header

DIRECTORATE OF STUDENT WELFARE ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯ

 

DSW

Dr. N. Sivasankar  M.F Sc., Ph.D

ಡಾ. ಎನ್. ಶಿವಶಂಕರ್  ಎಂ.ಎಫ್ ಎಸ್ಸಿ. , ಪಿಎಚ್‌. ಡಿ.


   Dean ( Student Welfare )    ಡೀನ್ ( ವಿದ್ಯಾರ್ಥಿ ಕಲ್ಯಾಣ )
dsw@uahs.edu.in
+91 94808 38959
+91 8182-267002

ಸಂದೇಶMessage

ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗಕ್ಕೆ ನಿಮಗೆ ಸ್ವಾಗತಿಸಲು ನಾನು ಹರ್ಷಿಸುತ್ತೇನೆ. ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರದರ್ಶನ ಕಲೆಗಳು ಮುಂತಾದ ಹಲವಾರು ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿ ವೃತ್ತಿಜೀವನದ ಒಟ್ಟಾರೆ ಅಭಿವೃದ್ಧಿಯಲ್ಲಿ ನಿರ್ದೇಶನಾಲಯವು ಪ್ರಮುಖ ಪಾತ್ರವಹಿಸಿದೆ. ವಿದ್ಯಾರ್ಥಿಗಳಲ್ಲಿನ ಸುಪ್ತವಾದ ಪ್ರತಿಭೆಯನ್ನು ಗುರುತಿಸಿ ಅವರ ಕೌಶಲ್ಯ ಸಾಮರ್ಥ್ಯ ಹೆಚ್ಚಿಸಲು ನುರಿತ ತರಬೇತಿದಾರರಿಂದ ತರಬೇತಿ ನೀಡಿ ವಿವಿಧ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಕಾರಣವಾಗಿದೆ. ನಿರ್ದೇಶನಾಲಯವು ವಿದ್ಯಾರ್ಥಿಗಳು ದೈಹಿಕ ಶಿಕ್ಷಣ ಮತ್ತು ರಾಷ್ಟ್ರೀಯ ಸೇವಾಯೋಜನೆಯಲ್ಲಿ ಭಾಗವಹಿಸಲು ಉತ್ತೇಜಿಸುತ್ತದೆ. ಆವರಣದಲ್ಲಿ ವಿದ್ಯಾರ್ಥಿಗಳ ಅನುಚಿತ ವರ್ತನೆಗಳನ್ನು ತಡೆಯುವಲ್ಲಿ ಮುಖ್ಯಪಾತ್ರವಹಿಸುತ್ತಿದೆ, ತರಗತಿಗೆ ವಿದ್ಯಾರ್ಥಿಗಳು ಹೆಚ್ಚು ಗೈರುಹಾಜರಾಗುವುದನ್ನು ತಡೆದು ಶಿಸ್ತು ಕ್ರಮ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ವಿದ್ಯಾರ್ಥಿಗಳು ವಿವಿಧ ಕ್ಲಬ್‍ಗಳಲ್ಲಿ ಹಾಗೂ ಅಧ್ಯಯನ ಮತ್ತು ಮನೋರಂಜನ ಕೇಂದ್ರಗಳಲ್ಲಿ, ಭಾಗವಹಿಸುತ್ತಿದ್ದಾರೆ ಇದರಿಂದ ನಾಯಕತ್ವದ ಗುಣಗಳು ಹೊರಹೊಮ್ಮುತ್ತದೆ, ಜೊತೆಗೆ ಕೌಶಲ್ಯ ಅಭಿವೃದ್ಧಿ, ವ್ಯಕ್ತಿಗತ ಅಭಿವೃದ್ಧಿ, ನಿರ್ದೇಶನಾಲಯದ ಮುಖ್ಯ ಗುರಿಯಲ್ಲಿ ಒಂದು, ಸಂವಹನ ಕೌಶಲ್ಯ, ಸಂದರ್ಶನ ಕೌಶಲ್ಯ, ಅಧ್ಯಯನ ಕೌಶಲ್ಯ, ಒತ್ತಡ ನಿರ್ವಹಣೆ, ಅಪಾಯ ನಿರ್ವಹಣೆ ಮತ್ತು ವೃತ್ತಿ ಜೀವನದ ಪ್ರಗತಿ ಕೌಶಲ್ಯಗಳು, ಉದ್ಯಮಶೀಲತೆಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ದೇಶದ ನಾನಾ ಭಾಗದ ತಜ್ಞರಿಂದ ಈ ರೀತಿಯ ಕಾರ್ಯಗಾರಗಳನ್ನು ಆಯೋಜಿಸಲಾಗುತ್ತಿದೆ.It gives me an immense pleasure to welcome you to the Directorate of Student Welfare, UAHS Shivamogga. The directorate will play a pivotal role in the overall development of student’s career through organizing various co-curricular activities like sports & games, cultural events, performing arts, fine arts and literary events, etc. The Directorate meticulously works towards showcasing the hidden potential of the students which created a treasure house of talents and resulted in enthusiastic participation of the university in various state and national level competitions. We promote Physical education, NSS besides dealing with student’s misconduct, excessive absenteeism and other such irregularities for ensuring discipline among the student community on the campus. Student’s active participation in various clubs, study centres, recreation centres, etc., inculcates leadership qualities among them. All round Personality development of students is one of the prime mottos where in skills - inter personal skills, communication skills, interview skills, study skills, stress management, risk management and career advancement, employable skills, training programme on entrepreneurship development etc., is promoted by inviting the experts from diversity of faculty across the country.

ವಿವಿಧ ಕಾರ್ಯಗಳ ಜೊತೆಗೆ ನಿರ್ದೇಶನಾಲಯವು ವಿದ್ಯಾರ್ಥಿ/ ವಿದ್ಯಾರ್ಥಿನಿ ನಿಲಯಗಳ ಮೇಲ್ವೀಚಾರಣೆ ಮತ್ತು ಅತ್ಯಾಧುನಿಕ ಸೌಕರ್ಯಗಳನ್ನು ಪರಿಚಯಿಸಿದೆ ಜೊತೆಗೆ ಸ್ನಾತಕೋತ್ತರ ವಿದೇಶಿ ವಿದ್ಯಾರ್ಥಿಗಳ ಕೇಂದ್ರ, ಈ ರೀತಿಯ ಸೌಕರ್ಯದಿಂದ ಕೂಡಿದ ವಿದ್ಯಾರ್ಥಿನಿಲಯಗಳು ಸಾಗರೋತ್ತರ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ ಮತ್ತು ನೇಮಕಾತಿ ಮಾರ್ಗದರ್ಶನ ಕೇಂದ್ರದಿಂದ ಅನೇಕ ಕಂಪನಿಗಳಿಂದ ಉದ್ಯೋಗ ಸಂದರ್ಶನಗಳನ್ನು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿ ಉತ್ತಮ ಉದ್ಯೋಗವಕಾಶವನ್ನು ಕಲ್ಪಿಸುತ್ತಿದೆÉ. ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯವನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಒದಗಿಸಿದೆ, ಜೊತೆಗೆ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಅಪಘಾತ ಮತ್ತು ಆರೋಗ್ಯ ವಿಮೆಯನ್ನು ಉತ್ತಮ ವಿಮಾ ಕಂಪನಿಯಿಂದ ಪರಿಚಯಿಸಿದೆ.Along with the extramural activities, the directorate also oversees hostels equipped with modern facilities in different campuses. Further, the well maintained PG hostel with high-quality amenities including Foreign Students Centre at PG hostels attract many students from overseas. Placement Cell is providing on campus placements for the better career of students in consultation with different organizations, firms and industries. Health programmes and medical facilities for the students and staff are being provided in the campus Besides, Compulsory Group Health Insurance scheme has been introduced for providing better health services.

ಇವನ್ನೆಲ್ಲ ಹೊರತುಪಡಿಸಿ ನಿರ್ದೇಶನಾಲಯವು ರಾಷ್ಟ್ರೀಯ ಮತ್ತು ರಾಜ್ಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತದೆ ಅವುಗಳಲ್ಲಿ ಗಣರಾಜ್ಯೋತ್ಸವ, ಸದ್ಗುರು ಸೇವಾಲಾಲ್ ಜಯಂತಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಡಾ. ಬಾಬು ಜಗಜೀವನ್ ರಾಮ್ ಜಯಂತಿ, ಬಸವಜಯಂತಿ, ವಿಶ್ವ ಪರಿಸರ ದಿನಾಚರಣೆ, ಅಂತರಾಷ್ಟ್ರೀಯ ಯೋಗ ದಿನಾಚರಣೆ, ಕೆಂಪೇಗೌಡ ಜಯಂತಿ, ಸ್ವಾತಂತ್ರ ದಿನಾಚರಣೆ, ಗಾಂಧಿಜಯಂತಿ, ವಾಲ್ಮೀಕಿ ಜಯಂತಿ, ಕನ್ನಡ ರಾಜ್ಯೋತ್ಸವ ಇನ್ನೂ ಮುಂತಾದವು.This apart, the directorate also celebrates all the national festivals like, Republic Day, Sadguru Sevalal Jayanthi, International Women’s Day, Ambedkar Jayanthi, Basava Jayanthi, World Environment Day, International Yoga Day, Kempe Gowda Jayanthi, Independence Day, Gandhi Jayanthi, Valmiki Jayanthi, Kanaka Jayanthi, etc., with enthusiasm and happiness in a befitting manner. Observance of Communal Harmony Fortnight and Sadbhavana Day promote communal harmony on the campus and off the campus too. Above all, the onus of planning, directing and coordinating with other offices of the University for All Non-curricular Activities is vested with us.

ಎಲ್ಲದಕ್ಕಿಂತ ಹೆಚ್ಚಾಗಿ ಭಾವೈಕ್ಯತೆಯಿಂದ ಪಠ್ಯೇತರ ಚಟುವಟಿಕೆಗಳಿಗೆ ವಿಶ್ವವಿದ್ಯಾಲಯದ ಇತರ ಕಛೇರಿಗಳೊಂದಿಗೆ ಸಂಪರ್ಕಿಸಿ ಯೋಜನೆ ಮಾಡುವುದು, ನಿರ್ದೇಶಿಸುವ ಹಾಗೂ ಸಹಕರಿಸುವ ಕಾರ್ಯ ನಮ್ಮಿಂದಾಗುತ್ತಿದೆ.

Activities ಚಟುವಟಿಕೆಗಳು

ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯವು ಮನುಷ್ಯನ ಪ್ರಕ್ರಿಯೆಯ ಕಲೆಗೆ ಬದ್ಧವಾಗಿದೆ. ಪಠ್ಯಕ್ರಮ ಮತ್ತು ಪಠ್ಯೇತರ ಚಟುವಟಿಕೆಗಳಂತಹ ವಿದ್ಯಾರ್ಥಿ ವ್ಯಕ್ತಿಗಳ ಸಮಗ್ರ ಬೆಳವಣಿಗೆಯನ್ನು ಇದು ಸಮರ್ಥಿಸುತ್ತದೆ.

ವಿಶ್ವವಿದ್ಯಾನಿಲಯದಲ್ಲಿ ಪ್ರಾಥಮಿಕವಾಗಿ ತಮ್ಮ ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವ ಅಗತ್ಯತೆಗಳನ್ನು ನೋಡಿಕೊಳ್ಳಲು ನಿರ್ದೇಶನಾಲಯವನ್ನು ವಿನ್ಯಾಸಗೊಳಿಸಲಾಗಿದೆ. ಕೆಲವು ಪ್ರಮುಖ ಕಾರ್ಯಗಳು ಹೀಗಿವೆ.

The Directorate of Student Welfare is committed to the art of man making process. It advocates the comprehensive development of student personalities such as curricular and co curricular activities.

The Directorate is designed to look after the students need in the University primarily focusing on their personality development. Some of the important functions are:

 • ಗುಣಮಟ್ಟGeneration of Quality Man Power
 • ನಿರ್ವಹಣಾ ವ್ಯವಸ್ಥೆPerformance management System
 • ಸಾಧನೆ ಪ್ರೇರಣೆAchievement Motivation
 • ಉದ್ದೇಶಿತ ವ್ಯಕ್ತಿತ್ವವನ್ನು ಅಭಿವೃದ್ದಿಪಡಿಸುವುದುDevelopment of target oriented personality

ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯವು ಕೆಳಗಿನ ಕಾರ್ಯಗಳನ್ನು ನೋಡಿಕೊಳ್ಳುತ್ತದೆ.

In the light of such defined paths, the institutions of student welfare look after the following functions:

 • ವಿದ್ಯಾರ್ಥಿಗಳಿಗೆ ಸಲಹಾ ಸೇವೆ ಒದಗಿಸುವುದುProviding counselling service.
 • ಕ್ರೀಡಾ ಮತ್ತು ಸಾಂಸ್ಕತಿಕ ಚಟುವಟಿಕೆಗಳನ್ನು ಸಂಘಟಿಸುವುದುOrganizing sports and cultural activities.
 • ಸಾಮಥ್ರ್ಯ ನಿರ್ಮಾಣ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ದೃಷ್ಟಿಕೋನವನ್ನು ಒದಗಿಸುವುದುConducting capacity building programs and offering training and orientation towards competitive examinations.
 • ವಸತಿಗೃಹಗಳು ಮತ್ತು ಇತರ ವಿದ್ಯಾರ್ಥಿ ಸೌಲಭ್ಯಗಳನ್ನು ನೋಡಿಕೊಳ್ಳುವುದುLooking after the hostels and other student amenities.
 • ವೃತ್ತಿ ಮಾರ್ಗದರ್ಶನCareer guidance.
 • ಕ್ಯಾಂಪಸ್ ಆಯ್ಕೆಯಂತಹ ಉದ್ಯೋಗ ಅವಕಾಶಗಳುPlacement opportunities such as campus selection.
 • ವಿದ್ಯಾರ್ಥಿಗಳಿಗೆ ಬಹುಮುಖ ಅವಕಾಶಗಳನ್ನು ಒದಗಿಸಲು ಕಾರ್ಪೋರೇಟ್, ಸರ್ಕಾರಿ ಮತ್ತು ಇತರ ಸಂಸ್ಥೆಗಳೊಂದಿಗೆ ಸಂಪರ್ಕಗಳನ್ನು ಸ್ಥಾಪಿಸುವುದುEstablishing linkages with corporate, Government, and other institutions to provide versatile opportunities to the students.
 • ಕ್ಯಾಂಪಸ್ನಲ್ಲಿ ಉನ್ನತ ಗುಣಮಟ್ಟ ಮತ್ತು ಶಿಸ್ತುಗಳನ್ನು ಮೇಲ್ವಿಚಾರಣೆ ಮಾಡುವುದುMonitoring and managing higher standards and discipline in the campus.
 • ಸರ್ಕಾರಕ್ಕೆ ಸಂಬಂಧಿಸಿದ ವರದಿಗಳು ಮತ್ತು ಮಾಹಿತಿ ಸಂಗ್ರಹಿಸಿ, ವಿಶ್ವವಿದ್ಯಾಲಯದಲ್ಲಿ ಮಹಿಳಾ ಭ್ರಾತೃತ್ವವನ್ನು ಒಳಗೊಂಡಂತೆ ವೇಳಾಪಟ್ಟಿ, ಜಾತಿ ಮತ್ತು ಪರಿಶಿಷ್ಟ ಪಂಗಡದ ಶಿಕ್ಷಣ, ತರಬೇತಿ ಮತ್ತು ಉದ್ಯೋಗದ ವಿವಿಧ ಅಂಶಗಳ ಬಗ್ಗೆ ವರದಿ ನೀಡುವುದು.Collect reports and information regarding the Govt. orders on the various aspects of education, training and employment of Schedule Caste and Schedule Tribe including women fraternity in the university.
 • ಗುಣಮಟ್ಟದ ಸಂಸ್ಕತಿಯ ಆಂತರಿಕೀಕರಣ ಮತ್ತು ಉತ್ತಮ ಆಚರಣೆಗಳ ಸಾಂಸ್ಥಿಕೀಕರಣದ ಮೂಲಕ ಗುಣಮಟ್ಟದ ವರ್ಧನೆಗೆ ಕಡೆಗೆ ಸಾಂಸ್ಥಿಕ ಕಾರ್ಯಚಟುವಟಿಕೆಗೆ ಕ್ರಮಗಳನ್ನು ಉತ್ತೇಜಿಸುವುದುTo promote measures for institutional functioning towards quality enhancement through internalization of quality culture and institutionalization of best practices.
 • ಗೌಪ್ಯವಾದ ಆಲಿಸುವಿಕೆ ಮತ್ತು ಉಲ್ಲೇಖಿತ ಸೇವೆ ಒದಗಿಸುವುದುProviding a confidential listening and referral service.
 • ವಿದ್ಯಾರ್ಥಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಸಮಿತಿಗಳಲ್ಲಿ ವಿದ್ಯಾರ್ಥಿಗಳನ್ನು ಪ್ರತಿನಿಧಿಸುವುದುRepresenting students on University committees in relation to student welfare.
 • ವಿದ್ಯಾರ್ಥಿಗಳ ವೈಯಕ್ತಿಕ ವಿನಂತಿಗಳನ್ನು ನಿರ್ವಹಿಸುವುದುDealing with individual requests from students.
 • ಎಲ್ಲಾ ಕಲ್ಯಾಣ ವಿಷಯಗಳು ಮತ್ತು ನೀತಿಗಳ ಬಗ್ಗೆ ಕಾರ್ಯ ನಿರ್ವಾಹಕ ಮತ್ತು ವಿದ್ಯಾರ್ಥಿಗಳುKeeping the Executive and students informed of all welfare matters and policies.
 • ಕಲ್ಯಾಣ ವೇದಿಕೆ ಆಯೋಜಿಸುವುದು.Organize and Chair the Welfare forum.
 • ಚಿಗುರೆಲೆಗಳು, ಪೋಸ್ಟರ್‍ಗಳು ಅಥವಾ ಪುಸ್ತಕಗಳ ಪ್ರಕಟಣೆಯ ಮೂಲಕ ಕಲ್ಯಾಣ ಮಾಹಿತಿಯನ್ನು ಒದಗಿಸುವುದು.Providing welfare information through the publication of leaflets, posters or books.
 • ಕಲ್ಯಾಣ ನೀತಿಯನ್ನು ಪರಿಶೀಲಿಸುವುದು ಮತ್ತು ಕರಡು ರಚಿಸುವುದುReviewing and drafting welfare policy.
 • ಗುಣಮಟ್ಟದ-ಸಂಬಂಧಿತ ಸಾಂಸ್ಥಿಕ ಪ್ರಕ್ರಿಯೆಗಳಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಇತರ ಮಧ್ಯಸ್ಥಗಾರರಿಂದ ಪ್ರತಿಕ್ರಿಯೆಗಾಗಿ ವ್ಯವಸ್ಥೆ.Arrangement for feedback response from students, parents and other stakeholder on quality-related institutional processes.
 • ವಿದ್ಯಾರ್ಥಿಗಳಿಗೆ ಸೂಕ್ತ ವಸತಿ ಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆ ಮಾಡುವುದುMake arrangements to ensure suitable housing facilities for students.
 • ಕುಲಪತಿಗಳು ಅನುಮೋದಿಸಿದ ಯೋಜನೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ವ್ಯವಸ್ಥೆ ಮಾಡುವುದು.Arrange for employment of students in accordance with plans approved by the Vice-Chancellor.
 • ವಿದ್ಯಾರ್ಥಿಗಳ ಕಲ್ಯಾಣಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಪಾಲಕರೊಂದಿಗೆ ಸಂವಹನ ನಡೆಸುವುದು.Communicate with the guardian of the students concerning the welfare of students.
 • ವಿದ್ಯಾರ್ಥಿಗಳಿಗೆ ಪ್ರಯಾಣ ಸೌಲಭ್ಯಗಳನ್ನು ಒದಗಿಸುವುದುObtain travel facilities for students.
 • ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಶಿಕ್ಷಣಗಳು, ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ನೆರವು ನೀಡಬೇಕು.5. Assist the students in obtaining Scholarships, Studentships, etc by giving them information relating theretofore.
 • ಕಾಲಕಾಲಕ್ಕೆ ಕುಲಪತಿಗಳಿಂದ ನಿಯೋಜಿಸಬಹುದಾದಂತಹ ಇತರ ಕರ್ತವ್ಯಗಳನ್ನು ನಿರ್ವಹಿಸುವುದು.6. Perform such other duties as may be assigned to him/her from time to time by the vice-chancellor.

Anti Ragingರ‍್ಯಾಗಿಂಗ್ ನಿಯಂತ್ರಣ ಸಮಿತಿ

ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಹಾವಿದ್ಯಾಲಯಗಳಲ್ಲಿ ರ‍್ಯಾಗಿಂಗ್ ಸಂಪೂರ್ಣ ನಿಷೇಧಿಸಿದೆ. ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಾಗಿದ್ದು ಇದಕ್ಕಾಗಿ ಕಾಲೇಜು ವ್ಯಾಪ್ತಿಯಲ್ಲಿ ಪ್ರಧ್ಯಾಪಕರುಗಳು, ಹಾಸ್ಟೆಲ್ ವ್ಯಾಪ್ತಿಯಲ್ಲಿ ನಿಲಯ ಪಾಲಕರನ್ನೊಳಗೊಂಡ ತಂಡಗಳನ್ನು ರಚಿಸಿದ್ದು, ಇದಲ್ಲದೆ ಹಾಸ್ಟೇಲ್ ಕಾರಿಡಾರ್‍ಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಿದ್ದು, ವಿಶ್ವವಿದ್ಯಾಲಯ ಅಧಿಕಾರಿಗಳನ್ನೊಳಗೊಂಡ ಶಿಸ್ತು ಸಮಿತಿಯು ಸಹ ರಚಿಸಿದ್ದು ರ‍್ಯಾಗಿಂಗ್ನಲ್ಲಿ ತೊಡಗಿದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ನಿಬಂಧನೆಗಳ ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ. ಈ ಹಿಂದೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೇಳಲು ಹೆಮ್ಮೆಪಡುತ್ತೇವೆ. In all the University college campuses the squads has been formulated to find out the involvement of students in ragging both college and hostel premises. Strict supervision of teachers and wardens of hostels will be done to curb the ragging menace in addition to this CC cameras are fixed in different places corridors of colleges and hostels. The University also formulated disciplinary committee for the enquiry of the ragging involved students. Committee will strictly impose punishment to those involved in ragging as per rules and regulations framed by University. We are proud to announce that there were not any single incidences in raging earlier years.

Facilitiesಸೌಲಭ್ಯಗಳು

Physical Educationದೈಹಿಕ ಶಿಕ್ಷಣ ವಿಭಾಗ

ವಿದ್ಯಾರ್ಥಿಗಳನ್ನು ದೈಹಿಕ, ಮಾನಸಿಕವಾಗಿ ಸದೃಢರನ್ನಾಗಿ ಮಾಡಲು ದೈಹಿಕ ಶಿಕ್ಷಣ ಬಹುಮುಖ್ಯ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳನ್ನು ನೈತಿಕವಾಗಿ ಮತ್ತು ಸಾಮಾಜಿಕವಾಗಿ ಜಾಗೃತವಾಗಲು ಸಹಾಯಕವಾಗಿದೆ. ನಮ್ಮ ವಿಶ್ವವಿದ್ಯಾಲಯದಿಂದ ಆಯೋಜಿಸಲಾಗುವ ಮತ್ತು ನಮ್ಮ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಕ್ರೀಡೆಗಳು/ಅಥ್ಲೇಟಿಕ್, ಬ್ಯಾಡ್ಮಿಮಿಂಟನ್, ಬಾಸ್ಕೇಟ್ ಬಾಲ್, ಕ್ರಿಕೇಟ್, ಫೂಟ್ಬಾಲ್, ವ್ಯಾಯಾಮ ಶಾಲೆ, ಹಾಕಿ, ಒಳಾಂಗಣ ಆಟಗಳು, ಕಬ್ಬಡಿ, ಟೆನ್ನಿಸ್, ಖೊ-ಖೊ, ಟೆಬಲ್ ಟೆನ್ನಿಸ್, ಮಲ್ಲಯುದ್ಧ, ವಾಲಿಬಾಲ್ ಮುಂತಾದವುಗಳು ಇದಕ್ಕೆಲ್ಲ ಪೂರಕವಾಗಿ ಕ್ರೀಡಾ ಸಾಮಗ್ರಿಗಳನ್ನು ಪೂರೈಸುತ್ತಿದೆ, ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಹೊಂದಿಕೊಂಡಂತೆ ಕ್ರೀಡಾ ಮೈದಾನವಿದೆ ಅಸ್ಟಲ್ಲದೆ ನಿಲಯಗಳಲ್ಲಿ ಸುಸಜ್ಜಿತವಾದ ಉಪಕರಣಗಳಿಂದ ಕೂಡಿದ ವ್ಯಾಯಾಮ ಶಾಲೆ ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯದ ಮೇಲ್ವಿಚಾರಣೆ ವ್ಯಾಪ್ತಿಯಲ್ಲಿ ಬರುತ್ತವೆ.

The University lays a great emphasis on the role of sports and games to keep the students physically efficient, mentally alert, morally sound and socially well behaved. These activities are organised through various games and sports clubs like Athletics, badminton, Basket ball Cricket, Football, Gymnastics, Hockey, Indoor games, Kabaddi, Tennis, Kho Kho, Table Tennis, Wrestling, Volleyball and Yogic exercises under over all supervision of University Sports Council/Student Welfare. The University provides sufficient sports and games materials to the students as well as University level teams. Sufficient numbers of hostel wise and central play grounds adequately equipped gymnasium physical fitness centre and athletic as well as sports and games events.

Trainingತರಬೇತಿ

ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಲ್ಲಿ ಹಲವು ಕ್ರೀಡೆಗಳ & ಸಾಂಸ್ಕøತಿಕ ಕಲೆಗಳ ತರಬೇತಿ ನೀಡಿ ಕೌಶಲ್ಯವನ್ನು ಹೆಚ್ಚಿಸುವುದರ ಮುಖೇನ ರಾಜ್ಯ/ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಪದಕ ಗಳಿಸಲು ಪೂರಕವಾಗಿದೆ.

Coaching facilities are available in the University for making the students efficient in various games. The students can contact the Physical Education faculty to guidance.

Hostelsವಿದ್ಯಾರ್ಥಿ ನಿಲಯಗಳು

ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಹಾವಿದ್ಯಾಲಯಗಳಲ್ಲಿ ಸುಸಜ್ಜಿತವಾದ ವಿದ್ಯಾರ್ಥಿ/ನಿಯರ ವಸತಿ ನಿಲಯಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಹಾಗೂ ಸ್ನಾತಕೊತ್ತರ ವಿದ್ಯಾರ್ಥಿ ವಿದ್ಯಾರ್ಥಿ/ನಿಯರ ವಸತಿ ನಿಲಯಗಳಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಪ್ರತೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಹಾಗೂ ಎಲ್ಲಾ ವಿದ್ಯಾರ್ಥಿ ನಿಲಯಗಳಿಗೂ ಪ್ರತ್ಯೇಕ ನಿಲಯ ಪಾಲಕರನ್ನು ನೇಮಿಸಲಾಗಿದೆ. ಮಿನಿ ಗ್ರಂಥಾಲಯದಲ್ಲಿ ಇಂಟರ್‍ನೆಟ್ ವೈ-ಫೈ ವ್ಯವಸ್ಥೆ, ಟಿ.ವಿ, ದಿನ ಪತ್ರಿಕೆಗಳು, ಮಾಸಪತ್ರಿಕೆಗಳನ್ನು ಒಳಗೊಂಡಿದೆ, ಆಧುನಿಕ ಉಪಕರಣಗಳನ್ನು ಒಳಗೊಂಡ ಅಡುಗೆ ಮನೆ ಇದರ ಉಸ್ತುವಾರಿಯನ್ನು ಯಾವುದೇ ಲಾಭ ನಷ್ಟಗಳಿಲ್ಲದೆ ವಿದ್ಯಾರ್ಥಿಗಳಿಂದಲೇ ವಿದ್ಯಾರ್ಥಿ ವಸತಿ ನಿಲಯಗಳ ಮೇಲ್ವಿಚಾರಕರ ಮಂಡಳಿ ಮೂಲಕ ನಿರ್ವಹಿಸಲ್ಪಡುತ್ತದೆ

All students are required to live in 4 College Hostels including Girls Hostels with separate arrangements for Post Graduate and Under Graduate Hostels at UAHS Campus. The Boys and Girls Hostels are situated at UAHS, Mudigere, Hiriyur, Ponnampet, Diploma Colleges at Kathalagere and Brahmavar. The Wardens are looking after the hostels. There is a common room with a coloured TV with Cable facility, internet, and library having magazines and news paper etc. The Hostel Cafeteria is equipped with refrigerator, Water Cooler, Solar, LPG Cooking, internet facility. Each Hostel Cafeteria is run and managed by the students with no profit no loss basis through Hostel Supervisory Committee All students residing in the Hostels are to abide by Hostel Rules and Regulations/rules.

Health Clinicಆರೋಗ್ಯ ಕೇಂದ್ರ

ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದಲ್ಲಿ ಸಹಾಯಕ ವೈದ್ಯಾಧಿಕಾರಿ, ನರ್ಸ್ ಮತ್ತು ಅರೆಕಾಲಿಕ ಮಹಿಳಾ ವೈದ್ಯಾಧಿಕಾರಿಯನ್ನು ಒಳಗೊಂಡು ವಿದ್ಯಾರ್ಥಿಗಳಿಗೆ, ಸಿಬಂದಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ನಗರದ ಪ್ರಸಿದ್ಧ ಆಸ್ಪತ್ರೆಗಳಾದ ಮಾಕ್ಸ್, ನಂಜಪ್ಪ ಮತ್ತು ಮೆಟ್ರೋ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. 

A full time University Dispensary under the supervision of a full time Assistant Medical Officer, a Lady Medical Officer render round the clock service to the students, staff members and their families. There are separate ward for Male and female students. All the serious cases are referred to big hospitals like Max Hospital, Nanjappa Hospital, Metro Hospital, etc..

Career Guidanceವೃತ್ತಿ ಮಾರ್ಗದರ್ಶನ ಕೇಂದ್ರ

ವೃತ್ತಿ ಮಾರ್ಗದರ್ಶನ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳನ್ನು ಕಲ್ಪಿಸಲಾಗಿದೆ. ದೇಶದ ಉನ್ನತ ಕಂಪನಿಗಳ ಮೂಲಕ ಕ್ಯಾಂಪಸ್ ಸಂದರ್ಶನ ನಡೆಸಲಾಗುತ್ತದೆ. ಭಾರತ ಮತ್ತು ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಅಧ್ಯಯನ ಸಾಮಗ್ರಿಗಳನ್ನು ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಒದಗಿಸಿದೆ, ಇದರ ಉಸ್ತುವಾರಿಯನ್ನು ಆಯಾ ಮಹಾವಿದ್ಯಾಲಯಗಳ ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರು ನೋಡಿಕೊಳ್ಳುತ್ತಿದ್ದಾರೆ

The students are provided guidance in seeking jobs in companies, Banks, Industries and seeking higher education in India and abroad and also the fellowship/scholarship available for these studies through a counselling cell at all the campuses. A Co -ordinator (ADSW) helps and guides the students in securing jobs and admission and fellowships for the above purpose.

National Service Schemeರಾಷ್ಟ್ರೀಯ ಸೇವಾ ಘಟಕ

ರಾಷ್ಟ್ರೀಯ ಸೇವಾ ಘಟಕದಿಂದ ಮೊದಲ ಮತ್ತು ಎರಡನೆ ವರ್ಷದ ಪದವಿ ವಿದ್ಯಾರ್ಥಿಗಳು ಹತ್ತು ದಿನದ ಗ್ರಾಮೀಣ ಶಿಭಿರದಲ್ಲಿ ಪಾಲ್ಗೊಂಡು ಮೀಸಲು ಅಂಕಗಳನ್ನು ಪಡೆಯಲು ಸಹಕಾರಿಯಾಗಿದೆ. ರಾಷ್ಟ್ರೀಯ ಸೇವಾ ಘಟಕದ ಸಂಯೋಜನಾಧಿಕಾರಿಯಾದ ಡಾ. ಎಮ್.ಎಸ್. ಮಾವರ್ಕರ್, ಪ್ರಾಧ್ಯಾಪಕರು, ಬೇಸಾಯಶಾಸ್ತ್ರ ವಿಭಾಗ ಹಾಗೂ ಎಲ್ಲಾ ಮಹಾವಿದ್ಯಾಲಯಗಳಲ್ಲಿ ಕಾರ್ಯಕ್ರಮ ಸಂಯೋಜಕರು ಕಾರ್ಯನಿರ್ವಹಿಸುತ್ತಿದ್ದಾರೆ.

The National Service Scheme each students of I and II Year participate to earn credits during his degree programme by attending 10 days special camp organised in the adopted colony and completing the course activities. The NSS is Co-ordinated by Dr. N.S Mavarkar, professor in Agronomy and NSS officer at each college. NSS students are required to work in villages under this scheme.

Othersಇತರೆ ಚಟುವಟಿಕೆಗಳು

Travel facilitiesಸಾರಿಗೆ ವ್ಯವಸ್ಥೆ

ವಿದ್ಯಾರ್ಥಿಗಳು ಸೆಮಿಸ್ಟರ್ ಮುಕ್ತಾಯವಾದಾಗ ಅವರವರ ಸ್ಥಳಗಳಿಗೆ ತೆರಳಲು ಮತ್ತು ಅಧ್ಯಯನ ಪ್ರವಾಸಕ್ಕೆಂದು ರಾಜ್ಯದ ಹಾಗೂ ದೇಶದ ನಾನಾ ಭಾಗಗಳಿಗೆ ತೆರಳಲು ರೈಲ್ವೆ ರಿಯಾಯಿತಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ,

To facilitate, travelling by students going to their homes during the semester break and to undertake study tours in different parts of India, railway concession orders are arranged for them

Celebration of National Festivalsರಾಷ್ಟ್ರೀಯ ಮತ್ತು ರಾಜ್ಯ ಹಬ್ಬಗಳ ಆಚರಣೆ

 • Republic Dayಗಣರಾಜ್ಯೋತ್ಸವ
 • Sadguru Sevalal Jayanthiಸದ್ಗುರು ಸೇವಾಲಾಲ್ ಜಯಂತಿ
 • International women’s dayಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
 • Ambedkar Jayanthiಡಾ.ಬಿ.ಆರ್. ಅಂಬೇಡ್ಕರ್ ಜಯಂತಿ
 • Basava Jayanthiಬಸವಜಯಂತಿ
 • Wold Environment Dayವಿಶ್ವ ಪರಿಸರ ದಿನ
 • International Yoga Dayಅಂತರಾಷ್ಟ್ರೀಯ ಯೋಗ ದಿನ
 • Kempe Gowda Jayanthiಕೆಂಪೆ ಗೌಡ ಜಯಂತಿ
 • Independence Dayಸ್ವಾತ್ಯಂತ್ರೋತ್ಸವ
 • Gandhi Jayanthiಗಾಂಧಿಜಯಂತಿ
 • Valmiki Jayanthiವಾಲ್ಮೀಕಿ ಜಯಂತಿ
 • Kannada Rajyotsavaಕನ್ನಡ ರಾಜ್ಯೋತ್ಸವ
 • Kanaka Jayanthi etc... are celebrated every year in a befitting manner.ಕನಕ ಜಯಂತಿ ಮುಂತಾದವುಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

Staff Detailsಸಿಬ್ಬಂದಿ ವಿವರ

{{staff.name}}
{{staff.name}}

{{staff.title}}
{{staff.location}}
Contact : {{staff.contact.tel}}
Email : {{staff.contact.mail}}

CONTACTಸಂಪರ್ಕಿಸಿ

DIRECTORATE OF STUDENT WELFARE

ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯ

university of agricultural and horticultural sciences,
SHIVAMOGGA, KARNATAKA INDIA
ಕೃಷಿ ಮತ್ತು ತೋಟಕಾರಿಕೆ ವಿಶ್ವವಿದ್ಯಾಲಯ,
ಶಿವಮೊಗ್ಗ, ಕರ್ನಾಟಕ, ಭಾರತ
+91 94808 38959
+91 8182-267002
dsw@uahs.edu.in

Correspondence: ಪತ್ರವ್ಯವಹಾರ:
University of Agricultural and Horticultural Sciences ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ
Navile,
SHIVAMOGGA - 577204,
KARNATAKA, INDIA
ನವಿಲೆ,
ಶಿವಮೊಗ್ಗ - 577204,
ಕರ್ನಾಟಕ, ಭಾರತ
Communication: ಸಂವಹನ:
Vice Chancellor ಕುಲಪತಿಗಳ ಕಛೇರಿ   +91 8182 267001,   vcuahss2014@gmail.com
Registrar ಕುಲಸಚಿವರ ಕಛೇರಿ   +91 8182 267011,   registrarshimoga@gmail.com
Director of Research ಸಂಶೋಧನಾ ನಿರ್ದೇಶನಾಲಯ   +91 8182 267013,   druahs@gmail.com
Director of Extension ವಿಸ್ತರಣಾ ನಿರ್ದೇಶನಾಲಯ   +91 8182 267015,   uahsde@gmail.com
Director of Education ಶಿಕ್ಷಣ ನಿರ್ದೇಶನಾಲಯ   +91 8182 267013,   doe.uahs@gmail.com
Director of PG Studies ಸ್ನಾತಕೋತ್ತರ ನಿರ್ದೇಶನಾಲಯ   +91 8182 267012,   deanpgs.uahs@gmail.com
Director of SC/ST Cell ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕ   +91 94808 38207,   dirscstcelluahs@gmail.com
Page Hits : 232901
ಪುಟ ಭೇಟಿ : 232901
Last modified on :
28 August 2021
ಕೊನೆಯ ಬಾರಿ ಮಾರ್ಪಡಿಸಲಾಗಿದೆ :
28 August 2021

Designed, Developed and Maintained by PRABHAT SERVICES ®™© for UAHS® All right Reserved.