಷ್ಟ್ರೀಯ ಮೀನುಗಾರಿಕೆ ಡಿಜಿಟಲ್ ವೇದಿಕೆ (ಎನ್‌ಎಫ್‌ಡಿಪಿ) ಅಡಿಯಲ್ಲಿ ಕೆಲಸ ಆಧಾರದ ಮೇಲೆ ಡಿಜಿಟಲ್ ಗುರುತುಗಳನ್ನು ರಚಿಸುವ ಮೂಲಕ ಅಸಂಘಟಿತ ಮೀನುಗಾರಿಕೆ ವಲಯವನ್ನು ಕ್ರಮೇಣ ಔಪಚಾರಿಕಗೊಳಿಸುವುದು.
  • ಮೀನು ಕೃಷಿಕರು, ಮೀನುಗಾರರು ಹಾಗೂ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಕಾರ್ಯಾಚರಿತ ಬಂಡವಾಳ ಸೇರಿದಂತೆ ಸಾಂಸ್ಥಿಕ ಹಣಕಾಸು ಸೌಲಭ್ಯ ಒದಗಿಸುವುದು.
  • ಜಲಚರ ಸಾಕಣೆ ವಿಮೆಯನ್ನು ಖರೀದಿಸುವ ಜಲಚರ ರೈತರಿಗೆ ಒಂದು ಬೆಳೆ ಚಕ್ರಕ್ಕೆ ಒಂದು ಬಾರಿ ಪ್ರೋತ್ಸಾಹ ಧನಒದಗಿಸುವುದು.
  • ಉದ್ಯೋಗಗಳ ಸೃಷ್ಟಿ ಮತ್ತು ನಿರ್ವಹಣೆ ಸೇರಿದಂತೆ ಮೀನುಗಾರಿಕೆ ವಲಯದ ಮೌಲ್ಯ ಸರಪಳಿ ದಕ್ಷತೆಯನ್ನು ಸುಧಾರಿಸಲು ಕಾರ್ಯಕ್ಷಮತೆ ಮತ್ತು ಅನುದಾನಗಳ ಮೂಲಕ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಸೂಕ್ಷ್ಮ ಉದ್ಯಮಗಳನ್ನು ಪ್ರೋತ್ಸಾಹಿಸುವುದು.
  • ಮೀನುಗಾರಿಕೆ ಮತ್ತು ಜಲಚರ ಸಾಕಣೆ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಕಾರ್ಯಕ್ಷಮತೆ ಅನುದಾನಗಳ ಮೂಲಕ ಪ್ರೋತ್ಸಾಹಿಸುವುದು. ಮೀನುಗಾರಿಕೆ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟದ ಭರವಸೆ ವ್ಯವಸ್ಥೆಗಳ ಅಳವಡಿಕೆ ಹಾಗೂ ವಿಸ್ತರಣೆಗಾಗಿ, ಉದ್ಯೋಗಗಳ ಸೃಷ್ಟಿ ಮತ್ತು ನಿರ್ವಹಣೆ ಸೇರಿದಂತೆ ಇತರ ಕಾರ್ಯಗಳಿಗೆ ಒತ್ತು ನೀಡುವುದು. ಮೀನುಗಾರಿಕೆ ಮೌಲ್ಯ ಸರಪಳಿಗಳ ವಿಕೇಂದ್ರೀಕರಣ ಮತ್ತು ಬಲವರ್ಧನೆ.
ರಾಷ್ಟ್ರೀಯ ಮೀನುಗಾರಿಕೆ ಡಿಜಿಟಲ್ ವೇದಿಕೆ (ಎನ್.ಎಫ್.ಡಿ.ಪಿ.)

ರಾಷ್ಟ್ರೀಯ ಮೀನುಗಾರಿಕೆ ಡಿಜಿಟಲ್ ವೇದಿಕೆ ಎನ್‌ಎಫ್‌ಡಿಪಿ ಮೀನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಸಚಿವಾಲಯ ಮತ್ತು ಭಾರತ ಸರ್ಕಾರದ ಪರಿವರ್ತನೆಯ ಉಪಕ್ರಮವಾಗಿದೆ. ಮೀನುಗಾರಿಕೆಯ ಮೌಲ್ಯ ಸರಪಳಿಯಲ್ಲಿ ಎಲ್ಲಾ ಪಾಲುದಾರರಿಗೆ ಕೆಲಸದ ಆಧಾರಿತದ ಮೇಲೆ ಗುರುತಿಸಿ ನೋಂದಾಯಿಸಿಕೊಳ್ಳುವ ಮೂಲಕ ದತ್ತಸಂಚಯವನ್ನು ಸೃಷ್ಟಿಸುವುದು. ಇದರ ಮೂಲಕ ಮೀನುಗಾರಿಕೆ ಮತ್ತು ಜಲಚರ ಸಾಕಣೆ ವಲಯವನ್ನು ಔಪಚಾರಿಕಗೊಳಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಎನ್.ಎಫ್.ಡಿ. ಪಿ.ಯು ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಸರ್ಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಇದು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಎನ್.ಎಫ್.ಡಿ.ಪಿ. ಮೂಲಕ ಪಡೆಯಬಹುದಾದ ಪಿ.ಎಂ.-ಎಮ್.ಕೆ.ಎಸ್.ಎಸ್.ವೈ. ಪ್ರಯೋಜನಗಳೆಂದರೆ, ನೋಂದಣಿ, ಸಾಲ ಸೌಲಭ್ಯ, ಜಲಚರ ಸಾಕಣೆ ವಿಮಾ ಪ್ರೋತ್ಸಾಹಕಗಳು, ಕಾರ್ಯಕ್ಷಮತೆ ಅನುದಾನಗಳು, ಪತ್ತೆಹಚ್ಚುವಿಕೆ ವ್ಯವಸ್ಥೆಗಳು ಮತ್ತು ಆರ್ಥಿಕ ಪ್ರೋತ್ಸಾಹಕ ವಿತರಣೆ. ನೇರ ಲಾಭ ವರ್ಗಾವಣೆ (ಡಿಬಿಟಿ), ಇ-ಹರಾಜು, ಮಾರ್ಕೆಟಿಂಗ್, ಇ-ಕಾಮರ್ಸ್, ಬಿ2ಬಿ ಮಾರುಕಟ್ಟೆ ಪ್ರವೇಶ, ಸಾಮಾನ್ಯ ಸೌಲಭ್ಯಗಳು, ವಿಸ್ತರಣಾ ಸೇವೆಗಳು ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಮಾಹಿತಿ ಮತ್ತು ಬೆಂಬಲಕ್ಕೂ ಈ ಪೋರ್ಟಲ್ ಲಭ್ಯವಿರುತ್ತದೆ.

Facebook
WhatsApp
Twitter
LinkedIn
Government of Karnataka