ಅವರೆಕಾಳು ಕರ್ನಾಟಕದ ಚಳಿಗಾಲದ ಪ್ರಮುಖ ಹಾಗೂ ಜನಪ್ರಿಯ ತರಕಾರಿಯಾಗಿದೆ. ಇದು ಆರೋಗ್ಯ, ಶಕ್ತಿ ಮತ್ತು ಪೌಷ್ಟಿಕತೆಗೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಅವರೆಕಾಳು ಪ್ರೋಟೀನ್, ನಾರಿನಂಶ, ತಾಮ್ರ, ಕಬ್ಬಿಣ, ಮೆಗ್ನಿಶಿಯಂ, ಪೊಟ್ಯಾಸಿಯಂ, ಖನಿಜಗಳು ಮತ್ತು ಕ್ಯಾಲ್ಸಿಯಂ ಸೇರಿದಂತೆ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿಟಮಿನ್ ಸಿ, ಎ, ಕೆ, ಬಿಟಾ-ಕ್ಯಾರೋಟಿನ್ ಮತ್ತು ಇವುಗಳು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯ ಮಾಡುತ್ತವೆ.
ಆರೋಗ್ಯ ಪ್ರಯೋಜನಗಳು
1. ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು:
ಅವರೆಕಾಳಿನ ಸತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕೋಶಗಳಿಗೆ ರಕ್ಷಣೆ ನೀಡುವುದರಿಂದ ಹಲವಾರು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
2. ಜೀರ್ಣಕ್ರಿಯೆ ಸುಧಾರಣೆ:
ಅವರೆಕಾಳಿನ ನಾರಿನಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಆಹಾರ ಪದಾರ್ಥಗಳ ಶೋಷಣೆಯನ್ನು ಉತ್ತಮಗೊಳಿಸುತ್ತದೆ. ಚಳಿಗಾಲದಲ್ಲಿ ಜೀರ್ಣ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿದೆ.
3. ತೂಕ ನಿಯಂತ್ರಣೆ:
ಅವರೆಕಾಳು ತೂಕವನ್ನು ಸಮತೋಲಿತಗೊಳಿಸಲು ಸಹಕಾರಿ. ನಾರಿನಂಶ ಮತ್ತು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವ ಘಟಕಗಳ ಮೂಲಕ ಇದು ಸ್ನಾಯುಗಳ ಬಲವರ್ಧನೆಗೂ ಸಹಾಯ ಮಾಡುತ್ತದೆ.
4. ಹೃದಯ ಮತ್ತು ರಕ್ತಹೀನತೆ ನಿರೋಧ:
ಕಬ್ಬಿಣಾಂಶ ಮತ್ತು ನಾರಿನಂಶ ಹೃದಯ ಆರೋಗ್ಯಕ್ಕೆ ಸಹಾಯ ಮಾಡುತ್ತವೆ, ರಕ್ತಹೀನತೆಯನ್ನು ತಡೆಯುತ್ತವೆ ಮತ್ತು ರಕ್ತದೊತ್ತಡವನ್ನು ಸಮತೋಲಿತಗೊಳಿಸುತ್ತವೆ.
5. ಮೂಳೆ ಮತ್ತು ಮೆದುಳಿನ ಆರೋಗ್ಯ:
ಮ್ಯಾಂಗನೀಸ್, ತಾಮ್ರ, ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಮೂಳೆಗಳನ್ನು ಬಲಪಡಿಸುತ್ತವೆ. ತಾಮ್ರ ಮತ್ತು ಆಂಟಿಆಕ್ಸಿಡೆಂಟ್ ಅಂಶಗಳು ಮೆದುಳಿನ ಕಾರ್ಯವನ್ನು ಸುಧಾರಿಸುತ್ತವೆ, ಏಕಾಗ್ರತೆ ಮತ್ತು ಶ್ರದ್ಧೆಯನ್ನು ಹೆಚ್ಚಿಸುತ್ತವೆ.
6.ನಿದ್ರೆ ಮತ್ತು ಶ್ವಾಸಕೋಶ:
ಮೆಗ್ನಿಶಿಯಂ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಬ್ರಾಂಕೈಟಿಸ್ ಅಥವಾ ಉಸಿರಾಟದ ಸಮಸ್ಯೆ ಇರುವವರು ಅವರೆಕಾಳಿನಿಂದ ಲಾಭ ಪಡೆಯುತ್ತಾರೆ.
ಅವರೆಕಾಳಿನ ಮೌಲ್ಯವರ್ಧನೆ
ಅವರೆಕಾಳನ್ನು ಉಪಯೋಗಿಸಿ ವಿವಿಧ ಪಾಕವಿಧಾನಗಳನ್ನು ತಯಾರಿಸಬಹುದು:
ಅವರೆಕಾಳು ಸಾಂಬಾರ್:
ಅವರೆಕಾಳು, ಈರುಳ್ಳಿ, ಟೊಮಾಟೊ, ಶುಂಠಿ, ಬೆಳ್ಳುಳ್ಳಿ, ಮಸಾಲೆ ಪುಡಿ, ಕಾರದ ಪುಡಿ, ಅರಿಶಿಣ ಮತ್ತು ಕೊತ್ತಂಬರಿ ಸೊಪ್ಪು ಬಳಸುತ್ತವೆ. ಎಲ್ಲಾ ಪದಾರ್ಥಗಳನ್ನು ಬೆರೆಸಿ ಕುಕ್ಕರ್‌ನಲ್ಲಿ ಚೆನ್ನಾಗಿ ಕುದಿಸಿ, ರೊಟ್ಟಿ, ಚಪಾತಿ ಅಥವಾ ಅನ್ನದೊಂದಿಗೆ ಸವಿಯಬಹುದು.
ಅವರೆಕಾಳಿನ ಪಕೋಡ:
ರುಬ್ಬಿದ ಅವರೆಕಾಳು, ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಕಡಲೆ ಹಿಟ್ಟನ್ನು ಕಲಸಿ, ಬಾಣಲೆಯಲ್ಲಿ ಬಿಸಿಯಾದ ಎಣ್ಣೆಯಲ್ಲಿ ಹುರಿದು ಸೇವಿಸಬಹುದು
ಅವರೆಕಾಳು ಸಾಂಬಾರ್, ಉಪ್ಪಿಟ್ಟು, ಚಿತ್ರಾನ್ನ, ಸಾಗು, ಉಸ್ಲಿ ಮುಂತಾದ ವಿವಿಧ ಖಾದ್ಯಗಳಲ್ಲಿ ಬಳಸಬಹುದು. ಹಾಗೆಯೇ ಸ್ವ ಸಹಾಯ ಸಂಘದ ಮಹಿಳೆಯರು ಋತುವಿನಲ್ಲಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಬಹುದು.
ಸಾರಾಂಶ:
ಚಳಿಗಾಲದಲ್ಲಿ ಆರೋಗ್ಯ, ಶಕ್ತಿ ಮತ್ತು ಜೀರ್ಣಕ್ರಿಯೆಯ ಸಮತೋಲನಕ್ಕಾಗಿ ಅವರೆಕಾಳನ್ನು ಆಹಾರ ಕ್ರಮದಲ್ಲಿ ಸೇರಿಸುವುದು ಅತ್ಯಂತ ಸೂಕ್ತವಾಗಿದೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ಅವರೆಕಾಳನ್ನು ಸೇರಿಸಿ ಆರೋಗ್ಯವಂತ ಜೀವನವನ್ನು ಅನುಭವಿಸಿ.








