COLLEGE OF FORESTRY, PONNAMPET

ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ

ಸ್ಥಾಪನೆ 1995.

Established in 1995.

ಮಹಾವಿದ್ಯಾಲಯದ ಬಗ್ಗೆ

About The College

dean_pgs

Dr. C. G. Kushalappa M.Sc. (Forestry), Ph.D

Dean (Forestry) In charge, Professor and University Head, Forestry and Environment Science, Ponnampet, Kodagu Dist.,

kushalcg@gmail.com
+91 94808 38963
+91 8274 249365

Dean (Forestry) Message

ಡೀನ್ (ಅರಣ್ಯ)ಯವರ ಸಂದೇಶ

ಅರಣ್ಯ ಮಹಾವಿದ್ಯಾಲಯವು, ಪೊನ್ನಂಪೇಟೆಯಲ್ಲಿ ಸ್ಥಾಪನೆಯಾಗಿದ್ದು, ಇದು ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದ ಮಧ್ಯದಲ್ಲಿನ, ಜೀವವೈವಿಧ್ಯದ ಹಾಟ್‍ಸ್ಪಾಟ್ ತಾಣವಾಗಿದೆ. ಇಲ್ಲಿನ ಅತ್ಯುತ್ತಮ ಭೂದೃಶ್ಯಗಳು, ಇಂತಹ ಸುಸ್ಥಿರ ಅರಣ್ಯ ಪ್ರದೇಶದಲ್ಲಿ ಬೋಧಕವರ್ಗಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಕಲಿಯಲು, ಸಂಶೋಧನೆಕೈಗೊಳ್ಳಲು ಹಾಗೂ ಅಭಿವ್ಯಕ್ತಿಗೊಳ್ಳಲು ಸೂಕ್ತ ತಾಣವಾಗಿರುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರವು ನೀಡಿದ ಬೆಂಬಲದಿಂದ ಈ ಮಹಾವಿದ್ಯಾಲಯವು 1995ರಿಂದ ಭಾರತ ಮತ್ತು ಬಾಹ್ಯ ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವವನ್ನು ಹೊಂದಿದ್ದು, 2017ರಲ್ಲಿ ಡೆಹರಾಡೂನ್‍ನ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ (ಐಸಿಎಫ್‍ಆರ್‍ಇ)ದ ಮಾನ್ಯತೆಯನ್ನು ಆಧರಿಸಿ ದೇಶದ ಐದು ಅಗ್ರ ಅರಣ್ಯ ಮಹಾವಿದ್ಯಾಲಯಗಳಲ್ಲಿ ಇದು ಕೂಡಾ ಒಂದು ಎಂದು ಪರಿಗಣಿತವಾಗಿರುತ್ತದೆ. ಕರ್ನಾಟಕ ಸರ್ಕಾರದಿಂದ ವಿಶ್ವವಿದ್ಯಾಲಯ ಪರಿಶೀಲನಾ ಸಮಿತಿ ಹಾಗೂ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನಿಂದ(ಐಸಿಎಆರ್) ನಮ್ಮ ವಿಶ್ವವಿದ್ಯಾಲಯಕ್ಕೆ, ದೇಶದಲ್ಲಿಯೇ ಅತ್ಯಂತ ಕಿರಿಯ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂದು ಮಾನ್ಯತೆ ನೀಡಿರುತ್ತದೆ. ಇದರ ಜೊತೆಗೆ ನಮ್ಮ ಮಹಾವಿದ್ಯಾಲಯವು ಸಹ ಗಣನೀಯವಾಗಿ ಕೊಡುಗೆ ನೀಡಿರುತ್ತದೆ ಎಂದು ಹೇಳಲು ನಮಗೆ ಸಂತೋಷವಾಗುತ್ತದೆ. ನಾವು ಜಗತ್ತಿನಾದ್ಯಂತ ಕೆಲವು ಅತ್ಯುತ್ತಮ ವಿಶ್ವವಿದ್ಯಾಲಯಗಳ ಹಾಗೂ ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಒಪ್ಪಂದಗಳಿಗೂ ಸಹ ಸಹಿ ಮಾಡಿದ್ದೇವೆ. ಈ ಸಾಧನೆಗಳನ್ನು ಸಾಧಿಸಲು ನಮ್ಮ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಸಮರ್ಪಣಾ ಮನೋಭಾವ, ನಮ್ಮ ವಿದ್ಯಾರ್ಥಿಗಳ ಸಾಧನೆ, ವಿಶ್ವವಿದ್ಯಾಲಯ ಹಾಗೂ ಸರ್ಕಾರ ಮತ್ತು ಸ್ಥಳೀಯ ಸಮುದಾಯಗಳ ಬೆಂಬಲದಿಂದ ಸಾಧ್ಯವಾಗಿರುತ್ತದೆ. ದೇಶದಲ್ಲಿಯೇ ಅತ್ಯುತ್ತಮ ಉಷ್ಣವಲಯದ ಅರಣ್ಯ ಮಹಾವಿದ್ಯಾಲಯಗಳಲ್ಲಿ ಇದು ಒಂದಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅತ್ಯುನ್ನತ ಸ್ಥಾನಕ್ಕೆ ನಮ್ಮ ಮಹಾವಿದ್ಯಾಲಯವನ್ನು ಕೊಂಡೊಯ್ಯಲು ನಮ್ಮ ಎಲ್ಲ ಸಹಭಾಗಿಗಳೊಂದಿಗೆ ಕಾರ್ಯ ನಿರ್ವಹಿಸಲು ನಾವು ನಿರೀಕ್ಷೆಯನ್ನು ಹೊಂದಿದ್ದೇವೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಾಕರ್ಷಕ ಸಿಬ್ಬಂದಿಗಳನ್ನು ಹೊಂದಿರುವುದು ಮಾತ್ರವಲ್ಲದೆ, ಕಳೆದ ನಾಲ್ಕು ವರ್ಷಗಳಿಂದ ವಿಶ್ವವಿದ್ಯಾಲಯದ ನಮ್ಮ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಚಾಂಪಿಯನ್ನರಾಗಿದ್ದಾರೆ ಮತ್ತು ನಮ್ಮ ವಿಶ್ವವಿದ್ಯಾಲಯದ ಪುರುಷ ಮತ್ತು ಮಹಿಳಾ ತಂಡವನ್ನು ಪ್ರತಿನಿಧಿಸುವಂತಹ ಹೆಚ್ಚಿನ ವಿದ್ಯಾರ್ಥಿಗಳನ್ನು ನಾವು ಹೊಂದಿದ್ದೇವೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ. ಈ ಆವರಣದಲ್ಲಿ ಯುವಸ್ಪಂದನ ವಾರ್ಷಿಕ ಯುವಜನೋತ್ಸವದ ಆತಿಥ್ಯ ನಾವು ವಹಿಸಿದ್ದು ಹಾಗೂ ನಮ್ಮ ಮಹಾವಿದ್ಯಾಲಯವು ಯುವ ಚಾಂಪಿಯನ್‍ಶಿಪ್ ಗೆದ್ದಿದ್ದಷ್ಟೇ ಅಲ್ಲದೆ, ತಿರುಪತಿಯಲ್ಲಿ ನಡೆದ ಕೃಷಿ ಅಂತರ್‍ ವಿಶ್ವವಿದ್ಯಾಲಯದ ಯುವಜನೋತ್ಸವದಲ್ಲಿ ನಮ್ಮ ವಿದ್ಯಾರ್ಥಿಗಳು ಎರಡನೇ ಸ್ಥಾನ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಎರಡನೇ ವರ್ಷದ ವಿದ್ಯಾರ್ಥಿ ಶ್ರೀ ಅವಿನಾಶ್ ಅವರು ರಾಷ್ಟ್ರೀಯ ಸ್ವಯಂ ಸೇವೆ(ಎನ್‍ಎಸ್‍ಎಸ್)ವತಿಯಿಂದ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಭಾಗವಹಿಸಿದ್ದು ಹಾಗೂ ಶ್ರೀ ಕಾಡೇಶ್ ಎರಡನೇ ವರ್ಷದ ವಿದ್ಯಾರ್ಥಿ ಎನ್‍ಎಸ್‍ಎಸ್‍ನಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವುದು ಸಂತೋಷವನ್ನುಂಟು ಮಾಡಿದೆ. ಪ್ರಸಕ್ತ ವರ್ಷದಲ್ಲಿ ನಮ್ಮ ಆವರಣದ ವೈಭವವನ್ನು ಸೂಚಿಸುವಂತಹ ನಮ್ಮ ವಿದ್ಯಾರ್ಥಿಗಳ ಸಾಧನೆಗಳ ಪಕ್ಷಿನೋಟವಾಗಿದೆ.

ನಮ್ಮ ಆವರಣವನ್ನು ದೇಶದಲ್ಲೇ ಅತ್ಯುತ್ತಮವೆಂದು ಪರಿಗಣಿಸಲು ಕಾರಣರಾದ ಅವರ ಸಮರ್ಪಣಾ ಮನೋಭಾವ ಮತ್ತು ಬದ್ಧತೆಗಾಗಿ ನಮ್ಮ ಎಲ್ಲಾ ತಂಡಕ್ಕೂ(ಎಲ್ಲರೂ ಹೆಚ್ಚಿನ ಸಾಧನೆ ಮಾಡುತ್ತಿರುವುದು) ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ಮುಂಬರುವ ವರ್ಷಗಳಲ್ಲಿ ನಮ್ಮ ತಂಡವು ಆಹಾರ ಭದ್ರತೆಗೆ ಮಾತ್ರವಲ್ಲದೆ, ಸುಸ್ಥಿರ ಅಭಿವೃದ್ಧಿಯ ಅಡಿಪಾಯವಾದ ಪರಿಸರದ ರಕ್ಷಣೆಯನ್ನು ಕಾಯ್ದುಕೊಂಡು ಹಸಿರುಕ್ರಾಂತಿಯ ನೇತೃತ್ವವಹಿಸುವುದು ನಮ್ಮೆಲ್ಲರ ಗುರಿಯಾಗಿದೆ.

College of Forestry, Ponnampet, Kodagu district located in Central Western Ghats, a hot spot of biodiversity provides one of the best landscapes for faculty and students to learn, research and outreach in sustainable forestry. Since 1995 thanks to the support provided by University, State and Central Government, partnering research institutes from India and outside we have grown to be one of the five top forestry colleges in the country based on the accreditation of Indian Council of Forestry Research and Education (ICFRE) Dehradun in 2017. We are also happy that our college has contributed significantly to our university being accredited as one of the youngest farm universities in the country by Indian Council of Agricultural Research (ICAR) New Delhi and also University Review Committee (URC) of Government of Karnataka. We have also signed collaboration MOU with some of the best universities and research institutes from around the world and also India. These achievements were possible through dedication of our teaching and non teaching faculty , performance by our students, support from the university and government and local communities. We look forward to working with all our partners to take our college to next greater heights to be one of the best tropical forestry colleges in the country.

I am very happy to share that our students have been molded as young men and women by dedicated faculty who have not only excelled in academic arena but also we have been university sports champions consecutively for the last four years and a large number of our students have represented the university team. We could not only host Yuvaspandana the annual Youth Festival on campus and our college not only won the youth championship but our students played pivotal role in our university winning the runners up in the Inter Agri. Youth Festival held at Tirupathi. We are happy to inform Mr. Avinash a second year student was part of National NSS contingent that took part in Republic Day parade at New Delhi and Mr. Kadesh from Second Year was part of State NSS contingent. These are only glimpses of our students achievements during the current year indicating the vibrancy of our campus.

I thank all the TEAM(Together Everybody Achieves More) members for their dedication and commitment that has made our campus one of the best in the country and I am confident in the coming years our team will lead the EVERGREEN revolution aiming not only at food security but also environmental security which is the foundation of sustainable development.

mandate

MISSION & OBJECTIVES

College of Forestry, Ponnampet is an A+ accredited institute by the Indian Council of Forest Research and Education, Dehradun for imparting quality education in Forestry Sciences in Karnataka.

College of Forestry, Ponnampet is on a mission mode to Conserve, renew and sustainably utilize forest resource through attaining excellence in education, research and extension in the field of Forestry thereby striving to attain a centre of excellence status in forestry discipline.

HISTORY & GENESIS

Forestry College, Ponnampet: Established in the year 1995; was originally functioning at GKVK, Bangalore up to the year 1994 and then shifted to the present campus at Ponnampet. It has under graduate degree programme in B.F.Sc and Post graduate degree programme in Forest Resource Management.

mandate

CONTACT

ಸಂಪರ್ಕಿಸಿ

COLLEGE OF FORESTRY

ಅರಣ್ಯ ಮಹಾವಿದ್ಯಾಲಯ

PONNAMPET, KODAGU Dist., KARNATAKA INDIA
ಪೊನ್ನಂಪೇಟೆ, ಕೊಡಗು ಜಿಲ್ಲೆ, ಕರ್ನಾಟಕ, ಭಾರತ

+91 8274 249365

+91 8274 249365

kushalcg@gmail.com


 

 

ಕನ್ನಡ English