header

DIRECTORATE OF EXTENTION ವಿಸ್ತರಣಾ ನಿರ್ದೇಶನಾಲಯ

 

DSW

Dr. B. HemlaNaik  MSc(Agri.);PhD(Hort.);PGDH (Israel);eLng Ag Edn (USA)

ಡಾ.ಬಿ. ಹೇಮ್ಲಾನಾಯಕ್   ಪಿ.ಹೆಚ್.ಡಿ(ತೋಟ):ಪಿಜಿಡಿಹೆಚ್ (ಇಸ್ರೇಲ್): ಇ-ಕಲಿಕೆ(ಅಮೇರಿಕ)


   Director of Extension, UAHS, Shivamogga    ವಿಸ್ತರಣಾ ನಿರ್ದೇಶಕರು, ಕೃಮತೋವಿ, ಶಿವಮೊಗ್ಗ
de@uahs.edu.in
+91 94808 38957
+91 8182 267015

ವಿಸ್ತರಣಾ ನಿರ್ದೇಶನಾಲಯ ಬಗ್ಗೆ About Directorate of Extention

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯವು ವಿಸ್ತರಣಾ ಶಿಕ್ಷಣ ಚಟುವಟಿಕೆಯಲ್ಲಿ ನಿರ್ದೇಶನಗಳು ಮತ್ತು ನಾಯಕತ್ವವನ್ನು ಒದಗಿಸಲು ಶಾಸನಬದ್ಧ ಪಾತ್ರವನ್ನು ಹೊಂದಿರುತ್ತದೆ. ಕೃಷಿಕರ ಆದಾಯ ದ್ವಿಗುಣಗೊಳಿಸಲು ವಿಶ್ವವಿದ್ಯಾಲಯಗಳು/ಐಸಿಎಆರ್ ಸಂಸ್ಥೆಗಳ ಸಂಶೋಧನಾ ಕೇಂದ್ರಗಳಲ್ಲಿ ಅಭಿವೃದ್ಧಿಪಡಿಸಿದ ವೈಜ್ಞಾನಿಕ ಆವಿಷ್ಕಾರಗಳನ್ನು ಪರಿಸರಸ್ನೇಹಿಯಾಗಿ ಕೃಷಿಕರ ಕ್ಷೇತ್ರಗಳಿಗೆ ವರ್ಗಾವಣೆ ಮಾಡುವ ಉದ್ದೇಶವನ್ನು ನಿರ್ದೇಶನಾಲಯವು ಹೊಂದಿದೆ. ಇಂತಹ ಉದಾತ್ತವಾದಂತಹ ಚಟುವಟಿಕೆಗಳ ಮೂಲಕ ರೈತರಿಗೆ ಸೌಲಭ್ಯಗಳನ್ನು ಒದಗಿಸಲು ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುವ ಹಾಗೂ ಈಗಿರುವ ತಂತ್ರಜ್ಞಾನದ ಅಂತರವನ್ನು ನಿವಾರಿಸುವಲ್ಲಿ ಕಾರ್ಯನಿರ್ವಹಿಸುತ್ತದೆ. ವಿಸ್ತರಣಾ ನಿರ್ದೇಶನಾಲಯದ ಈ ಮಹತ್ತರಕಾರ್ಯದ ಅಂತಿಮ ಗುರಿಯೆಂದರೆ, ಕೃಷಿ ಕ್ಷೇತ್ರದಲ್ಲಿರುವ ಎಲ್ಲಾ ಉದ್ಯಮಗಳನ್ನು ಗಣನೆಗೆ ತೆಗೆದುಕೊಂಡು, ಅವುಗಳನ್ನು ಸಂಯೋಜಿಸಿ ಹಾಗೂ ಇಡೀ ಕೃಷಿ ಕ್ಷೇತ್ರವನ್ನು ಒಂದು ಘಟಕವಾಗಿ ಪರಿಗಣಿಸುವ ಮೂಲಕ ರೈತನ ಸುಸ್ಥಿರ ನಿವ್ವಳ ಆದಾಯವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ವಿಸ್ತರಣೆಯ ಈ ಪ್ರಮುಖ ಕಾರ್ಯಗಳಲ್ಲಿ ಕೃಷಿ ಮಾಹಿತಿಯ ಪ್ರಸಾರ, ರೈತರು ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿ ನೀಡುವುದು, ಪ್ರದರ್ಶನಗಳು, ಕ್ಷೇತ್ರ ಭೇಟಿಗಳು, ಕ್ಷೇತ್ರೋತ್ಸವಗಳು, ಕೃಷಿ ಸಲಹಾ ಸೇವೆ ಮುಂತಾದ ಕ್ಷೇತ್ರ ಚಟುವಟಿಕೆಗಳ ಮೂಲಕ ರೈತರಿಗೆ ಶಿಕ್ಷಣ ನೀಡುವುದರ ಮೂಲಕ ಸಾಧಿಸಲಾಗುತ್ತದೆ. ಈ ಗುರಿಯನ್ನು ಸಾಧಿಸಲು ವಿಸ್ತರಣಾ ನಿರ್ದೇಶನಾಲಯವು ಕ್ರಮವಾಗಿ ನಾಲ್ಕು ಕೃಷಿ ವಿಜ್ಞಾನ ಕೇಂದ್ರಗಳು, ಎರಡು ಕೃಷಿ ಶಿಕ್ಷಣ ಘಟಕಗಳ ಮೂಲಕ ವಿವಿಧ ಕೃಷಿ ಹವಾಮಾನ -ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. (ಕೇಂದ್ರ ಒಣ ವಲಯ, ದಕ್ಷಿಣ ಉಷ್ಣ ವಲಯ, ಬೆಟ್ಟ ವಲಯ ಮತ್ತು ಕರಾವಳಿ ವಲಯ).

The Directorate of Extension of the University of Agricultural and Horticultural Sciences Shivamogga has a statutory role to provide directions and leadership in extension education activity. Transfer of Scientific interventions developed in research stations of the Universities/ICAR Institutes in such a way that the farm income is increased without disturbing the ecological balance of the farm. This noble activity facilitates in bridging the identified technological gaps existing with the farmers. The ultimate goal of this important function of Directorate of Extension is to enhance the sustainable net income of the farmer, by taking all the enterprises on the farm into consideration, integrating them and treating the whole farm as one unit. This major function of extension is accomplished through dissemination of farm information, training of farmers and extension functionaries, educating the farmers through field activities such as demonstrations, field visits, field days, farm Advisory service etc. Inorder achieve this goal the Directorate of Extension has four Krishi Vigyana Kendras Two Extension Education Units working in different Agro climatic zones (central dry zone southern transitional zone, Hill zone and coastal zone).

ದೂರದೃಷ್ಟಿ: Vision:

ಕೃಷಿ ಪರಿಸರೀಯ ವ್ಯವಸ್ಥೆಗಳು ಸುಸ್ಥಿರವಾಗಿರುವ ರೀತಿಯಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಅಭಿವೃದ್ಧಿಪಡಿಸಿದ/ ವೈಜ್ಞಾನಿಕ ತಂತ್ರಜ್ಞಾನದ ವರ್ಗಾವಣೆಯನ್ನು ಸಮಗ್ರ ವಿಧಾನಗಳ ಮೂಲಕ ಕೃಷಿ ಸಮುದಾಯದ ಜೀವನೋಪಾಯವನ್ನು ಸುಧಾರಣೆಗೊಳಿಸುವಿಕೆ.

To improve the livelihoods of farming community through holistic approaches of scientific technology transfer/developed in the research stations, in such a way that farm ecosystems are sustained.

ಧ್ಯೇಯ: Mission:

ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಮುಂಚೂಣಿಯ ವಿಸ್ತರಣಾ ವಿಧಾನಗಳ ಮೂಲಕ ಸಾಬೀತಾದ ತಂತ್ರಜ್ಞಾನಗಳ ವರ್ಗಾವಣೆಯನ್ನು ಜಿಲ್ಲಾ ಮತ್ತು ವಲಯ ಮಟ್ಟದ ಸಹಯೋಗದೊಂದಿಗೆ ವಿಸ್ತರಣಾ ಶಿಕ್ಷಣ ಘಟಕಗಳ ಮೂಲಕ ಸಂಬಂಧಪಟ್ಟ ಫಲಾನುಭವಿಗಳಿಗೆ ತಲುಪಿಸುವುದಾಗಿದೆ.

To improve the livelihoods of farming community through holistic approaches of scientific technology transfer/developed in the research stations, in such a way that farm ecosystems are sustained.

ಉದ್ದೇಶಗಳು: Objectives:

 • ರೈತರಿಗೆ ಪರಿಣಾಮಕಾರಿಯಾಗಿ ತಂತ್ರಜ್ಞಾನ ವರ್ಗಾವಣೆಗೊಳಿಸುವಿಕೆ.
 • ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ಹೊಸ ಬೆಳವಣಿಗೆಗಳ ಬಗ್ಗೆ ರೈತರು, ಸರ್ಕಾರಿ ಅಧಿಕಾರಿಗಳು ಮತ್ತು ತರಬೇತುದಾರರಿಗೆ ಶಿಕ್ಷಣ ನೀಡುವಿಕೆ.
 • ರೈತರ ಒಟ್ಟಾರೆ ಅಭಿವೃದ್ಧಿಗಾಗಿ ಜ್ಞಾನಧಾರಿತ ತಂತ್ರಜ್ಞಾನಗಳ ವರ್ಗಾವಣೆಗೆ ಸೂಕ್ತವಾದ ವಿಸ್ತರಣಾ ತಂತ್ರಗಳನ್ನು ಅಭಿವೃದ್ಧಿಪಡಿಸುವಿಕೆ.
 • ರೈತರು ಹೊಸ ಬಗೆಯ ಸಂಶೋಧನೆಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ಹಿಮ್ಮಾಹಿತಿ ಒದಗಿಸುವಿಕೆ, ಅನುಸರಣೆಯಲ್ಲಿನ ಸಮಸ್ಯೆಗಳನ್ನು ಪರಿಶೀಲಿಸುವಿಕೆ ಹಾಗೂ ಅವುಗಳಿಗೆ ಪರಿಹಾರವನ್ನು ಕಂಡುಹಿಡಿಯುವಿಕೆ.
 • To facilitate effective transfer of technology to the farmers.
 • To educate farmers, government officials and trainers on new developments in the field of agriculture and allied areas.
 • To develop extension techniques that are best suited for the transfer of technologies for overall development of farmers’ knowledge base.
 • To get an effective feedback from the grass root level, on the performance of technologies released and on emerging problems for the further research.

ವಿಸ್ತರಣಾ ಕೇಂದ್ರಬಿಂದು: Extension Focus:

 • ಕೃಷಿಯನ್ನು ಲಾಭದಾಯಕ ಮತ್ತು ಸುಸ್ಥಿರವಾಗಿಸಲು ಮಾರುಕಟ್ಟೆ ಆಧಾರಿತ ಮಾಹಿತಿಯ ಪ್ರಸಾರ ಮತ್ತು ನಿರ್ಮಾಣ ಮಾಡುವುದು.
 • ಹವಾಮಾನ ಬದಲಾವಣೆಯ ವಿವಿಧ ಆಯಾಮಗಳ ಮಾಹಿತಿ ಮತ್ತು ಇದಕ್ಕೆ ಮೀಸಲಾದ ಹವಾಮಾನ ಬದಲಾವಣೆ ಪೊರ್ಟಲ್ ಅಭಿವೃದ್ಧಿಯ ಮೂಲಕ ಪ್ರಸಾರಗೊಳಿಸುವುದು.
 • ಮುದ್ರಣ ಮಾಧ್ಯಮ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ(ಐಸಿಟಿ) ಪರಿಕರಗಳ ಮೂಲಕ ಕೃಷಿಕರ ಯಶೋಗಾಥೆಗಳನ್ನು ಹೆಚ್ಚಿನ ಪ್ರಚಾರಗೊಳಿಸುವುದು.
 • ಪಠ್ಯ ಆಧಾರಿತ ಸಲಹಾ ಸೇವೆಗಳ ಮೂಲಕ ಸ್ಥಳೀಯ ಭಾಷೆಯಲ್ಲಿ ಧ್ವನಿ ಆಧಾರಿತ ಮೊಬೈಲ್ ಸಲಹಾ ಸೇವೆಗೆ ಒತ್ತು, ಮೊಬೈಲ್ ಸೌಲಭ್ಯಗಳ ಮೂಲಕವೇ ರೈತರು ಸಾಕ್ಷರತೆಯತ್ತ ಸಾಗುವಂತೆ ಮಾಡುವುದು.
 • ಕಾರ್ಮಿಕರ ವೆಚ್ಚವನ್ನು ಉಳಿಸಲು ಪಂಚಾಯತ್ ಮಟ್ಟದಲ್ಲಿ ಮಿತವ್ಯಯದಲ್ಲಿ ಕೃಷಿ ಯಂತ್ರೋಪಕರಣ ಮತ್ತು ಪರಿಕರಗಳಿಗೆ ಬಾಡಿಗೆ ಆಧಾರಿತ ಸೇವೆಗಳನ್ನು ಒದಗಿಸುವುದು.
 • ದ್ವಿತೀಯ ಕೃಷಿಗೆ ಒತ್ತು ನೀಡುವುದು ಮತ್ತು ಕೊಯ್ಲೋತ್ತರ ನಂತರದಲ್ಲಿ ರೈತರಿಗೆ ಸೂಕ್ತ ತಂತ್ರಜ್ಞಾನಗಳನ್ನು ಲಭ್ಯವಾಗುವಂತೆ ಮಾಡುವುದು ಹಾಗೂ ಈ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕೈಗೊಳ್ಳುವಂತೆ ಮಾಡುವುದು.
 • ವಿವಿಧ ಕೃಷಿ ಸಮಸ್ಯೆಗಳನ್ನು ಪರಿಹರಿಸಲು ಸಂಶೋಧನೆ ಮತ್ತು ಅಭಿವೃದ್ಧಿಗೆ ವಿಸ್ತರಣೆಯ ಪರಿಕಲ್ಪನೆಯ ಕಾರ್ಯಾಚರಣೆಗೊಳಿಸುವುದು.
 • ನೈಸರ್ಗಿಕ ಸಂಪನ್ಮೂಲವನ್ನು ಸಂರಕ್ಷಿಸಿಕೊಂಡು, ತಂತ್ರಜ್ಞಾನಗಳನ್ನು ಮತ್ತು ಕೃಷಿ ಯಾಂತ್ರಿಕರಣವನ್ನು ಜನಪ್ರಿಯಗೊಳಿಸುವುದು ಹಾಗೂ ಶಿಫಾರಸ್ಸು ಮಾಡುವುದು.
 • Generation and dissemination of market oriented information for making agriculture profitable and sustainable.
 • Information on various aspects of climate change and its dissemination through development of dedicated climate change portal.
 • More publicity of farmers success stories through print media and ICT tools.
 • Emphasis on voice based mobile advisory in local language as text based advisory services issued through ,mobile facilities are accessed only by literate farmers.
 • Providing of economy custom hiring services for farm implement and machinery at panchayath level to save labour.
 • Emphasis on secondary agriculture and are to be made available to availability of appropriate technologies for the farmers during post harvest and value addition to produce.
 • Operationalization of the concept of extension for research and development for addressing various agricultural issues.
 • Promotion and popularization of natural resource conservation technologies and farm mechanization.

ವಿಸ್ತರಣಾ ನಿರ್ದೇಶನಾಲಯದ ಆದ್ಯಾದೇಶಗಳು The Mandates of Directorate of Extension are

 • ವಿಶ್ವವಿದ್ಯಾಲಯಗಳು ಮತ್ತು ರಾಜ್ಯ ಸರ್ಕಾರಗಳ ವಿವಿಧ ಅಭಿವೃದ್ಧಿ ಇಲಾಖೆಗಳೊಂದಿಗೆ ಸಂಪರ್ಕಸೇತುವೆಯಂತೆ ಕಾರ್ಯನಿರ್ವಹಿಸುವುದು.
 • ಸಂಶೋಧನೆ ಮತ್ತು ವಿಸ್ತರಣೆಯ ಅಂತರವನ್ನು ಗುರುತಿಸುವುದು ಹಾಗೂ ಸಂಬಂಧಪಟ್ಟವರಿಗೆ ಹಿಮ್ಮಾಹಿತಿಯನ್ನು ನೀಡುವುದು.
 • ವಿವಿಧ ಜಿಲ್ಲೆಗಳಲ್ಲಿ ದ್ವೈಮಾಸಿಕ ಮತ್ತು ಹಂಗಾಮು ಪೂರ್ವ ಕಾರ್ಯಾಗಾರಗಳನ್ನು ಸಕಾಲಕ್ಕೆ ಏರ್ಪಡಿಸುವುದನ್ನು ಖಚಿತಪಡಿಸುವುದು.
 • ಬೃಹತ್ ಕೃಷಿಮೇಳವನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಹಾಗೂ ವಲಯ ಮಟ್ಟದಲ್ಲಿ ಏರ್ಪಡಿಸುವುದು
 • ಸಂಬಂಧಪಟ್ಟ ಇಲಾಖೆಯ ಸಹಯೋಗದೊಂದಿಗೆ ಜಿಲ್ಲೆಗಳಲ್ಲಿನ ಸ್ಥಿತಿಗತಿ ವರದಿಗಳನ್ನು ಸಿದ್ಧಪಡಿಸುವುದು
 • ದ್ವೈ-ಮಾಸಿಕ ತಾಂತ್ರಿಕ ಕಾರ್ಯಾಗಾರಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ, ಕಾರ್ಯನಿರ್ವಹಿಸಲು ವಿಜ್ಞಾನಿಗಳ ತಂಡವನ್ನು ರೂಪಿಸುವುದು.
 • ರೋಗನಿರ್ಣಯದ ಭೇಟಿಗಳು ಮತ್ತು ನಿರ್ದಿಷ್ಟ ಸಮಸ್ಯೆಗಳ ಮೌಲ್ಯಮಾಪನಕ್ಕಾಗಿ ವಿಜ್ಞಾನಿಗಳ ತಂಡವನ್ನು ರೂಪಿಸುವುದು.
 • ಪ್ರತಿಯೊಂದು ಜಿಲ್ಲೆಗಳಲ್ಲಿ ಎರಡು ತಿಂಗಳ ತಾಂತ್ರಿಕ ಕಾರ್ಯಾಗಾರಗಳನ್ನು ನಡೆಸಲು ಆಯಾ ಜಿಲ್ಲೆಗಳ ಜಂಟಿ ನಿರ್ದೇಶಕರೊಂದಿಗೆ ಸಹಕರಿಸುವುದು.
 • ಕೃಷಿ ಕ್ಷೇತ್ರ ಪ್ರಯೋಗಗಳನ್ನು ಮೌಲ್ಯಮಾಪನ ಮಾಡುವುದು ಹಾಗೂ ಸಂಶೋಧನಾ ವ್ಯವಸ್ಥೆಗೆ ಹಿಮ್ಮಾಹಿತಿಯನ್ನು ನೀಡುವುದು.
 • ಯಶೋಗಾಥೆಗಳÀ ದಾಖಲೀಕರಣ, ಮುದ್ರಣ ಮತ್ತು ಪ್ರಕಟಣೆ ಹಾಗೂ ವ್ಯಾಪಕವಾಗಿ ತಲುಪಲು ವೀಡಿಯೊಗಳನ್ನು ತಯಾರಿಸುವುದು.
 • Liaison with the University and development departments of the state governments
 • Identify research and extension gaps and provide feedback to the concerned.
 • Ensuring timely conduct of bi-monthly and pre-seasonal workshops in different districts.
 • Organizing Mega Krishimela at University level and at zonal level.
 • Preparation of status reports for the districts in collaboration with line department.
 • Formulating scientist’s team to serve as resource persons for the bi-monthly technical workshops.
 • Formulating a team of scientists for diagnostic visits and assessment on specific problems.
 • Collaborate with the Joint Directors of the respective districts for conducting bi-monthly technical workshops at each of the districts.
 • Evaluate farm trials and provide feedback to research system.
 • Documentation, printing and publication of success stories and preparation of videos for wider reach

ವಿಸ್ತರಣಾ ಶಿಕ್ಷಣ ಪರಿಷತ್ತು Extension Education Council

ಇದು ಶಾಸನ ಬದ್ಧ ಸಂಸ್ಥೆಯಾಗಿದ್ದು, ಇದರ ಅಧ್ಯಕ್ಷರಾಗಿ ಕುಲಪತಿಯವರು ಮತ್ತು ವಿಸ್ತರಣಾ ನಿರ್ದೇಶಕರು, ಶಿಕ್ಷಣ ನಿರ್ದೇಶಕರು, ಸಂಶೋಧನಾ ನಿರ್ದೇಶಕರು, ಡೀನ್‍ಗಳು, ವಿಶ್ವವಿದ್ಯಾಲಯಗಳ ಮುಖ್ಯಸ್ಥರು, ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು, ಪ್ರಗತಿಪರ ರೈತರು, ರೈತ ಮಹಿಳೆಯರು, ಸ್ವಯಂಸೇವಾ ಸಂಸ್ಥೆ ಮತ್ತು ವಿಸ್ತರಣೆಯ ಕ್ಷೇತ್ರದಲ್ಲಿ ಅದರ ಸದಸ್ಯರಾಗಿರುವ ತಜ್ಞರುಗಳು ಇದರ ಸದಸ್ಯರಾಗಿರುತ್ತಾರೆ. ಈ ಪರಿಷತ್ತು ವರ್ಷಕ್ಕೊಮ್ಮೆಯಾದರೂ ಸಭೆ ಸೇರಿ, ಕಾರ್ಯಗಳ ಪರಿಶೀಲನೆ, ವಿಸ್ತøತ ಯೋಜನೆ ಕುರಿತ ಚರ್ಚೆ, ವಿಸ್ತರಣಾ ವ್ಯವಸ್ಥೆಯಲ್ಲಿನ ನೀತಿ ಸಮಸ್ಯೆಗಳ ಪರಿಶೀಲನೆ ನಡೆಸುತ್ತದೆ.

It is a statutory body consisting of the Vice-Chancellor as its Chairman and Director of Extension, Director of Education, Director of Research, Deans, University heads of the departments, Heads of the line departments, progressive farmers, farm women, voluntary organization and experts in the field of extension as its members. The council meets at least once in a year to review the work, discuss and deliberate the policy issues on extension system.

ವಿಸ್ತರಣಾ ನಿರ್ದೇಶನಾಲಯ ಸಂಸ್ಥೆಯ ರಚನೆ Organization Structure of Director of Extension

ವಿಸ್ತರಣಾ ನಿರ್ದೇಶನಾಲಯ ಸಂಸ್ಥೆಯ ರಚನೆ
Organization Structure of Director of Extension

ವಿಸ್ತರಣೆಯ ನಿರ್ದೇಶನಾಲಯದಲ್ಲಿ ತಾಂತ್ರಿಕ ಕಾರ್ಯಕ್ರಮದ ರಚನೆ Technical programme formulation in Director of Extension

ವಿಸ್ತರಣೆಯ ನಿರ್ದೇಶನಾಲಯದಲ್ಲಿ ತಾಂತ್ರಿಕ ಕಾರ್ಯಕ್ರಮದ ರಚನೆ
Technical programme formulation in Director of Extension

ಕೃಷಿ ಮಾಹಿತಿಯ ಸಂವಹನ Communication of Farm Information

ವಿಸ್ತರಣಾ ನಿರ್ದೇಶಕರ ಅಡಿಯಲ್ಲಿ ಕೃಷಿ ಮಾಹಿತಿಯ ಸಂವಹನ ಮತ್ತು ಕೃಷಿ ಮಾಹಿತಿ ಪ್ರಸಾರಕ್ಕಾಗಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.

Director of Extension under takes various activities for communication of farm information and its dissemination to the farming.

 • ಈ ವಿಶ್ವವಿದ್ಯಾಲಯ ಹಾಗೂ ಇತರೆ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಸುಧಾರಿತ ಬೇಸಾಯ ಕ್ರಮಗಳು ಎಂಬ ಪುಸ್ತಕವನ್ನು ರೈತ ಸಮುದಾಯದ ಅನುಕೂಲಕ್ಕಾಗಿ ಹೊರತರುವುದು.
 • ಕೃಷಿಕರ ಬಳಕೆಗಾಗಿ ಮಡಿಕೆ ಪತ್ರಗಳು (ಫೋಲ್ಡರ್ ಗಳು), ಕಿರುಪುಸ್ತಕಗಳು, ಜನಪ್ರಿಯ ಲೇಖನಗಳು, ವೈಜ್ಞಾನಿಕ ಕೃಷಿಯ ಯಶೋಗಾಥೆಗಳನ್ನು ಪ್ರಕಟಿಸುವುದು.
 • ವಿವಿಧ ಕೃಷಿ ತಂತ್ರಜ್ಞಾನಗಳ ಕುರಿತ ರಾಷ್ಟ್ರೀಯ, ರಾಜ್ಯ ಮತ್ತು ವಿಶ್ವವಿದ್ಯಾಲಯಮಟ್ಟದಲ್ಲಿ ಪ್ರದರ್ಶನಗಳನ್ನು ಏರ್ಪಡಿಸುವುದು.
 • ತಂತ್ರಜ್ಞಾನವನ್ನು ವ್ಯಾಪಕವಾಗಿ ಪ್ರಸಾರ ಮಾಡಲು ದಿನಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಮಾಡುವುದು (ಮುದ್ರಣ / ಎಲೆಕ್ಟ್ರಾನಿಕ್ ಮಾಧ್ಯಮ).
 • ಫಲಾನುಭವಿಗಳಿಗೆ ತಂತ್ರಜ್ಞಾನವನ್ನು ಪ್ರಸಾರ ಮಾಡುವಲ್ಲಿ ದೂರದರ್ಶನ ಮತ್ತು ಆಕಾಶವಾಣಿ ಕಾರ್ಯಕ್ರಮಗಳಿಗೆ ಸಮನ್ವಯಗೊಳಿಸುವುದು.
 • In collaboration with other farm University Package of Practice has been brought out for the benefit of the farming community.
 • Publishing folders, booklets, popular articles, success stories on scientific agriculture for the use of farmers.
 • Arranging exhibitions at the National, State & University level on various agriculture technologies.
 • Press coverage (print/electronic media) for wider dissemination the technology.
 • Co-ordination with Doordharshan and All India Radio in disseminating the technology to stake holders.

Krishi Vignan Kendras ಕೃಷಿ ವಿಜ್ಞಾನ ಕೇಂದ್ರಗಳು

Extension Education Unitsವಿಸ್ತರಣಾ ಶಿಕ್ಷಣ ಘಟಕ

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ವಿಸ್ತರಣಾ ಚಟುವಟಿಕೆಗಳನ್ನು ವಿಸ್ತರಣಾ ಶಿಕ್ಷಣ ಘಟಕಗಳಾದ ಕತ್ತಲಗೆರೆ, ಮಡಿಕೇರಿ ಹಾಗೂ ತೀರ್ಥಹಳ್ಳಿ ಹಾಗೂ ಶೃಂಗೇರಿ ವಿಸ್ತರಣಾ ಘಟಕಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. University conducts extension activities through EEU working at Kathalagere, Madikeri and Extension Units at Thirthahalli and Sringeri.

Particulars ವಿವರಗಳು Madikeri ಮಡಿಕೇರಿ Kathalagere ಕತ್ತಲಗೆರೆ
Year of establishment ಸ್ಥಾಪನೆಯಾದ ವರ್ಷ 2010 2008

Conducting Front line Demonstrations: ಕೈಗೊಂಡ ಮುಂಚೂಣಿ ಪ್ರಾತ್ಯಕ್ಷಿತೆಗಳು:

EEU’s conducting 85 demonstrations in 140 locations on new varieties in crops like, Paddy, (JGL-1798, KPR-1, Tunga and BPT-5205), Redgram (BRG-2), Ragi (ML-365), Field bean (HA-4), Cowpea (KBC-2), Blackgram (Rashmi), Greengram (KKM-3), Groundnut (GPBD- 4 & 5), Castor (DCH 177, HCH-6). Demonstrations were also conducted on Bio fertilizers inter cropping system, sheep goat rearing & Farm Mechanization, inter crop in arecanut. These new varieties were popularized which resulted in increased yields of crops to the extent of 8 to 23%. ವಿಸ್ತರಣಾ ಶಿಕ್ಷಣ ಘಟಕಗಳಿಂದ 85 ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು 140 ಸ್ಥಳಗಳಲ್ಲಿ ಹೊಸ ತಳಿಗಳಾದ ಭತ್ತ (ಜೆಜಿಎಲ್-1798, ಕೆಪಿಆರ್-1 ತುಂಗಾ ಮತ್ತು ಬಿಪಿಟಿ-5205)ತೊಗರಿ (ಬಿ.ಆರ್.ಜಿ.-2) ರಾಗಿ-(ಎಂ.ಎಲ್365), ಹೆಬ್ಬಾಳ್ ಅವರೆ (ಹೆಚ್.ಎ-4), ಅಲಸಂದೆ (ಕೆ.ಬಿ.ಸಿ-2) ಉದ್ದು (ರಶ್ಮಿ), ಹೆಸರು (ಕೆ.ಕೆ.ಎಂ-3), ಶೇಂಗಾ (ಜಿ.ಪಿ.ಬಿ.ಡಿ.4-5), ಹರಳು (ಡಿ.ಸಿ.ಹೆಚ್ 177, ಹೆಚ್.ಸಿ.ಹೆಚ್-6). ಜೈವಿಕ ರಸಗೊಬ್ಬರವನ್ನು ಅಂತರ ಬೆಳೆಯಲ್ಲಿ ಹಾಗೂ ಕುರಿ ಮೇಕೆ ಸಾಕಾಣಿಕೆ ಮತ್ತು ಕೃಷಿ ಯಾಂತ್ರೀಕರಣದಲ್ಲಿ ಹೊಸ ತಳಿಗಳನ್ನು ಜನಪ್ರಿಯಗೊಳಿಸಲಾಗಿದೆ. ಇಳುವರಿಯಲ್ಲಿ ಶೇ.8 ರಿಂದ 23% ರವರೆಗೆ ಹೆಚ್ಚಾಗಿದೆ.

Demonstration of inter cropping of Red gram (BRG-2) two rows in between areca rows found to be suitable and giving additional income in young areca gardens (1 to 6 years). This inter cropping is popular among arecanut growers in Maidan area with other benefits i.e., of shade and also maintaining soil fertility.

Farm Trails: ಕ್ಷೇತ್ರ ಪರೀಕ್ಷೆಗಳು:

25 farm trails have been conducted on new varieties of crops Paddy, Maize Tobacco, Redgram, Ragi, Sorghum, cowpea, blackgram, greengram, filed bean, Soil & weed management, alternate cropping system nutrient management . The result of the farm trials has confirmed sustainability of location specific in farmers field. ಭತ್ತ, ಮೆಕ್ಕೆಜೋಳದ ತಂಬಾಕು, ತೊಗರಿ, ರಾಗಿ, ಜೋಳ, ಅಲಸಂದೆ, ಉದ್ದು, ಹೆಸರು, ಹುರುಳಿ, ಮಣ್ಣು ಮತ್ತು ಕಳೆ ನಿರ್ವಹಣೆ, ಪರ್ಯಾಯ ಬೆಳೆ ಪದ್ಧತಿಯ ಪೆÇೀಷಕಾಂಶಗಳ ನಿರ್ವಹಣೆ ಕುರಿತು 25 ಕೃಷಿ ಕ್ಷೇತ್ರ ಪ್ರಯೋಗಗಳನ್ನು ನಡೆಸಲಾಗಿದೆ. ಕೃಷಿ ಪ್ರಯೋಗಗಳ ಫಲಿತಾಂಶವು ರೈತರ ಕ್ಷೇತ್ರದಲ್ಲಿ ನಿರ್ದಿಷ್ಟವಾದ ಸ್ಥಳದ ಸುಸ್ಥಿರತೆಯನ್ನು ದೃಢ ಪಡಿಸಿದೆ.

ವಿಸ್ತರಣಾ ಶಿಕ್ಷಣ ಫಟಕಗಳ ಕಾರ್ಯವೈಖರಿ:

ಸಂಶೋಧನ ಫಲಿತಾಂಶಗಳ ಕಾರ್ಯಕ್ಷಮತೆ ಬಗ್ಗೆ ಮೌಲ್ಯಮಾಪನ ಮಾಡುವುದು
ಸಾಬೀತಾದ ಸಂಶೋಧನಾ ಫಲಿತಾಂಶಗಳನ್ನು ಪ್ರಾತ್ಯಕ್ಷಿಕೆಗೊಳಿಸುವುದು
ಅಭಿವೃದ್ಧಿ ಇಲಾಖೆಗಳು ಹಾಗೂ ಮತ್ತಿತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಏರ್ಪಡಿಸುವುದು.

ಒಳ ಆವರಣ ತರಬೇತಿ ಕಾರ್ಯಕ್ರಮಗಳು : (89 ಸಂಖ್ಯೆ)ಯಲ್ಲಿ 3463 ರೈತ ಹಾಗೂ ರೈತ ಮಹಿಳೆಯರಿಗೆ ಮತ್ತು ಹೊರ ಆವರಣ ತರಬೇತಿ ಕಾರ್ಯಕ್ರಮಗಳನ್ನು (138 ಸಂಖ್ಯೆ)ಯಲ್ಲಿ 6,784 ರೈತ ಹಾಗೂ ರೈತ ಮಹಿಳೆಯರಿಗೆ, ಬತ್ತದ ಬೆಳೆಯಲ್ಲಿ ಬೀಜದಿಂದ ಬೀಜದವರೆಗೆ ಯಾಂತ್ರೀಕೃತ ಬೇಸಾಯ, ಕರಾವಳಿ ಕೃಷಿ ಬೆಳೆಗಳಲ್ಲಿ ಬೀಜೋತ್ಪಾಧನೆ, ತೋಟಗಾರಿಕಾ ಬೆಳೆಗಳ ಪ್ರಸರಣಾ ತಂತ್ರಜ್ಞಾನ ಮತ್ತು ಕಸಿಕಟ್ಟುವಿಕೆ ಹಾಗೂ ಮೀನು ಕೃಷಿಯಲ್ಲಿ ಅಲಂಕಾರಿಕಾ ಮೀನು ಮತ್ತು ಸಸ್ಯಗಳ ಉತ್ಪಾದನೆ, ಜೇನು ಕೃಷಿ, ಅಣಬೆ ಬೇಸಾಯ, ಮತ್ತು ಮೀನು ಕೃಷಿಯ ಕುರಿತು ಅರಿವು ಕಾರ್ಯಕ್ರಮ, ಬಿದಿರಿನ ಕಣಿಲೆಯ ಮೌಲ್ಯವರ್ಧನೆ ತರಬೇತಿ ಕಾರ್ಯಕ್ರಮ, ಕಾಫಿಯಲ್ಲಿ ಬಿಳಿ ಕಾಂಡಕೊರಕ ನಿರ್ವಹಣೆಗೆ ಹೀಲರ್ ಕಂ ಸೀಲರ್ ಪ್ರಾತ್ಯಕ್ಷಿಕೆ, ತೋಟಗಾರಿಕಾ ಬೆಳೆಗಳಲ್ಲಿ ಸುಧಾರಿತ ಬೇಸಾಯ ಪದ್ಧತಿಗಳು.

Training programmes: ತರಬೇತಿ ಕಾರ್ಯಕ್ರಮಗಳು:

On campus training programmes (89 nos.) involving 3463 farmer / farm women and off campus training programmes (138 nos.) involving 6,784 farmer / farm women were participated. The training programmes conducted on integrated nutrient, pest and disease management in major agricultural (paddy, maize, sugarcane, groundnut, sunflower, pulses etc.) and horticultural crops (arecanut, banana, coconut, onion, ginger, coffee, pepper, cashew, turmeric, mango, pineapple, etc.), feed and disease management in livestock and value addition in milk, composite fish culture, vermi-composting, forage crop production etc. ಒಳ ಆವರಣ ತರಬೇತಿ ಕಾರ್ಯಕ್ರಮಗಳಲ್ಲಿ (89 ಸಂಖ್ಯೆ) 3463 ರೈತ / ರೈತ ಮಹಿಳೆಯರು ಮತ್ತು 6,784 ರೈತ / ರೈತ ಮಹಿಳೆಯರು (138 ಸಂಖ್ಯೆ) ಭಾಗವಹಿಸಿದ್ದರು. ಪ್ರಮುಖ ಕೃಷಿ (ಭತ್ತ, ಮೆಕ್ಕೆಜೋಳ, ಕಬ್ಬು, ನೆಲಗಡಲೆ, ಸೂರ್ಯಕಾಂತಿ, ಬೇಳೆಕಾಳುಗಳು ಇತ್ಯಾದಿ) ಹಾಗೂ ತೋಟಗಾರಿಕೆ ಬೆಳೆಗಳಲ್ಲಿ (ಕಡಲೆ, ಬಾಳೆ, ತೆಂಗು, ಈರುಳ್ಳಿ, ಶುಂಠಿ, ಕಾಫಿ, ಮೆಣಸು, ಗೋಡಂಬಿ, ಅರಿಶಿನ, ಮಾವು, ಅನಾನಸ್, ಇತ್ಯಾದಿ), ಜಾನುವಾರುಗಳಲ್ಲಿ ಆಹಾರ ಮತ್ತು ರೋಗ ನಿರ್ವಹಣೆ ಮತ್ತು ಹಾಲಿನಲ್ಲಿ ಮೌಲ್ಯವರ್ಧನೆ, ಸಂಯೋಜಿತ ಮೀನು ಗೊಬ್ಬರ, ಎರೆ-ಮಿಶ್ರಗೊಬ್ಬರ, ಮೇವು ಬೆಳೆ ಉತ್ಪಾದನೆ ಇತ್ಯಾದಿ ಒಳಗೊಂಡ ಹೊರ ಆವರಣ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

Training programs on Agriculture and Allied aspects: ಕೃಷಿ ಮತ್ತು ಸಂಬಂಧಿತ ಅಂಶಗಳ ಕುರಿತು ತರಬೇತಿ ಕಾರ್ಯಕ್ರಮಗಳು:

Education training programmes were conducted for farmers / farm women and youth in Agriculture and allied aspects. Sixty Five nos of training programme were organized and 2400 farmers were benefited. ರೈತರು / ರೈತ ಮಹಿಳೆಯರು ಹಾಗೂ ಯುವಕರಿಗೆ ಕೃಷಿ ಮತ್ತು ಸಂಬಂಧಿತ ಅಂಶಗಳಲ್ಲಿ ಶಿಕ್ಷಣ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಅರವತ್ತೈದು ಸಂಖ್ಯೆಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, 2400 ರೈತರು ಪ್ರಯೋಜನ ಪಡೆದುಕೊಂಡರು. ತರಬೇತಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಕೌಶಲ್ಯ ಆಮದು ತರಬೇತಿ ಕಾರ್ಯಕ್ರಮಗಳು (28 ಸಂಖ್ಯೆ), 650 ರೈತರನ್ನು ಒಳಗೊಂಡ 23 ಕ್ಷೇತ್ರ ದಿನಗಳು, ರೋಗನಿರ್ಣಯದ ಕ್ಷೇತ್ರ ಭೇಟಿಗಳ ಮೂಲಕ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು 820 ಕ್ಷೇತ್ರ ಭೇಟಿಗಳನ್ನು ಮಾಡಲಾಯಿತು ಹಾಗೂ 12 ಪ್ರದರ್ಶನ ಭೇಟಿಗಳನ್ನು ಏರ್ಪಡಿಸಲಾಗಿತ್ತು.

Other than training programmes skill importing training programmes (28 Nos), 23 field days involving 650 farmers, 820 field visits were made to solve the field problems through diagnostic field visits and 12 exposure visits were organized.

Extension Education Councilವಿಸ್ತರಣಾ ಶಿಕ್ಷಣ ಪರಿಷತ್

It is a statutory body consisting of the Vice-Chancellor as its Chairman and Director of Extension, Director of Education, Director of Research, Deans, University heads of the departments, Heads of the line departments, progressive farmers, farm women, voluntary organization and experts in the field of extension as its members. The council meets at least once in a year to review the work, discuss and deliberate the policy issues on extension system. ವಿಸ್ತರಣಾ ಶಿಕ್ಷಣ ಪರಿಷತ್ ಒಂದು ಶಾಸನ ಬದ್ಧವಾದ ಪರಿಷತ್ ಆಗಿದ್ದು ಕೃ.ತೋ.ವಿ.ವಿ. ಶಿವಮೊಗ್ಗದ ಕುಲಪತಿಗಳು ಅಧ್ಯಕ್ಷರಾಗಿರುತ್ತಾರೆ, ಶಿಕ್ಷಣ ನಿರ್ದೇಶಕರು, ಸಂಶೋಧನಾ ನಿರ್ದೇಶಕರು, ಡೀನ್ (ಸ್ನಾತಕೋತ್ತರ), ಡೀನ್ (ವಿದ್ಯಾರ್ಥಿ ಕಲ್ಯಾಣ) ಕಾಲೇಜಿನ ಡೀನ್‍ಗಳು ಹಾಗೂ ಸಹ ವಿಸ್ತರಣಾ ನಿರ್ದೇಶಕರು, ಸಹ ಸಂಶೋಧನಾ ನಿರ್ದೇಶಕರು, ವಿಶ್ವವಿದ್ಯಾಲಯದ ಮುಖ್ಯಸ್ಥರು (ಸಂಬಂಧಪಟ್ಟ ವಿಷಯ) ಮತ್ತು ಅಭಿವೃದ್ಧಿ ಇಲಾಖೆಗಳು ಹಾಗೂ ಪ್ರಗತಿಪರ ರೈತ ಹಾಗೂ ಪ್ರಗತಿಪರ ರೈತ ಮಹಿಳೆ, ವಿಸ್ತರಣಾ ಶಿಕ್ಷಣ ತಜ್ಞರು, ಒಬ್ಬ ಕೃಷಿ ಕೈಗಾರಿಕೋದ್ಯಮಿ ಈ ಪರಿಷತ್‍ನ ಸದಸ್ಯರುಗಳಾಗಿದ್ದು ವಿಸ್ತರಣಾ ಚಟುವಟಿಕೆಗಳನ್ನು ಪರಿಶೀಲಿಸಲು ಒಂದು ವರ್ಷಕ್ಕೊಮ್ಮೆ ಸಭೆ ಸೇರುತ್ತಾರೆ.

Extension Council meeting conducted from DE’s office ವಿಸ್ತರಣಾ ನಿರ್ದೇಶನಾಲಯ ಕೃ.ತೋ.ವಿ.ವಿ ಶಿವಮೊಗ್ಗದಿಂದ ಆಯೋಜಿಸಲಾದ ವಿಸ್ತರಣಾ ಶಿಕ್ಷಣ ಪರಿಷತ್‍ಗಳ ವಿವರ

SL No. ಕ್ರಮ ಸಂ. Date ದಿನಾಂಕ Place ಸ್ಥಳ
1 23-12-2013 OFRC Shivamogga ಸಾವಯವ ಕೃಷಿ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ
2 30-12-2014 OFRC Shivamogga ಸಾವಯವ ಕೃಷಿ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ
3 13-07-2018 OFRC Shivamogga ಸಾವಯವ ಕೃಷಿ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ
4 24-12-2019 OFRC Shivamogga ಸಾವಯವ ಕೃಷಿ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ

Members of EEC MEETING: ವಿಸ್ತರಣಾ ಶಿಕ್ಷಣ ಪರಿಷತ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ಸದಸ್ಯರು

Extension Education Council of University of Agricultural and Horticultural Sciences, Shivamogga

 1. The Vice Chancellor-Chair person ಕುಲಪತಿಗಳು, ಅಧ್ಯಕ್ಷರು
 2. The Director of Agriculture, GOK-Member ನಿರ್ದೇಶಕರು ಕೃಷಿ ಇಲಾಖೆ, ಕರ್ನಾಟಕ ಸರ್ಕಾರ
 3. The Director of Agriculture Marketing, GOK-Member ನಿರ್ದೇಶಕರು ಕೃಷಿ ಮಾರುಕಟ್ಟೆ, ಕರ್ನಾಟಕ ಸರ್ಕಾರ
 4. The Director of Horticulture, GOK-Member ನಿರ್ದೇಶಕರು ತೋಟಗಾರಿಕೆ, ಕರ್ನಾಟಕ ಸರ್ಕಾರ
 5. The Director of Women and Child Welfare, GOK-Member ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ
 6. The Director of Sericulture, GOK-Member ನಿರ್ದೇಶಕರು ರೇಷ್ಮೆ ಇಲಾಖೆ ಕರ್ನಾಟಕ ಸರ್ಕಾರ
 7. The Chief conservator of Forestry, Social Forestry, GOK-Member ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಕರ್ನಾಟಕ ಸರ್ಕಾರ
 8. The Director of Watershed, GOK-Member ಜಲಾನಯನ ನಿರ್ವಹಣಾ ನಿರ್ದೇಶಕರು, ಕರ್ನಾಟಕ ಸರ್ಕಾರ, ಬೆಂಗಳೂರು
 9. The Director of Education, UAHS, Shivamogga-Member ಶಿಕ್ಷಣ ನಿರ್ದೇಶಕರು, ಕೃ.ತೋ.ವಿ.ವಿ. ಶಿವಮೊಗ್ಗ
 10. The Director of Research, UAHS, Shivamogga-Member ಸಂಶೋಧನಾ ನಿರ್ದೇಶಕರು ಕೃ.ತೋ.ವಿ.ವಿ. ಶಿವಮೊಗ್ಗ
 11. The Dean(Forestry), College of Horticulture, Ponnampet-Member ಡೀನ್(ಅರಣ್ಯ), ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ
 12. The Dean(Hort), College of Horticulture, Mudigere-Member ಡೀನ್(ತೋಟಗಾರಿಕೆ), ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ
 13. The Dean(Hort), College of Horticulture, Hiriyur-Member ಡೀನ್(ತೋಟಗಾರಿಕೆ), ತೋಟಗಾರಿಕಾ ಮಹಾವಿದ್ಯಾಲಯ, ಹಿರಿಯೂರು.
 14. The Dean(Agri), College of Agriculture, Shivamogga-Member ಡೀನ್ (ಕೃಷಿ) ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ.
 15. The Dean(PGS), UAHS, Shivamogga-Member ಡೀನ್ (ಸ್ನಾತ್ತಕೋತ್ತರ) ಕೃ.ತೋ.ವಿ.ವಿ. ಶಿವಮೊಗ್ಗ
 16. The Dean(Student Welfare), UAHS, Shivamogga-Member ಡೀನ್ (ವಿದ್ಯಾರ್ಥಿ ಕಲ್ಯಾಣ) ಕೃ.ತೋ.ವಿ.ವಿ. ಶಿವಮೊಗ್ಗ
 17. The Registrar, UAHS, Shivamogga-Member ಕುಲಸಚಿವರು ಕೃ.ತೋ.ವಿ.ವಿ. ಶಿವಮೊಗ್ಗ
 18. The Associate Director of Extension-UAHS, Shivamogga-Member ಸಹ ವಿಸ್ತರಣಾ ನಿರ್ದೇಶಕರು, ವಿಸ್ತರಣಾ ಘಟಕ, ಶಿವಮೊಗ್ಗ
 19. The Associate Director of Extension, Brahmmavar-Member ಸಹ ವಿಸ್ತರಣಾ ನಿರ್ದೇಶಕರು, ವಿಸ್ತರಣಾ ಘಟಕ, ಬ್ರಹ್ಮಾವಾರ
 20. The Associate Director of Extension, Mudigere-Member ಸಹ ವಿಸ್ತರಣಾ ನಿರ್ದೇಶಕರು, ವಿಸ್ತರಣಾ ಘಟಕ, ಮೂಡಿಗೆರೆ
 21. The Associate Director of Research, Brahmmavar-Member ಸಹ ಸಂಶೋಧನಾ ನಿರ್ದೇಶಕರು, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಮೂಡಿಗೆರೆ
 22. The Associate Director of Research, Mudigere-Member ಸಹ ಸಂಶೋಧನಾ ನಿರ್ದೇಶಕರು, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಶಿವಮೊಗ್ಗ
 23. The Associate Director of Research, Hiriyur-Member ಸಹ ಸಂಶೋಧನಾ ನಿರ್ದೇಶಕರು, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವಾರ
 24. The Associate Director of Research, UAHS, Shivamogga-Member ಸಹ ಸಂಶೋಧನಾ ನಿರ್ದೇಶಕರು, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಹಿರಿಯೂರು
 25. The University Head (GPB-crop improvement)-Member ವಿಶ್ವವಿದ್ಯಾಲಯದ ಮುಖ್ಯಸ್ಥರು (ಅನುವಂಶಿಕತೆ ಹಾಗೂ ತಳಿ ಅಭಿವೃದ್ಧಿ ಶಾಸ್ತ್ರ)
 26. The University Head (Horticulture)-Member ವಿಶ್ವವಿದ್ಯಾಲಯದ ಮುಖ್ಯಸ್ಥರು (ತೋಟಗಾರಿಕೆ)
 27. The University Head (Entomology)-Member ವಿಶ್ವವಿದ್ಯಾಲಯದ ಮುಖ್ಯಸ್ಥರು (ಕೀಟಶಾಸ್ತ್ರ)
 28. The University Head (Social Science )-Member ವಿಶ್ವವಿದ್ಯಾಲಯದ ಮುಖ್ಯಸ್ಥರು (ಸಾಮಾಜಿಕ ವಿಜ್ಞಾನ)
 29. The University Head (Engineering)-Member ವಿಶ್ವವಿದ್ಯಾಲಯದ ಮುಖ್ಯಸ್ಥರು, (ಕೃಷಿ ಇಂಜಿನಿಯರಿಂಗ್)
 30. The University Head (Agronomy)-Member ವಿಶ್ವವಿದ್ಯಾಲಯದ ಮುಖ್ಯಸ್ಥರು, (ಬೇಸಾಯ ಶಾಸ್ತ್ರ)
 31. The University Head (Forestry)-Member ವಿಶ್ವವಿದ್ಯಾಲಯದ ಮುಖ್ಯಸ್ಥರು, (ಅರಣ್ಯ)
 32. The University Head (Pathology)-Member ವಿಶ್ವವಿದ್ಯಾಲಯದ ಮುಖ್ಯಸ್ಥರು, (ಸಸ್ಯ ರೋಗ ಶಾಸ್ತ್ರ)
 33. The University Head (SS & AC)-Member ವಿಶ್ವವಿದ್ಯಾಲಯದ ಮುಖ್ಯಸ್ಥರು, (ಮಣ್ಣು ವಿಜ್ಞಾನ)
 34. Director of Extension- Member Secretary ವಿಸ್ತರಣಾ ನಿರ್ದೇಶಕರು- ಸದಸ್ಯ ಕಾರ್ಯದರ್ಶಿ

Krushi Melaಕೃಷಿ ಮೇಳ

Krushi Mela 2019

ಪ್ರಸಕ್ತ ವರ್ಷದಲ್ಲಿ ಕರ್ನಾಟಕ ರಾಜ್ಯವು ಬೀಕರ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತತ್ತರಿಸಿದ್ದು, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರವು ಸಾಕಷ್ಟು ಬೆಳೆ ಹಾನಿ ಮತ್ತು ನಷ್ಟವನ್ನು ಅನುಭವಿಸಿದೆ. ರಾಜ್ಯದ 22 ಜಿಲ್ಲೆಯ ಸುಮಾರು 7 ಲಕ್ಷ ಹೇಕ್ಟೆರು ಬೆಳೆ ಕ್ಷೇತ್ರವು ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಿಲುಕಿದ್ದು ರಾಜ್ಯದ ರೈತರು ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಎಲ್ಲಾ ಅಂಶಗಳನ್ನು ಪರಿಗಣಿಸಿ ವಿಶ್ವವಿದ್ಯಾನಿಲಯು ಕೃಷಿ ಮೇಳವನ್ನು ಆಯೋಜಿಸುವ ಬದಲು ಒಂದು ದಿನದ “ನೆರೆ ಮತ್ತು ಬರ ನಿರ್ವಹಣೆಯ” ವಿಚಾರ ಸಂಕಿರಣವನ್ನು ಏರ್ಪಡಿಸಿ ರೈತರಿಗೆ ಈ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಹಾಗೂ ತಂತ್ರಜ್ಞಾನಗಳ ತಿಳುವಳಿಕೆ ಮತ್ತು ಅದಕ್ಕೆ ಸಂಬಂಧಪಟ್ಟ ಉಪನ್ಯಾಸವನ್ನು ದಿನಾಂಕ 06 ನವೆಂಬರ್ 2019 ರಂದು ಹಮ್ಮ್ಮಿಕೊಳ್ಳಲಾಗಿತ್ತು. ಈ ವಿಚಾರ ಸಂಕೀರರ್ಣವನ್ನು ಡಾ.ಬಿ.ಪಿ.ವೀರಭದ್ರಪ್ಪ, ಕುಲಪತಿಗಳು, ಕುವೆಂಪು ವಿಶ್ವವಿದ್ಯಾಲಯ, ಬಿ.ಆರ್.ಪಿ ಇವರು ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಡಾ. ಅಶೋಕ್ ರೆಡ್ಡಿ, ವಿಜ್ಞಾನಿಗಳು, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಬೆಂಗಳೂರು ಹಾಗೂ ಡಾ.ಬಿ.ಆರ್. ಹೆಗಡೆ, ನಿವೃತ್ತ ಸಂಶೋಧನಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು. University of Agricultural & Horticultural Sciences, Shivamogga was organized seminar on “Agriculture Technology for Mitigating Flood and Drought” is being organized on 06th November-2019, programme inaugurated by Dr.B.P.Veerabhadrappa, Hon’ble Vice Chancellor of Kuvempu University, B.R.Project

Krushi Mela 2018

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ದಿನಾಂಕ 12 ರಿಂದ 15 ಅಕ್ಟೋಬರ್, 2018 ರವರೆಗೆ “ಆದಾಯ ದ್ವಿಗುಣಕ್ಕೆ ಸಮಗ್ರ ಕೃಷಿ” ಎಂಬ ಸಿದ್ದಾಂತದ ಅಡಿಯಲ್ಲಿ ನಾಲ್ಕು ದಿವಸ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂಧರ್ಭದಲ್ಲಿ 13 ಜಿಲ್ಲಾಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. Krishimela was organized with the theme “Integrated Farming for Doubling Income” from 12-15th October- 2018. This was a unique Krishimela which attracted more than 4 to 5 lakhs farmer/farm women and extension workers. During this event 13 best district level farmer/farm women coming under UAHS, jurisdiction were awarded.

Krushi Mela 2017

“ಕ್ಷೇತ್ರೋತ್ಸವ ಹಾಗೂ ಬರ ನಿರ್ವಹಣೆಯ” ಬಗ್ಗೆ ವಿಚಾರ ಸಂಕಿರಣ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ಒಂದು ದಿನದ “ಕ್ಷೇತ್ರೋತ್ಸವ ಹಾಗೂ ಬರ ನಿರ್ವಹಣೆಯ” ಬಗ್ಗೆ ವಿಚಾರ ಸಂಕಿರಣವನ್ನು ದಿನಾಂಕ: 25-ಅಕ್ಟೋಬರ್ 2017 ರಂದು ಹಮ್ಮ್ಮಿಕೊಳ್ಳಲಾಗಿತ್ತು. ಡಾ. ಕೆ. ನಾರಾಯಣ ಗೌಡ, ವಿಶ್ರಾಂತ ಕುಲಪತಿಗಳು ಮತ್ತು ಅಧ್ಯಕ್ಷರು, ಅಲುಮ್ನಿ ಅಸೋಸಿಯೇಷನ್, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ 13 ಜಿಲ್ಲಾಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯ ವ್ಯಾಪ್ತಿಯ ಏಳು ಜಿಲ್ಲೆಗಳಿಂದ ಸುಮಾರು 3000 ರೈತರು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು. University of Agricultural & Horticultural Sciences, Shivamogga was organized field day on various agri/horticulture technologies and a seminar on “Drought Mitigation and water conservation for crop productivity” is being organized on 25th October-2017. Programme inaugurated by Dr.K.Naryanagowda, Retd. Hon’ble Vice Chancellor & President, Alumini Associates, Bengaluru. More than 3000 farmers / farm women and extension personnel participated in the seminar. 13 best district level farmers / farm women were honoured with the Best Farm men/Women awards.

Krushi Mela 2016

Krishimela was organized from 21-24th October-2016. This was a unique Krishimela with the theme on “Pulses for Soil and Human Health”. We have showcased Crop Museum, Terrace and Kitchen gardening also. Inaugurated by Hon’ble Minister for Agriculture, Government of Karnataka, on 21st October-2016 other State Ministers from Government of Karnataka, important dignitaries are participated in the Mela. 300 high tech stalls and 200 economy stalls were installed. 14 best district level farmers / farm women were honoured with the Best Farm men/Women awards. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ದಿನಾಂಕ 21 ರಿಂದ 24 ಅಕ್ಟೋಬರ್, 2016 ರವರೆಗೆ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ನಾಲ್ಕು ದಿವಸ ಕೃಷಿ ಮೇಳವನ್ನು ಹಮ್ಮಕೊಳ್ಳಲಾಗಿತ್ತು. “ಮಣ್ಣು ಮತ್ತು ಜನಾರೋಗ್ಯಕ್ಕಾಗಿ ದ್ವಿದಳ ಧಾನ್ಯಗಳು” ಎಂಬ ಸಿದ್ದಾಂತದ ಅಡಿಯಲ್ಲಿ ಆಚರಿಸಲಾಯಿತು. ಮಾನ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಶುಕ್ರವಾರ ನಾಲ್ಕು ದಿನಗಳ ಕೃಷಿಮೇಳವನ್ನು ಉದ್ಘಾಟಿಸಿದರು. ಒಟ್ಟು 300 ಹೈಟೆಕ್, 100 ಸಾಧಾರಣ ಮಳಿಗೆಗಳು ಉಳಿದವು ಕೃಷಿ ಯಂತ್ರೋಪಕರಣ ಮತ್ತು ಇತರೆ ಕೃಷಿ ಸಂಬಂಧಿಸಿದವುಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 14 ಜಿಲ್ಲಾಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Krushi Mela 2015

Krishimela-Mathsyamela was organized from 03-06th October-2015. This will be a unique Krishimela with the theme on “Youth and Women Empowerment in Agriculture”. We are showcased crop museum, Terrace and Kitchen gardening also. Krishimela was Inaugurated by Hon’ble Chief Minister of Karnataka Sri. Siddramaiah. Agriculture Minister including other State Ministers from Government of Karnataka and other dignitaries participated in the Mela. 14 best district level farmer / farm women were awarded. Six No.s of best farmer were allotted in the field of Fishery. Organized Mathsya Mela as a part of Krishimela-2015 of University of Agriculture & Horticulture Sciences, Shivamogga in co-ordination with the Department of Fisheries, Shivamogga. ಕೃಷಿ ಮೇಳವನ್ನು “ಕೃಷಿಯಲ್ಲಿ ಯುವಜನ ಮತ್ತು ಮಹಿಳಾ ಸಬಲೀಕರಣz”À ಧ್ಯೇಯದೊಂದಿಗೆ ಅಕ್ಟೋಬರ್ 3ರಿಂದ 6ನೇ ತಾರೀಖಿನವರೆಗೆ ಹಮ್ಮಿಕೊಂಡಿತ್ತು. ಕೃಷಿ ಮೇಳದ ಉದ್ಘಾಟನೆಯನ್ನು ಮೊದಲನೆಯ ದಿನ ಮಧ್ಯಾಹ್ನ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ನೆರವೇರಿಸಿದರು. ಕೃಷಿಮೇಳ 2015ರಲ್ಲಿ ಮೀನುಗಾರಿಕೆ ಇಲಾಖೆಯ ಸಹಯೋಗದಿಂದ ಮತ್ಸ್ಯಮೇಳವನ್ನು ಆಯೋಜಿಸಲಾಗಿತ್ತು. ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ 14 ಜನ ರೈತ ಹಾಗೂ ರೈತ ಮಹಿಳೆಯರನ್ನು ಮತ್ತು ಮಂಗಳೂರು ಹಾಗೂ ಶಿವಮೊಗ್ಗ ವಲಯದ 6 ಜನ ಮೀನು ಕೃಷಿಕರನ್ನು ಸನ್ಮಾನಿಸಲಾಯಿತು. ಕೃಷಿ ಮೇಳ 2015 ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಇಲ್ಲಿ ಸುಮಾರು 250 ಹೈಟೆಕ್ ಮಳಿಗೆಗಳು ಹಾಗೂ 150 ಸಾಮಾನ್ಯ ಮಳಿಗೆಗಳಿದ್ದವು.

Krushi Mela 2014

Krishi Mela-2014 organized from 18-20th October, 2014 involving 60 high tech stall and 200 economy stalls attracted more than 3 lakhs farmer / farm women and extension personnel. 12 best district level farmer / farm women were awarded. In addition Krishi Mela, field days and technology week at regional / zonal level viz., at Shimoga, Hiriyuru, Bramhavara, Mudigere, Kathalagere and at AHRS, Ponnampete and Krishi Vigyan Kendras were also organized to showcase university technologies. ಕೃಷಿ ಮೇಳ-2014 ನ್ನು ದಿನಾಂಕ 18-20 ಅಕ್ಟೋಬರ್, 2014 ರಂದು ಆಯೋಜಿಸಿದ್ದು, 60 ಹೈಟೆಕ್ ಮಳಿಗೆಗಳು, 200 ಸಾಮಾನ್ಯ ಮಳಿಗೆಗಳನ್ನು ಒಳಗೊಂಡಿದ್ದು 3 ಲಕ್ಷಕ್ಕಿಂತ ಹೆಚ್ಚು ರೈತರು / ರೈತ ಮಹಿಳೆಯರು / ವಿಸ್ತರಣಾ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ 12 ಜಿಲ್ಲಾಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮುಂದುವರೆದು, ವಿಶ್ವವಿದ್ಯಾನಿಲಯದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಗಳು (ಶಿವಮೊಗ್ಗ, ಹಿರಿಯೂರು, ಬ್ರಹ್ಮಾವರ, ಮೂಡಿಗೆರೆ ಮತ್ತು ಪೊನ್ನಂಪೇಟೆ) ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕೃಷಿ ಮೇಳ, ಕ್ಷೇತ್ರೋತ್ಸವ ಮತ್ತು ಕೃಷಿ ತಂತ್ರಜ್ಞಾನ ಸಪ್ತಾಹಗಳನ್ನು ಹಮ್ಮಿಕೊಂಡು ವಿಶ್ವವಿದ್ಯಾನಿಲಯದ ಸಂಶೋಧನೆಗಳನ್ನು ಪ್ರದರ್ಶಿಸಲಾಯಿತು.

Krushi Mela 2013

UAHS, Shivamogga organized Three day’s Krishimela from 25-27, October-2013 on Crop production technologies, organized crop seminars and farmers to farmer, Farm machineries seminars etc for the benefit of Farming communities. About 200 exhibition stalls were arranged for farmers. Mora than 1,22,000/- farmers actively participated in the Krishimela. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಗತಿಯನ್ನು ರೈತರಿಗೆ ಪರಿಚಯಿಸಲು ಮತ್ತು ರೈತರ ಕೃಷಿ ಸಮಸ್ಯೆಗಳನ್ನು ವಿಜ್ಞಾನಿಗಳೊಂದಿಗೆ ಸಮಾಲೋಚಿಸಲು ಅಕ್ಟೋಬರ್ 25, 26 ಮತ್ತು 27 ರಂದು ಕೃಷಿ ಮೇಳ ಏರ್ಪಡಿಸಲಾಗಿತ್ತು. ಈ ಕೃಷಿ ಮೇಳದಲ್ಲಿ ಕೃಷಿ ತಜ್ಞರೊಂದಿಗೆ ಸಂವಾದ, ರೈತರಿಂದ ರೈತರಿಗೆ ಚರ್ಚಾಗೋಷ್ಠಿ, ಕೃಷಿ ಯಂತ್ರೋಪಕರಣಗಳ ವಿಚಾರ ಸಂಕಿರಣ ಮತ್ತು ವಿವಿಧ ಬೆಳೆಗಳ ಉತ್ಪಾದನಾ ತಾಂತ್ರಿಕತೆ ಕುರಿತ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೃಷಿ ಮೇಳದಲ್ಲಿ 1,22,000ಕ್ಕೂ ಹೆಚ್ಚು ಕೃಷಿಕರು ಮತ್ತು ವಿಸ್ತರಣಾ ಕಾರ್ಯಕರ್ತರು ಭಾಗವಹಿಸಿ ಸದುಪಯೋಗವನ್ನು ಪಡೆದುಕೊಂಡರು.

CONTACTಸಂಪರ್ಕಿಸಿ

DIRECTORATE OF EXTENTION

ವಿಸ್ತರಣಾ ನಿರ್ದೇಶನಾಲಯ

university of agricultural and horticultural sciences,
SHIVAMOGGA, KARNATAKA INDIA
ಕೃಷಿ ಮತ್ತು ತೋಟಕಾರಿಕೆ ವಿಶ್ವವಿದ್ಯಾಲಯ,
ಶಿವಮೊಗ್ಗ, ಕರ್ನಾಟಕ, ಭಾರತ
+91 94808 38957
+91 8182 267015
de@uahs.edu.in

Activities carried out during Lockdown Period – COVID-19 ಕೋವಿಡ್-19 : ಲಾಕ್‍ಡೌನ್ ಅವಧಿಯಲ್ಲಿ ಕೈಗೊಂಡ ಕೃಷಿ ಚಟುವಟಿಕೆಗಳು/ಕಾರ್ಯಕ್ರಮಗಳು

Marketing linkage for fruits and vegetable by KVK, Shivamogga thorugh FPOs
ಅಗ್ರಿ ವಾರ್ ರೂಂ ಸ್ಥಾಪನೆ

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗವು ಕರೋನಾ ಲಾಕ್‍ಡೌನ್ ಅವಧಿಯಲ್ಲಿ ರೈತರಿಗೆ ನೆರವಾಗುವ ಹಲವಾರು ಕಾರ್ಯಗಳನ್ನು ಮಾಡಿದೆ, ಮಾಡುತ್ತಿದೆ. ಎಲ್ಲಾ ಜಿಲ್ಲೆಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಿ ಅವರ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಕ್ಕಾಗಿ ನೀಡಲಾಗಿದೆ ಹಾಗೂ ಅಗ್ರಿವಾರ್ ರೂಂ ಸ್ಥಾಪಿಸಿ ಆ ದೂರವಾಣಿಗಳನ್ನು ಮಾಧ್ಯಮಗಳಿಗೆ ಕೊಡಲಾಗಿದೆ. ಇದರ ಪರಿಣಾಮ ಒಟ್ಟಾರೆ ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಇದುವರೆಗೆ 1554 ದೂರವಾಣಿಗಳು ಸ್ವೀಕಾರವಾಗಿದ್ದು ಎಲ್ಲಾ ಕರೆಗಳಿಗೆ ಪ್ರತಿಕ್ರಿಯೆ ಹಾಗೂ ಸೂಕ್ತ ನೆರವು ಒದಗಿಸಲಾಗಿದೆ.

ಅಗ್ರಿ ವಾರ್ ರೂಂ ಸ್ಥಾಪನೆ:

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ರೈತರ ನೆರವಿಗೆ ‘ಅಗ್ರಿ ವಾರ್ ರೂಂ’ ಪ್ರಾರಂಭಿಸಲಾಗಿದೆ. ಕೋವಿಡ್ ಸಂಕಟದಲ್ಲಿ ರೈತರಿಗೆ ತಾಂತ್ರಿಕ ಮಾಹಿತಿ, ಸಲಹೆ ಹಾಗೂ ಕ್ಷೇತ್ರ ಭೇಟಿ ಅಗತ್ಯಗಳಿಗೆ ಸ್ಪಂದಿಸಲು ಈ ವಾರ್ ರೂಂ ನೆರವಾಗಲಿದೆ ಹಾಗೂ ಸಂಪರ್ಕ ಮಾಹಿತಿ, ಮಾರಾಟ ವ್ಯವಸ್ಥೆಗೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಲಿದೆ. ಈ ಕೇಂದ್ರವು ರೈತರಲ್ಲಿ ಕೋವಿಡ್ 19ರ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಬೀಜ, ನರ್ಸರಿಗಳು ಲಭ್ಯವಿರುವ ಮಾಹಿತಿ ನೀಡಲಾಗುತ್ತಿದೆ. ಡಾ. ಎಂ. ಕೆ. ನಾಯಕ್, ಕುಲಪತಿಗಳು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ವಾರ್ ರೂಂ ಉದ್ಘಾಟನೆ ಮಾಡಿದರು. ಡಾ. ಹೆಚ್. ಆರ್. ಯೋಗೀಶ್, ಉಪನಿರ್ದೇಶಕರು, ತೋಟಗಾರಿಕೆ ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

University of Agricultural and Horticultural Sciences, Shivamogga has made many programmes to help the farmers during lockdown period. University has nominated nodal officers for each district under UAHS jurisdiction and given their mobile numbers for farmers contact and university has started Agriwar room and given war room helpline number to press media. From this impact, a total of 1554 calls have been received and given necessary information and need based help to all the farmers who approached Agriwar room during this period.

Agri-War Room:

The “Agri-War Room” shall be vigilant of the Agricultural activities in the 7 districts of the state and support the farming community to overcome the stress by providing adequate information in marketing of farm produce and facilitate ongoing farm activities. Hon’ble Vice chancellor Dr. M.K.Naik, inaugurated the Agri-war room during this occasion. Dr. H.R.Yogeesh, Deputy Director of Horticulture, Shivamogga has also participated.

    ಕೆ.ವಿ.ಕೆ. ಶಿವಮೊಗ್ಗ KVK Shivamogga ಕೆ.ವಿ.ಕೆ. ಹಿರಿಯೂರು KVK Hiriyur ಕೆ.ವಿ.ಕೆ. ಮೂಡಿಗೆರೆ KVK Mudigere ಕೆ.ವಿ.ಕೆ. ಬ್ರಹ್ಮಾವರ KVK Brahmavara ಕೆ.ವಿ.ಕೆ. ದಾವಣಗೆರೆ TKVK Davanagere ಕೆ.ವಿ.ಕೆ. ಕೊಡಗು KVK Kodagu ಕೆ.ವಿ.ಕೆ. ಮಂಗಳೂರು KVK Mangaluru ಒಟ್ಟು Total
ಸ್ವೀಕರಿಸಿ ಉತ್ತರಿಸಿದ ದೂರವಾಣಿ ಕರೆಗಳು Received and answered Telephone Call 125 235 254 136 190 225 389 1554
ಕೃಷಿ ಸಲಹೆಗಳು Crop advisory services 325 185 303 24 11 180 1750 1778
ಸಾಮಾಜಿಕ ಜಾಲತಾಣ ಸಂಪರ್ಕಗಳು Social website linkage 450 09 32666 67 25 2300 1804 37321
ಕ್ಷೇತ್ರ ಭೇಟಿಗಳು Field Visits 2 23 21 8 8 8 - 70
ಮಾರುಕಟ್ಟೆ ಕಾರ್ಯಕ್ಕೆ ಸಂಪರ್ಕ(ತೂಕ)
(ಅಂದಾಜುಮೌಲ್ಯ/ರೂ)
Linkage of Marketing channel(ton)
(Appoximate value/Rs.)
104 ಟನ್Ton
(11,108,600)
102 ಟನ್Ton
(88,40,000)
33.04 ಟನ್Ton
(6,73,805)
320 ಟನ್Ton
(38,40,000)
13.83 ಟನ್Ton
(2,76,400)
15 ಟನ್Ton
(4,50,000)
85 ಟನ್Ton
(12,44,520)
672.87 ಟನ್‍ಗಳುTon
(1,94,33,325)
ಪರಿಹರಿಸಿದ ಸಮಸ್ಯೆಗಳು Problem resolved 108 150 92 121 82 106 123 719

Diploma in Agricultural Extension Services for Input Dealers (DAESI) ಕೃಷಿ ಪರಿಕರಗಳ ವಿತರಣಾ ಸೇವೆ ಡಿಪ್ಲೊಮಾ

DASEI
DASEI

ಜಾಗತೀಕರಣ ಮತ್ತು ವಿಶ್ವ ವಾಣಿಜ್ಯ ಸಂಸ್ಥೆಯ ಆಡಳಿತದ ದೃಷ್ಟಿಯಿಂದ, ಬೆಳೆಗಳ ವೈವಿಧ್ಯೀಕರಣ, ಉತ್ಪಾದಕತೆ ಮತ್ತು ಗುಣಮಟ್ಟದಲ್ಲಿ ಸುಧಾರಣೆ, ಕೃಷಿ ವೆಚ್ಚವನ್ನು ಕಡಿಮೆ ಮಾಡುವಾಗ, ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕವಾಗಬೇಕಾದ ಅವಶ್ಯಕತೆಯಿದೆ. ಮುಂದಿನ ಋತುವಿನಲ್ಲಿ ಬೆಳೆಯಬೇಕಾದ ವಿವಿಧ ಬೆಳೆಗಳ ಪ್ರದೇಶಗಳನ್ನು ವ್ಯವಸ್ಥಿತಗೊಳಿಸುವುದರಿಂದ ಮಾರುಕಟ್ಟೆಯ ಅವಶ್ಯಕತೆ ಮತ್ತು ಮಾರುಕಟ್ಟೆಯಲ್ಲಿನ ಸರಕುಗಳ ಆಗಮನದ ನಡುವೆ ಆರೋಗ್ಯಕರ ಸಂಬಂಧವನ್ನು ಸೃಷ್ಟಿಸುತ್ತದೆ ಮತ್ತು ಇದರಿಂದಾಗಿ ಬೆಲೆಗಳನ್ನು ಸ್ಥಿರಗೊಳಿಸುತ್ತದೆ. ದೇಶದಲ್ಲಿ 2.82 ಲಕ್ಷ ಕೃಷಿ ಪರಿಕರಗಳ ವಿತರಕರ ದೊಡ್ಡ ಜಾಲವಿದೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಬಹಳಷ್ಟು ವಿತರಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಗ್ರಾಮ ಮಟ್ಟದಲ್ಲಿ ರೈತರಿಗೆ ಪರಿಕರಗಳ ಬಗ್ಗೆ ಕೃಷಿ ಜ್ಞಾನವನ್ನು ನೀಡುವ ಮೂಲಕ ವೈಜ್ಞಾನಿಕ ಜ್ಞಾನದಿಂದ ಸಮೃದ್ಧರಾಗಬೇಕು ಮತ್ತು ಅಸ್ತಿತ್ವದಲ್ಲಿರುವ ಕಾರ್ಯಗಳು, ಲಾಭದಾಯಕ ಕೃಷಿ ಪರಿಕರಗಳ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ಅವರು ಕೃಷಿ ಇಲಾಖೆ, ತೋಟಗಾರಿಕೆ, ಪ್ರಾಣಿ ವಿಜ್ಞಾನ ಮತ್ತು ಅನೇಕ ಬಹುರಾಷ್ಟ್ರೀಯ ಕಂಪನಿಗಳ ಮೂಲ ಮಟ್ಟದ ಕಾರ್ಮಿಕರೊಂದಿಗೆ ನಿಕಟ ಹೊಂದಾಣಿಕೆಯಲ್ಲಿ ಕೆಲಸ ಮಾಡುತ್ತಾರೆ ಮತ್ತು ರೈತರಿಗೆ ಮುಖ್ಯ ಕೊಂಡಿಯಾಗಿದ್ದಾರೆ. ಬಹುಪಾಲು ರೈತರು ಹತ್ತಿರದ ವಿತರಕರಿಂದ ಕ್ರೆಡಿಟ್ ಆಧಾರದ ಮೇಲೆ ಪರಿಕರಗಳನ್ನು ಖರೀದಿಸುತ್ತಾರೆ ಎಂಬುದು ತಿಳಿದಿರುವ ಸಂಪ್ರದಾಯವಾಗಿದೆ, ಅದನ್ನು ಅವರ ಉತ್ಪನ್ನಗಳ ಮಾರಾಟದ ಮೇಲೆ ಮರುಪಾವತಿ ಮಾಡಲಾಗುತ್ತದೆ. ಇದು ರೈತರು ತಮ್ಮ ವ್ಯಾಪಾರಿಗಳೊಂದಿಗೆ ಲಭ್ಯವಿರುವ ಪರಿಕರಗಳನ್ನು ಖರೀದಿಸಲು ಅಗತ್ಯವಾಗಿರುತ್ತದೆ. ಈ ಎಲ್ಲಾ ಸಂಗತಿಗಳು ರೈತನಿಗೆ ಶಿಕ್ಷಣ ನೀಡುವಂತೆ ಕೃಷಿ ಪರಿಕರಗಳ ವ್ಯಾಪಾರಿಗಳಿಗೆ ಶಿಕ್ಷಣ ನೀಡಬೇಕಾಗಿದೆ. ವಿನ್ಯಾಸಗೊಳಿಸಲಾದ ಈ ಡಿಪ್ಲೊಮಾ ಕೋರ್ಸ್ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದ ಕೃಷಿ ಪರಿಕರಗಳ ವಿತರಕರು ಮತ್ತು ನಿರೀಕ್ಷಿತ ವಿತರಕರ ಅಗತ್ಯಕ್ಕೆ ಸರಿಹೊಂದುತ್ತದೆ. ಆದ್ದರಿಂದ, ಕರ್ನಾಟಕದ ಶಿವಮೊಗ್ಗದಲ್ಲಿ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸುವುದು ಸೂಕ್ತ ಮತ್ತು ಸಮರ್ಥನೆಯಾಗಿದೆ.

In view of globalization and World Trade Organization regime, there is a need for diversification of crops, improvement in productivity and quality, while reducing cost of cultivation, to be competitive in domestic and international markets. Systematization of areas under different crops to be grown in ensuing season creates healthy relation between market requirement and arrivals of commodities in the market thereby stabilizing the prices. There is a large network of 2.82 lakh Agricultural input dealers in the country and in Shimoga district around 312 dealers are operating. These are the persons who are well spread by a network and are the people who are imparting agricultural knowledge about inputs to the farmers at village level. These dealers have to be enriched with the scientific knowledge and also to make them aware of the existing acts, pros and cons of spurious agricultural inputs. They work in close co-ordination with base level workers of Department of Agriculture, Horticulture, Animal Science and many multinational companies and also are the main link for farmers. It is a known tradition that majority of the farmers purchase inputs from the nearby dealers on credit basis, which shall be repaid on marketing of their produce. This necessitates the farmers to purchase the inputs available with their dealer. All these facts needs educating the input dealer in turn educating the farmer. This Diploma Course designed will suit the requirement of the input dealers and prospective dealers of SSLC passed standard. Hence, starting of the Diploma Course at Shimoga of Karnataka has been appropriate and justified.

ಡಿಪ್ಲೊಮಾ ಕಾರ್ಯಕ್ರಮ: DIPLOMA PROGRAMME:

ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ತೊಂಬತ್ತು ಶೇಕಡಾ ಕೃಷಿ ಪರಿಕರಗಳ ವಿತರಕರು ಯಾವುದೇ ಔಪಚಾರಿಕ ಕೃಷಿ ಶಿಕ್ಷಣವನ್ನು ಹೊಂದಿಲ್ಲ. ಅವರು ಮೂಲತಃ ಉದ್ಯಮಿಗಳು ಮತ್ತು ವಿಭಿನ್ನ ಮಾರುಕಟ್ಟೆ ಶಕ್ತಿಗಳ ಬಗ್ಗೆ ತಿಳಿದಿದ್ದಾರೆ ಮತ್ತು ಕೃಷಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ತಾಂತ್ರಿಕ ಮಾಹಿತಿಯ ಕೊರತೆಯಿದೆ.

Nearly ninety per cent of Agricultural input dealers operating in our country do not have any formal Agricultural education. They are basically businessmen and know about different market forces and lack technical information relating to Agricultural technology.

ಕೃಷಿ ಪರಿಕರಗಳ ವಿತರಕರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೊಮಾ (ಆಂಇSI) ಆಧಾರಿತ ಕೃಷಿಯ ಸ್ಥಳ ನಿರ್ದಿಷ್ಟ ಬೆಳೆ ಉತ್ಪಾದನಾ ತಂತ್ರಜ್ಞಾನಗಳು ಮತ್ತು ಕ್ಷೇತ್ರ ಸಮಸ್ಯೆಗಳಿಗೆ ಸಂಬಂಧಿಸಿದ ನಿರ್ದಿಷ್ಟ ಅಭ್ಯಾಸಗಳ ಪ್ಯಾಕೇಜ್ (ಪ್ಯಾಕೇಜ್ ಆಫ್ ಪ್ರಾಕ್ಟೀಸಸ್) ಮತ್ತು ಕೃಷಿ ಪರಿಕರಗಳ ದಕ್ಷ ನಿರ್ವಹಣೆಯಲ್ಲಿ ವಿತರಕರ ಸಾಮಥ್ರ್ಯ ವೃದ್ಧಿಗೆ ಸಂಬಂಧಿಸಿದ ದೃಷ್ಟಿಕೋನವನ್ನು ಒದಗಿಸಲು ಪ್ರಾರಂಭಿಸಲಾಗಿದೆ. ಹಾಗೂ ಕೃಷಿ ಮಾಹಿತಿಯ ಬಗ್ಗೆ ಕೃಷಿ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.

The Diploma in Agricultural Extension Services for Input Dealers (DAESI) is initiated to provide orientation on location specific crop production technologies of based agriculture and specific Package of Practices related to field problems and capacity building of input dealers in efficient handling of inputs. To increase awareness among farming community about the farm information.

ಕೃಷಿ ಒಳಹರಿವಿನ ನಿಯಮಗಳನ್ನು ನಿಯಂತ್ರಿಸುವ ಕಾನೂನುಗಳ ಬಗ್ಗೆ ಜ್ಞಾನವನ್ನು ನೀಡಲು ಮತ್ತು ಇತ್ತೀಚಿನ ಕೃಷಿ ತಂತ್ರಜ್ಞಾನದ ಪರಿಣಾಮಕಾರಿ ಪ್ರಸಾರಕ್ಕಾಗಿ ವಿಸ್ತರಣಾ ಚಟುವಟಿಕೆಗಳು ಮತ್ತು ಸಂವಹನ ಕಾರ್ಯತಂತ್ರಗಳ ಬಗ್ಗೆ ಜಾಗೃತಿ ಮೂಡಿಸಲು ಕೋರ್ಸ್ ಸಹಾಯ ಮಾಡುತ್ತದೆ. ಈ ಕೋರ್ಸ್ ವಿಶಾಲ ಆಧಾರಿತ ಕೃಷಿಯ ಸ್ಥಳ ನಿರ್ದಿಷ್ಟ ಬೆಳೆ ಉತ್ಪಾದನಾ ತಂತ್ರಜ್ಞಾನಗಳು ಮತ್ತು ಕ್ಷೇತ್ರದ ಸಮಸ್ಯೆಗಳಿಗೆ ಸಂಬಂಧಿಸಿದ ಅಭ್ಯಾಸಗಳ ನಿರ್ದಿಷ್ಟ ಪ್ಯಾಕೇಜ್ ಬಗ್ಗೆ ದೃಷ್ಟಿಕೋನ ತರಬೇತಿಯನ್ನು ನೀಡುತ್ತದೆ.

The course will help in imparting knowledge about the laws governing regulations of Agricultural inputs and also to create awareness about extension activities and communication strategies for effective dissemination of the latest agricultural technology. This course will also provide orientation training on location specific crop production technologies of broad based Agriculture and specific Package of Practices related to field problems.

ಕೃಷಿ ಪರಿಕರಗಳ ವಿತರಕರ ಅಗತ್ಯಕ್ಕೆ ತಕ್ಕಂತೆ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಕೃಷಿ ಮತ್ತು ಅದರ ಸಂಬಂಧಿತ ಕ್ಷೇತ್ರಗಳಿಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಪಠ್ಯಕ್ರಮವನ್ನು ರೂಪಿಸಲಾಗಿದೆ ಮತ್ತು ಭವಿಷ್ಯದಲ್ಲಿ ಉತ್ತಮ ಸ್ವ ಉದ್ಯೋಗಾವಕಾಶಗಳನ್ನು ಉತ್ತೇಜಿಸಲು ತರಬೇತಿ ಪಡೆಯುವವರಲ್ಲಿ ಉದ್ಯಮಶೀಲತಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅನುಕೂಲಕ್ಕಾಗಿ ಕ್ರಿಯಾಶೀಲ ಆಧಾರಿತ ವಿಧಾನವಾಗಿದೆ. ತಂತ್ರಜ್ಞಾನದ ವರ್ಗಾವಣೆಯಲ್ಲಿ ಕೃಷಿ ಪರಿಕರಗಳ ವಿತರಕರ ಪಾತ್ರವು ಮಹತ್ವದ್ದಾಗಿದೆ, ಆದರೂ ಅವರ ಜ್ಞಾನವು ಸಮರ್ಪಕವಾಗಿದೆ. ಜ್ಞಾನದ ಅಂತರವನ್ನು ನಿವಾರಿಸಲು ವಿತರಕರಿಗೆ ಔಪಚಾರಿಕ ಕೃಷಿ ಶಿಕ್ಷಣವನ್ನು ನೀಡಲು " ಕೃಷಿ ಪರಿಕರಗಳ ವಿತರಣಾ ಸೇವೆ ಡಿಪ್ಲೊಮಾ " (ಡಿಎಇಎಸ್‍ಐ) ಎಂಬ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಅನ್ನು ಹೊಂದಲು ಉದ್ದೇಶಿಸಲಾಗಿದೆ, ಇದರಿಂದಾಗಿ ಅವರು ತಮ್ಮ ವ್ಯವಹಾರವನ್ನು ವಿಸ್ತರಣಾ ಸೇವೆಗಳೊಂದಿಗೆ ಜೋಡಿಸಬಹುದು ಜೊತೆಗೆ ನಿಯಂತ್ರಕ ಜವಾಬ್ದಾರಿಗಳನ್ನು ನಿರ್ವಹಿಸಬಹುದು. ಕರ್ನಾಟಕ ರಾಜ್ಯ ಸರ್ಕಾರವು 2007 - 2008ರ ಅವಧಿಯಲ್ಲಿ ಶಿವಮೊಗ್ಗದ ಕೃಷಿ ಕಾಲೇಜಿನಲ್ಲಿ ಈ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಲು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನೆರವು ನೀಡಿದೆ. ಈವರೆಗೆ 428 ಅಭ್ಯರ್ಥಿಗಳು ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಮತ್ತು ಡಿಪ್ಲೊಮಾ ಪ್ರಮಾಣೀಕರಣವನ್ನು ಪಡೆದಿದ್ದಾರೆ.

The course is designed to suit the requirement of Input dealers. The syllabus is formulated based on technical information related to agriculture and all allied fields and is action oriented approach for the benefit of developing entrepreneurial skills among the trainees to promote better self employment opportunities in future. The role of input dealers in transfer of technology is found significant though their knowledge is found adequate. In order to bridge the gap in knowledge it is proposed to have a one year Diploma Course to impart formal Agricultural education to the dealers so that they can couple their business with extension services besides discharging regulatory responsibilities enjoined on them. The Karnataka State government has provided financial assistance to start the course during 2007-08. So far, 428 candidates have successfully completed the DAESI course with certification.

table

ಸೂಚನೆಗಳು: Instructions:

 1. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕಾಯ್ದೆ ಮತ್ತು ಕಾನೂನುಗಳು/ ನಿಯಮಾವಳಿಗಳು ಹಾಗೂ ಕಾಲಕಾಲಕ್ಕೆ ಹೊರಡಿಸಿದ ಸರ್ಕಾರಿ ಆದೇಶಗಳ ಪ್ರಕಾರ ಎಲ್ಲಾ ಅರ್ಹತಾ ಅಗತ್ಯತೆಗಳ ಪೂರೈಸುವಿಕೆಗೆ ಪ್ರವೇಶಾತಿ ವಿಷಯವು ಒಳಪಟ್ಟಿರುತ್ತದೆ.

  The admission is subject to fulfilment of all eligibility requirements prescribed as per the UAHS, Shivamogga Act and Statues/ Regulations and Government orders issued from time to time.

 2. ಕಾಲಕಾಲಕ್ಕೆ ವಿಶ್ವವಿದ್ಯಾಲಯದಿಂದ ನಿಗದಿಗೊಳಿಸಲಾದ ಕಾನೂನು ಮತ್ತು ನಿಯಮಾವಳಿಗಳನ್ನು ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಅನುಸರಿಸಬೇಕು.

  The students admitted to the University shall abide by the rules and regulations prescribed by the University from time to time.

 3. ಕೋಸ್ರ್ನ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯದ ಶೈಕ್ಷಣಿಕ ನಿಯಮಾವಳಿಗಳು ಅನ್ವಯಿಸುತ್ತದೆ.

  The admitted students of Diploma course are bound by UAHS Academic Regulation as and where it is applicable.

 4. ಈ ವಿವರಣಾ ಪುಸ್ತಕದಲ್ಲಿ ವಿವರಿಸಿರುವ ಯಾವುದೇ ಅಥವಾ ಎಲ್ಲ ನಿಬಂಧನೆಗಳನ್ನು ಬದಲಿಸುವ ಹಕ್ಕನ್ನು ವಿಶ್ವವಿದ್ಯಾಲಯವು ಕಾಯ್ದಿರಿಸಿಕೊಂಡಿರುತ್ತದೆ.

  The University reserves the right to change any or all condition(s) prescribed in this information bulletin, at its discretion.

 5. ಅನಿವಾರ್ಯ ಸಂದರ್ಭಗಳಲ್ಲಿ ಸಂಗತಿಗಳ ವೇಳಾಪಟ್ಟಿಯಲ್ಲಿನ ಯಾವುದೇ ಬದಲಾವಣೆಗಳನ್ನು ಪತ್ರಿಕೆಗಳಲ್ಲಿ ಮತ್ತು ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿಯೂ ಸಹ ಸಂಕ್ಷಿಪ್ತ ಸುದ್ದಿ ರೂಪದಲ್ಲಿ ಪ್ರಕಟಿಸಲಾಗುವುದು. ವೈಯಕ್ತಿಕವಾಗಿ ಯಾವುದೇ ಸೂಚನೆಯನ್ನು ಕಳುಹಿಸಲಾಗುವುದಿಲ್ಲ.

  Any changes in the schedule of events due to unavoidable circumstances shall be published as a news brief in leading newspapers and also in the University website. Individual intimation will not be sent.

 6. ಕೋರ್ಸ್‍ನ ನಿಯಮಗಳು: Rules for completion of the course:

  1. ಪ್ರತಿ ಭಾನುವಾರದಂದು 10 ರಿಂದ 4 ರವರೆಗೆ ತರಗತಿಗಳನ್ನು ನಡೆಸಲಾಗುತ್ತದೆ.

   The classes will be conducted on every Sunday between 10 AM to 4 PM.

  2. ವಿದ್ಯಾರ್ಥಿಗಳು ಮೊದಲ ಸೆಮಿಸ್ಟರ್‍ಗಾಗಿ ನೋಂದಾಯಿಸಿದ ನಂತರ ಗ್ರೇಡ್ ಪಾಯಿಂಟ್‍ನೊಂದಿಗೆ ಕನಿಷ್ಟ ಒಂದು ಕೋರ್ಸನ್ನು ತೃಪ್ತಿಕರವಾಗಿ ಪೂರ್ಣಗೊಳಿಸಬೇಕಿದ್ದು, ಇಲ್ಲದೆ ಹೋದಲ್ಲಿ ಎಸ್‍ಎ (ಹಾಜರಾತಿಯ ಕೊರತೆ) ಅಥವಾ ಎಫ್ (ವಿಫಲತೆ) ಹೊಂದಿದರೆ ಪ್ರವೇಶಾತಿಯು ರದ್ದುಗೊಳ್ಳುತ್ತದೆ. ಆದಾಗ್ಯೂ, ನಿಜವಾದ ಪ್ರಕರಣಗಳಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿಶ್ಚಲತೆ ಉಂಟಾದ ವಿದ್ಯಾರ್ಥಿಯು ಸೂಕ್ತ ಪುರಾವೆಗಳನ್ನು ನೀಡಿದಲ್ಲಿ ವಿನಾಯಿತಿ ನೀಡಬಹುದಾಗಿರುತ್ತದೆ. ಇಂತಹ ಪ್ರಕರಣಗಳ ನೈಜತೆಯನ್ನು ಪರೀಕ್ಷಿಸಲು ಒಂದು ಸಮಿತಿಯನ್ನು ಸಂಯೋಜಕರವರ ಅಧ್ಯಕ್ಷತೆಯಲ್ಲಿ ರಚಿಸಿ ವಿಸ್ತರಣಾ ನಿರ್ದೇಶಕರ ಅನುಮೋದನೆಗೆ ಶಿಫಾರಸ್ಸು ಮಾಡಲಾಗುತ್ತದೆ.

   Students who have registered for the first semester should satisfactorily complete at least one course with a pass grade point other than SA (Shortage of Attendance) or F (Fail), failing which the admission shall stand cancelled. However, in genuine cases of hospitalization resulting in immobilization, a student may be exempt provided he/she produces a valid proof. The genuine of such cases shall be examined by a committee under the chairmanship of the Co-ordinator which will recommend to the Director of Extension for final approval.

  Table

ರೈತರ ಯಶೋಗಾಥೆಗಳು ಹಾಗೂ ವಿಸ್ತರಣಾ ನಿರ್ದೇಶನಾಲಯದ ಚಟುವಟಿಕೆಗಳ ವಿಡೀಯೋಗಳು

Correspondence: ಪತ್ರವ್ಯವಹಾರ:
University of Agricultural and Horticultural Sciences ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ
Navile,
SHIVAMOGGA - 577204,
KARNATAKA, INDIA
ನವಿಲೆ,
ಶಿವಮೊಗ್ಗ - 577204,
ಕರ್ನಾಟಕ, ಭಾರತ
Communication: ಸಂವಹನ:
Vice Chancellor ಕುಲಪತಿಗಳ ಕಛೇರಿ   +91 8182 267001,   vcuahss2014@gmail.com
Registrar ಕುಲಸಚಿವರ ಕಛೇರಿ   +91 8182 267011,   registrarshimoga@gmail.com
Director of Research ಸಂಶೋಧನಾ ನಿರ್ದೇಶನಾಲಯ   +91 8182 267013,   druahs@gmail.com
Director of Extension ವಿಸ್ತರಣಾ ನಿರ್ದೇಶನಾಲಯ   +91 8182 267015,   uahsde@gmail.com
Director of Education ಶಿಕ್ಷಣ ನಿರ್ದೇಶನಾಲಯ   +91 8182 267013,   doe.uahs@gmail.com
Director of PG Studies ಸ್ನಾತಕೋತ್ತರ ನಿರ್ದೇಶನಾಲಯ   +91 8182 267012,   deanpgs.uahs@gmail.com
Director of SC/ST Cell ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕ   +91 94808 38207,   dirscstcelluahs@gmail.com
Page Hits : 232927
ಪುಟ ಭೇಟಿ : 232927
Last modified on :
07 October 2021
ಕೊನೆಯ ಬಾರಿ ಮಾರ್ಪಡಿಸಲಾಗಿದೆ :
07 October 2021

Designed, Developed and Maintained by PRABHAT SERVICES ®™© for UAHS® All right Reserved.