header Gandhiji

COLLEGE OF AGRICULTURE, SHIVAMOGGA ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ

 

DEAN(Agri.)

Dr. R. C. Jagadeesha   M.Sc.(Agri.), Ph.D.

ಡಾ. ಆರ್. ಸಿ. ಜಗದೀಶ್   ಎಂ.ಎಸ್ಸಿ (ಕೃಷಿ), ಪಿಎಚ್.ಡಿ


   Dean (Agri.),College of Agriculture,Navile, Shivamogga    ಡೀನ್ ( ಕೃಷಿ ), ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ
deanagrishimoga.uahs@gmail.com
+91 94808 38960
+91 8182 267086

ನಮ್ಮ ಬಗ್ಗೆ About Us

Dean Messageಡೀನ್ ಸಂದೇಶ

ಶಿವಮೊಗ್ಗ ನಗರವು ರಸ್ತೆ ಮತ್ತು ರೈಲು ಸೌಲಭ್ಯಗಳಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಶಿವಮೊಗ್ಗ ಜಿಲ್ಲೆಯು ಬೆಳೆಯುತ್ತಿರುವ ವಿವಿಧ ತೋಟಗಾರಿಕೆ ಮತ್ತು ಕ್ಷೇತ್ರ ಬೆಳೆಗಳಿಗೆ ಸಮಂಜಸವಾದಂತಹ ಕೃಷಿ ವಾತಾವರಣವನ್ನು ಹೊಂದಿದೆ. ಈ ಮಹಾವಿದ್ಯಾಲಯವು ರೈತ ಸಮುದಾಯವನ್ನು ರಾಜ್ಯದಲ್ಲಿನ ಕೃಷಿ ಸಮುದಾಯಕ್ಕೆ ನೆರವು ಹಾಗೂ ವಿಶೇಷವಾಗಿ ಶಿವಮೊಗ್ಗದಲ್ಲಿ ಉತ್ತಮ ತರಬೇತಿ ಪಡೆದ ಜನಬಲ ಒದಗಿಸುವಿಕೆ, ನೈಜ ಕೃಷಿ ಪರಿಕರಗಳು ಮತ್ತು ಗ್ರಾಮೀಣ ಸಮುದಾಯದ ಎಲ್ಲರ ಅಭಿವೃದ್ಧಿಗೆ ಕಾಲಕಾಲಕ್ಕೆ ಮಾಹಿತಿಯನ್ನು ನೀಡುತ್ತ್ತಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಡಿಯಲ್ಲಿ ಶಿವಮೊಗ್ಗ ಕೃಷಿ ಮಹಾವಿದ್ಯಾಲಯವು 1990ರಲ್ಲಿ ಬಿ.ಎಸ್.ಸಿ. (ಕೃಷಿ) ಆರಂಭಿಸಿದ್ದು, ಗ್ರಾಮೀಣೀಕರಣದ ಭಾಗವಾಗಿ ಕೃಷಿ ಶಿಕ್ಷಣದ ಪಠ್ಯವನ್ನು ಅಳವಡಿಸಲಾಗಿರುತ್ತದೆ. ಮುಂದುವರೆದು ಇದು ಸೆಪ್ಟೆಂಬರ್ 2012ರಿಂದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಭಾಗವಾಯಿತು. ಈ ಮಹಾ ವಿದ್ಯಾಲಯದ ಆವರಣವು ಸವಳಂಗ ರಸ್ತೆಯ ನವುಲೆಯಲ್ಲಿದ್ದು, ಶಿವಮೊಗ್ಗ ನಗರಕ್ಕೆ 5 ಕಿ.ಮೀ. ದೂರದಲ್ಲಿದೆ. ಇದು ಬಾಪೂಜಿ ಆಯುರ್ವೇದಿಕ್ ಮಹಾವಿದ್ಯಾಲಯದ ಎದುರಿನಲ್ಲಿದ್ದು ಹಾಗೂ ಜೆಎನ್ಎನ್ ಇಂಜಿನಿಯರಿಂಗ್ ಮಹಾವಿದ್ಯಾಲಯದ ನಂತರದ ಶೈಕ್ಷಣಿಕ ವಲಯವಾಗಿರುತ್ತದೆ. ಅಲ್ಲದೆ ಕೃಷಿ ವಲಯದೊಂದಿಗೆ 78 ಹೆಕ್ಟೇರ್(195 ಎಕರೆಗಳು) ಪ್ರದೇಶದ ಆವರಣವನ್ನು ಹೊಂದಿದ್ದು ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಸಾವಯವ ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರಗಳನ್ನು ಒಳಗೊಂಡಿದೆ. 2001ರಲ್ಲಿ ಅಡಿಕೆ ಮಾರುಕಟ್ಟೆ ಸಹಕಾರ ಸಂಘದವರಿಂದ ಅಡಿಕೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸ್ವ ಸುಸ್ಥಿರತೆ ವಿಧಾನದ ಆಧಾರದ ಮೇಲೆ ಪರಿಕರ ವಿತರಕರಿಗಾಗಿ ವಿಸ್ತರಣಾ ಸೇವೆಗಳ ಕೃಷಿ ಡಿಪ್ಲೊಮಾ ತರಗತಿಗಳನ್ನು ನಡೆಸಲಾಗುತ್ತಿದೆ.

ಈ ಮಹಾವಿದ್ಯಾಲಯವು ಬೋಧನೆ ಮತ್ತು ಸಂಶೋಧನೆ ಉದ್ದೇಶಗಳಿಗಾಗಿ ಉತ್ತಮ ಪ್ರಯೋಗಾಲಯಗಳನ್ನು ಅಳವಡಿಸಿರುತ್ತದೆ. ಕಂಪ್ಯೂಟರೀಕೃತ ಪ್ರಯೋಗಾಲಯ, ಕೃಷಿ ಸಂಶೋಧನೆ ಮಾಹಿತಿ ವ್ಯವಸ್ಥೆ (ಎರಿಸ್), ಅತ್ಯಧಿಕ ವೇಗದ ಅಂತರ್ಜಾಲಗಳ ಸಂಪರ್ಕ ಹೊಂದಿರುವ ವಿ-ಸ್ಯಾಟ್, ಶಾಶ್ವತ ಮಳೆನೀರು ಕೊಯ್ಲಿನ ರಚನೆಗಳು, ಉತ್ತಮವಾದ ಅಡಿಕೆ ತೋಟ, ಉತ್ತಮ ಉಪನ್ಯಾಸ ಕೊಠಡಿಗಳು, ಇತ್ತೀಚಿನ ಆಡಿಯೋ ದೃಶ್ಯಾವಳಿಗಳು, 24,000 ಕ್ಕಿಂತ ಹೆಚ್ಚು ದಾಖಲಾತಿಗಳು, ಸಿಡಿ ರೋಮ್ಗಳು, ಇ-ಗ್ರಂಥಾಲಯ ಮತ್ತು ನೆಟ್ವರ್ಕಿಂಗ್ ಸೌಕರ್ಯ, ಬಾಲಕರು ಮತ್ತು ಬಾಲಕಿಯರಿಗಾಗಿ ಉತ್ತಮವಾಗಿ ಅಭಿವೃದ್ಧಿಪಡಿಸಿದ ವಸತಿ ಸೌಲಭ್ಯ, ಬೆಳೆ ಉತ್ಪಾದನೆಗೆ ಸೂಚನಾ ಕೇಂದ್ರಗಳು, ತೋಟಗಾರಿಕೆ ನರ್ಸರಿಗಳು, ಸಂದರ್ಶಕರಿಗೆ ಅತಿಥಿಗೃಹದ ಸೌಕರ್ಯ, ವಿದ್ಯಾರ್ಥಿ ಆಪ್ತಸಮಾಲೋಚನೆ, ವ್ಯಕ್ತಿತ್ವ ವಿಕಾಸ ಮತ್ತು ಪ್ರೇರಣೆ ನೀಡುವ ಕಾರ್ಯಕ್ರಮಗಳನ್ನು ಒದಗಿಸಲಾಗುತ್ತಿದೆ.

ಪ್ರಸ್ತುತ ಮಹಾವಿದ್ಯಾಲಯವು ಕರ್ನಾಟಕ ಶಿಕ್ಷಣ ಆಡಳಿತದ ಮೂಲಕ ಸೇವೆ ಸಲ್ಲಿಸುತ್ತಿದ್ದು, 100 ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿದೆ. ಪ್ರಸ್ತುತ ಏಳು ವಿಭಾಗಗಳಲ್ಲಿ (ಬೇಸಾಯಶಾಸ್ತ್ರ,ತೋಟಗಾರಿಕೆ, ಕೃಷಿ ಕೀಟಶಾಸ್ತ್ರ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಆನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ, ಸಸ್ಯ ರೋಗ ಶಾಸ್ತ್ರ ಹಾಗೂ ಕೃಷಿ ವಿಸ್ತರಣೆ) ಎಂಎಸ್ಸಿ ಪದವಿಯನ್ನು ಪ್ರತಿ ವಿಭಾಗಗಳಲ್ಲಿ ಆರು ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಬಹುದಾಗಿರುತ್ತದೆ. ಕೃಷಿ ವಿಸ್ತರಣೆಯನ್ನು ಮತ್ತು ತೋಟಗಾರಿಕೆಯನ್ನು ಹೊರತುಪಡಿಸಿ ಇತರೆ ಐದು ವಿಭಾಗಗಳಲ್ಲಿ ಪ್ರತಿ ಎರಡು ವಿದ್ಯಾರ್ಥಿಗಳಂತೆ ಪ್ರತಿ ವಿಭಾಗದಲ್ಲಿ ಪಿಹೆಚ್.ಡಿ ಪದವಿ ಕಾರ್ಯಕ್ರಮಗಳಿಗೆ ಪ್ರವೇಶಾತಿ ಪಡೆಯಬಹುದಾಗಿರುತ್ತದೆ.

ಕೃಷಿ ಮಹಾವಿದ್ಯಾಲಯವು ಸ್ನಾತಕ ಪದವಿ ಶಿಕ್ಷಣವನ್ನು ಕೃಷಿಯಲ್ಲಿ ಬಿ.ಎಸ್.ಸಿ (ಕೃಷಿ) ಪದವಿ ಕಾರ್ಯಕ್ರಮವನ್ನು ಮತ್ತು ಬೇಸಾಯ ಶಾಸ್ತ್ರ, ಆನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ತೋಟಗಾರಿಕೆ ಸಸ್ಯ ರೋಗ ಶಾಸ್ತ್ರ ಹಾಗೂ ಕೃಷಿ ವಿಸ್ತರಣೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಗಳನ್ನು ನೀಡುತ್ತಿದೆ. ಪರಿಕರಗಳ ಮಾರಾಟಗಾರರಿಗೆ ಒಂದು ವರ್ಷದ ಡಿಪ್ಲೊಮಾ(ಭಾನುವಾರಗಳು ಮಾತ್ರ) ಪರಿಕರ ವಿತರಕರಿಗೆ ಕೃಷಿ ವಿಸ್ತರಣಾ ಸೇವೆಗಳಲ್ಲಿ ಸಹ ನೀಡಲಾಗುತ್ತಿದೆ. ಬೇಸಾಯಶಾಸ್ತ್ರ, ಆನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಕೃಷಿ ಕೀಟಶಾಸ್ತ್ರ ಹಾಗೂ ಸಸ್ಯರೋಗಶಾಸ್ತ್ರ ವಿಷಯಗಳಲ್ಲಿ ಪಿಹೆಚ್.ಡಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ.

Shivamogga is well connected by road and train facilities. Shivamogga district has varied agro climatic conditions congenial for growing various field and horticultural crops. The college would help the farming community in the state in general and Shivamogga in particular by way of producing well trained man power, genuine agricultural inputs and information from time to time for over all development of rural community.

College of Agriculture, Shivamogga started in 1990 for B.Sc. (Agri) course as part of ruralisation of agricultural education under the University of Agril. Sciences, Bangalore and became part of the University of Agril. & Horticultural sciences, Shivamogga from September 2012.The college campus is located at Navile about 5 km away from Shivamogga town on Savalanga road. It is an education zone next to JNN College of Engineering and opposite to Bapuji Ayurvedic college . The campus has an area of 78 hectares (195 acres) with Zonal Agril. and Horticultural Research station, Organic Farming Research Centre and Krishi Vignana Kendra. The campus also has Areca nut research centre funded by Areca marketing societies  in 2001 and diploma in Agril. Extension services for input dealers (DEASI) on self-sustaining mode. Shivamogga is well connected by road and train facilities. Shivamogga district has varied agro climatic conditions congenial for growing various field and horticultural crops.

The college has well equipped laboratories for teaching and research purposes, computer laboratory, Agricultural research information system(ARIS), computers with high speed internet connectivity through v- sat, permanent rain water harvesting structures, well established areca nut garden, lecture halls equipped with  latest audio visual aids, well developed library with more than 24,000 accessions, CD roms, e library and networking facility, well developed hostel facility for both boys and girls, instructional farms for crop production, horticulture nurseries, well developed guesthouse for visitors, student counselling, programs on personality development and motivation are available.

At present college admits 100 under graduate students served through Karnataka education Administration. The PGS is running in seven departments (Agril.Entomology, Soil Science and Agril.Chemistry, Agronomy, Genetics and Plant breeding, Plant pathology, Agril.Extension and Horticulture) offer M.Sc. Agri with an intake of six students, and except Agril.Extension and Horticulture. Other five departments offer Ph.D degree programmes with an intake of two students.

The Agriculture College imparts undergraduate education in agriculture leading to B.Sc.(Agri) degree programme and Post-Graduate degree Programmes in the subjects of Agronomy, Genetics and Plant Breeding, Soil Science and Agricultural Chemistry, Agricultural Entomology, Plant Pathology, Horticulture and Agricultural Extension. One year Diploma (only Sundays) in Agricultural Extension Services to Input Dealers (DAESI) is also offered to input dealers. Ph.D. Programmes are offered in the disciplines of Agricultural Entomology, Agronomy, Genetic & Plant Breeding, Soil Science & Agricultural Chemistry and Plant Pathology.

MANDATEಆದ್ಯಾದೇಶಗಳು

 1. ರಾಜ್ಯ/ದೇಶದ ಅಭಿವೃದ್ಧಿಗೆ ಅಗತ್ಯವಾದ ಗುಣ ಮಟ್ಟದ ಮಾನವನ ಸಂಪನ್ಮೂಲವನ್ನು ಸಿದ್ಧಗೊಳಿಸಲು ಕೃಷಿವಿಜ್ಞಾನದಲ್ಲಿ ಶಿಕ್ಷಣವನ್ನು ಉತ್ತೇಜಿಸುವುದು.

  Imparting education in agricultural science to produce quality human resource needed for the development of state/nation.

 2. ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳ ಸಂಶೋಧನೆಯ ಮೂಲಕ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿ ಸಾಧಿಸುವುದು.

  Advancement of agricultural science and technology through research on agriculture and allied sciences.

 3. ಗ್ರಾಮೀಣ ಜನತೆಗೆ ಮತ್ತು ವಿಸ್ತರಣಾ ಕಾರ್ಯಕರ್ತರ ಅನುಕೂಲಕ್ಕಾಗಿ ವಿಸ್ತರಣಾ ಶಿಕ್ಷಣವನ್ನು ಕೈಗೊಳ್ಳುವುದು.

  Undertaking extension education for the benefit of rural population and extension workers.

 4. ಆಯಾ ಪ್ರದೇಶದ ರೈತರಿಗೆ ಅಧಿಕ ಇಳುವರಿಯ ತಳಿಗಳ ಬೀಜಗಳು/ಸಸಿಗಳು ಪರಿಕರಗಳ ನಿರ್ಣಾಯಕ ಮಾಹಿತಿಗಳನ್ನು ಪೂರೈಸುವುದು.

  Supply of critical inputs like seeds/ plants of high yielding varieties to the farmers of the region.

 5. ಇತರ ಸಂಬಂಧಿತ ವಿಭಾಗ, ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಉತ್ತೇಜಿಸುವುದು.

  Promoting partnership with other lane department institutions.

Activitiesಚಟುವಟಿಕೆಗಳು

TEACHINGಬೋಧನೆ

ಈ ಆವರಣದಲ್ಲಿ ಸ್ನಾತಕ ಪದವಿ(ಯುಜಿ) ಬಿ.ಎಸ್ಸಿ(ಕೃಷಿ) ಕೋರ್ಸ್ – ಆರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ (ಸ್ನಾತಕೋತ್ತರ) ಕೋರ್ಸುಗಳು ಮತ್ತು ಕೃಷಿ ಪರಿಕರ ವಿತರಕರ-ದೇಸಿ ಡಿಪ್ಲೋಮ ಕೋರ್ಸ್ ಇವುಗಳ ಬೋಧನಾ ಚಟುವಟಿಕೆಗಳು ನಡೆಯುತ್ತವೆ. ಸ್ನಾತಕಪದವಿ 4 ವರ್ಷದ ಕಾರ್ಯಕ್ರಮದಲ್ಲಿ (8 ಸೆಮಿಸ್ಟರ್) ಬೆಳೆ ಉತ್ಪಾದನೆ ಕೋರ್ಸುಗಳು(32%), ಸಸ್ಯ ವಿಜ್ಞಾನ (12%), ಸಸ್ಯ ಸಂರಕ್ಷಣೆ (13%), ಕೃಷಿ ವಿಸ್ತರಣೆ ಮತ್ತು ಅರ್ಥಶಾಸ್ತ್ರ (10%), ಗ್ರಾಮೀಣ ಕೃಷಿ ಕಾರ್ಯಾನುಭವ (ರಾವೆ) (12%), ಕೌಶಲ್ಯ ತರಬೇತಿ (ಹೆಚ್ಓಟಿ) (12%) ಮತ್ತು ಮೂಲ ವಿಜ್ಞಾನ, ಮಾನವಿಕ ವಿಜ್ಞಾನಗಳು ಮತ್ತು ಪೂರಕ ವಿಷಯಗಳು (9%) ಒಳಗೊಂಡಿರುತ್ತವೆ.

Teaching activity on this campus covers undergraduate (UG) course – B.Sc. (Agri.), Post graduate (PG) courses in six subjects and Diploma course for Agricultural Input Dealers- DAESI. The 4 year (8 Semester) UG programme consists of Crop Production courses (32%), Plant Sciences (12%), Plant Protection (13%), Agril. Extension and Economics (10%), Rural Agricultural Work Experience (RAWP)(12%), Hands On Training (HOT) (12%) and Basic Sciences, Humanities and supplementary subjects (9%).

RURAL AGRICULTURAL WORK EXPERIENCEಗ್ರಾಮೀಣ ಕೃಷಿ ಕಾರ್ಯಾನುಭವ

ಈ ಅವಧಿಯಲ್ಲಿ, 8ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಆಯ್ದ ಗ್ರಾಮಗಳಲ್ಲಿ ತೀವ್ರವಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ.ಇವರು ಮೂಲಭೂತ ಮಾಹಿತಿಯನ್ನು ಸಂಗ್ರಹಿಸುವುದು, ಸಮಸ್ಯೆಗಳನ್ನು ಗುರುತಿಸುವುದು, ಅವುಗಳನ್ನು ಆದ್ಯತೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಮೂರು ತಿಂಗಳುಗಳ ಕಾಲ ಗ್ರಾಮದಲ್ಲಿಯೇ ಇರುತ್ತಾರೆ ಹಾಗೂ ವೈಯಕ್ತಿಕ ಸಲಹೆ, ಕ್ಷೇತ್ರ ಭೇಟಿಗಳು, ಪ್ರದರ್ಶನ, ಪ್ರಾತ್ಯಕ್ಷಿಕೆ ವಿಧಾನ, ಫಲಿತಾಂಶ ಆಧಾರಿತ ಪ್ರಾತ್ಯಕ್ಷಿಕೆ, ಗುಂಪು ಚರ್ಚೆ, ಗ್ರಾಮದ ಮಾಹಿತಿ ಕೇಂದ್ರಗಳು, ವಿಚಾರ ಗೋಷ್ಠಿಗಳು ಇತ್ಯಾದಿಗಳ ಮೂಲಕ ಹಳ್ಳಿಗರೊಂದಿಗೆ ಸಂವಹನ ನಡೆಸುತ್ತಾರೆ.

During eighth semester, students work intensively in selected villages. They collect basic information, identify the problems, prioritize them and suggest suitable measures. Students stay in the village itself for three months and interact with the villagers through personal consultancy, field visits, method demonstration, result demonstration, group discussion, village information centres, and seminars etc., followed by an exhibition.

SOGADUಸೊಗಡು

Sogadu is a volunteer group in College of Agriculture, UAHS Shivamogga. The like minded people come on a single platform and perform similar activity. All the members of the group, meet once in a week and discuss on various topics that may be related to a group or personality development. The main moto of the team sogadu is “Kannada” that’s why the name is “Sogadu Kannada Vidyarthi Balaga”. The team Sogadu conducts a monthly programme called “Kannada Hunnime” in the college campus which is related to various aspects. Till now team Sogadu has conducted almost 30 programmes. The other moto of the team Sogadu is personality development of members. So team Conducted various programmes related to personality development like workshops, discussions, training programmes etc.

Sogadu is a volunteer group in College of Agriculture, UAHS Shivamogga. The like minded people come on a single platform and perform similar activity. All the members of the group, meet once in a week and discuss on various topics that may be related to a group or personality development. The main moto of the team sogadu is “Kannada” that’s why the name is “Sogadu Kannada Vidyarthi Balaga”. The team Sogadu conducts a monthly programme called “Kannada Hunnime” in the college campus which is related to various aspects. Till now team Sogadu has conducted almost 30 programmes. The other moto of the team Sogadu is personality development of members. So team Conducted various programmes related to personality development like workshops, discussions, training programmes etc.

CROP PRODUCTION-‘EARN WHILE YOU LEARN’ PROGRAMMEಬೆಳೆ ಉತ್ಪಾದನೆ-ನೀವು ಕಲಿಯುತ್ತಲೇ ಗಳಿಸಿ ಕಾರ್ಯಕ್ರಮ

ಈ ಕೋರ್ಸ್ಪ ಪಠ್ಯಕ್ರಮ ಒಂದು ಭಾಗವಾಗಿ, ಪ್ರತಿ ವಿದ್ಯಾರ್ಥಿಗೆ ಸುಮಾರು ಎಂಟರಿಂದ ಹತ್ತು ಗುಂಟೆಗಳಷ್ಟು ಒಟ್ಟು ಪ್ರದೇಶದ ಮೇಲೆ ತಮ್ಮದೇ ಆದ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಒಣಭೂಮಿ ಬೆಳೆ ಹಾಗೂ ತೇವಾಂಶದ ಒಂದು ಬೆಳೆ ಬೆಳೆಸುತ್ತಾರೆ. ಇದರಲ್ಲಿ ವಿದ್ಯಾರ್ಥಿಯಿಂದಗಳಿಸಿದ ನಿವ್ವಳ ಲಾಭವನ್ನು ತಮ್ಮಲ್ಲಿ ಹಂಚಿಕೊಳ್ಳುತ್ತಾರೆ.

As a part of course curriculum, the students raise one dry land crop and one wetland crop, on their own efforts on a total area of about eight to ten guntas for each student. The net profit earned by student is shared among themselves.

HANDS ON TRAINING/ EXPERIENTIAL LEARNINGಕೌಶಲ್ಯ ತರಬೇತಿ / ಪ್ರಾಯೋಗಿಕ ಕಲಿಕೆ

ಕೆಳಗಿನ ಐದು ಕ್ಷೇತ್ರಗಳಲ್ಲಿ 15 ವಿದ್ಯಾರ್ಥಿಗಳಿಗೆ “ಕೌಶಲ್ಯ ತರಬೇತಿ”ನೀಡಲು ಆವರಣದಲ್ಲಿನ ಸೌಲಭ್ಯಗಳನ್ನು ಸೃಜಿಸಲಾಗಿದೆ.

Facilities have been created on the campus to impart ‘Hands on Training’ to 15 students in each of the following five fields.

 1. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಸಮಗ್ರ ಕೃಷಿ ಪದ್ಧತಿ ಒಳಗೊಂಡು, ಮಣ್ಣು ಆರೋಗ್ಯ ಚಿಕತ್ಸಾ ಘಟಕ, ಜಲಾನಯನ ಮತ್ತು ನೀರಾವರಿ ನೀರು ನಿರ್ವಹಣೆ ಇತ್ಯಾದಿ.

  Natural Resource Management, including Integrated Farming System, Soil Health Clinic, Watershed and Irrigation Water Management etc.,

 2. ಸಮಗ್ರ ಪೀಡೆ ನಿರ್ವಹಣೆ, ಸಮಗ್ರ ರೋಗ ನಿರ್ವಹಣೆ,ಜೈವಿಕ ಏಜೆಂಟ್ಗಳ ಮತ್ತು ಜೈವಿಕ ಪೀಡೆನಾಶಕಗಳ ಸಾಮೂಹಿಕವೃದ್ದಿಗೊಳಿಸುವಿಕೆ ಇವುಗಳಸಸ್ಯ ಸಂರಕ್ಷಣೆಯನ್ನು ಒಳಗೊಂಡಿರುತ್ತದೆ.

  Crop Protection including Integrated Pest Management, Integrated Disease Management, Mass multiplication of biological agents and bio pesticides etc.,

 3. ವಾಣಿಜ್ಯ ತರಕಾರಿ ಉತ್ಪಾದನೆ, ವಾಣಿಜ್ಯ ಹೂವು ಕೃಷಿ ಮತ್ತು ನರ್ಸರಿ ನಿರ್ವಹಣೆ ಸೇರಿದಂತೆ ತೋಟಗಾರಿಕೆ.

  Horticulture, including commercial vegetable production, commercial floriculture and nursery management.

 4. ಸಮಾಜ ವಿಜ್ಞಾನ, ಕೃಷಿ ಪತ್ರಿಕೋದ್ಯಮ ಸೇರಿದಂತೆ, ಮಲ್ಟಿ ಮೀಡಿಯಾ ತಯಾರಿಕೆ, ಕೃಷಿ ಯೋಜನೆ, ನೀತಿಗಳು ಮತ್ತು ಕಾರ್ಯಕ್ರಮಗಳು ಇತ್ಯಾದಿ.

  Social Sciences, including Agril. Journalism, Multimedia production, Farm planning, policies and programmes etc.,

 5. ಬೀಜ ಉತ್ಪಾದನೆ, ವಾಣಿಜ್ಯ ಕಾಂಪೊಸ್ಟ್ ಉತ್ಪಾದನೆ, ವಾಣಿಜ್ಯಅಣಬೆ ಉತ್ಪಾದನೆ, ವಾಣಿಜ್ಯ ಜೈವಿಕ ಗೊಬ್ಬರ ಉತ್ಪಾದನೆ ಮತ್ತು ಸಸ್ಯತಳಿ ತಂತ್ರಗಳು ಸೇರಿದಂತೆ ವಾಣಿಜ್ಯ ಕೃಷಿ.

  Commercial Agriculture, including commercial seed production, commercial compost production, commercial mushroom production, commercial bio fertilizer production and plant breeding techniques.

FACILITIES AND AMENITIESಸೌಕರ್ಯಗಳು ಮತ್ತು ಸವಲತ್ತುಗಳು

ಮಹಾವಿದ್ಯಾಲಯದಲ್ಲಿ ಲಭ್ಯವಿರುವ ಸೌಕರ್ಯಗಳು ಮತ್ತು ಸವಲತ್ತುಗಳು FACILITIES AND AMENITIES AVAILABLE AT THE COLLEGE

ಗ್ರಂಥಾಲಯ LIBRARY

ಐಸಿಎಆರ್ / ರಾಜ್ಯಅನುದಾನಗಳನ್ನು ಬಳಸುವುದರ ಮೂಲಕ 9ನೇ ಯೋಜನಾ ಅವಧಿಯಲ್ಲಿ 3285 ಹೊಸ ಪುಸ್ತಕಗಳನ್ನುಮಹಾವಿದ್ಯಾಲಯದ ಗ್ರಂಥಾಲಯಕ್ಕೆಸೇರಿಸಲಾಗಿದೆ.ಅಲ್ಲದೇ ವಿವಿಧ ವೈಜ್ಞಾನಿಕ ನಿಯತಕಾಲಿಕಗಳು, ಚಂದಾದಾರಿಕೆ ಪತ್ರಿಕೆಗಳನ್ನುಸೇರಿಸಲಾಯಿತು.ಗ್ರಂಥಾಲಯದಲ್ಲಿ 11000 ಸಂಗ್ರಹಗಳ ಸೇರ್ಪಡೆಯೊಂದಿಗೆ, ಸಿಡಿ-ರಾಮ್ಸ್, ಇ-ಗ್ರಂಥಾಲಯ ಉತ್ತಮ ಅಭಿವೃದ್ಧಿ.

Well developed Library with a collection of 11000 accessions, CD-ROM’s, e-library and network facility. 3285 new books were added to the College Library during the IX plan period by utilizing ICAR/State grants, besides subscriptions to various scientific journals..

ಪ್ರಯೋಗಾಲಯಗಳು LABORATORIES

ಬೋಧನೆ ಹಾಗೂ ಸಂಶೋಧನಾ ಉದ್ದೇಶಗಳಿಗಾಗಿ 12 ವಿಭಾಗಗಳಲ್ಲಿ ಉತ್ತಮ ಸಲಕರಣೆಗಳನ್ನು ಹೊಂದಿದ ಪ್ರಯೋಗಾಲಯಗಳು.

25 ಜಾಲದ ಘಟಕಗಳಲ್ಲಿ ಉತ್ತಮವಾಗಿ ಅಭಿವೃದ್ಧಿಗೊಂಡ ಗಣಕಯಂತ್ರ ಪ್ರಯೋಗಲಯ.

Well equipped laboratories in as many as 12 disciplines for teaching and research purposes.

Well developed computer laboratory with 25 nodes.

ಅರಿಸ್ ARIS

ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಾಮಾನ್ಯ ಬಳಕೆಗಾಗಿ 30 ಕಂಪ್ಯೂಟರ್ಜಾಲದೊಂದಿಗೆ ಕೃಷಿ ಸಂಶೋಧನಾ ಮಾಹಿತಿ ವವಸ್ಥೆಯ (ಅರಿಸ್) ಪ್ರಯೋಗಾಲಯ.

Agriculture Research Information Systems (ARIS) laboratory with 30 computer nodes for general use by students and staff.

ನಿಸ್ತಂತು ಅಂತರ್ಜಾಲ ಸಂಪರ್ಕ WiFi

ಎಲ್ಲಾ ವರ್ಗದ ತರಗತಿ ಕೊಠಡಿಗಳು ಮತ್ತು ವಸತಿಗೃಹಗಳಿಗೆ ವೈ-ಫೈ ಸೌಲಭ್ಯಗಳು

Wi-fy facilities to all the all class rooms and Hostels

ಮಳೆನೀರು (ರೂಫ್) ಕೊಯ್ಲು Rain Water (Roof) Harvesting

ಆವರಣದಲ್ಲಿ ಶಾಶ್ವತ ಮಳೆ ನೀರು (ರೂಫ್) ಕೊಯ್ಲು ನಿರ್ಮಾಣ.

Permanent Rain Water (Roof) Harvesting Structure in the campus.

ಅಡಿಕೆತೋಟ Areca Garden

ಉತ್ತಮವಾಗಿ ಸ್ಥಾಪಿತವಾಗಿರುವ ಅಡಿಕೆ ತೋಟ ಆಧುನಿಕ ಉಪನ್ಯಾಸ ಕೇಂದ್ರಗಳು

ಉಪನ್ಯಾಸದ ದೃಶ್ಯಾವಳಿಗಳನ್ನು ಹೊಂದಿದ ಉಪನ್ಯಾಸ ಕೇಂದ್ರಗಳು.

Well established Areca Garden.

Lecture Halls equipped with latest audio visual aids.

ವಸತಿಸೌಲಭ್ಯ Hostel

ಬಾಲಕರು ಮತ್ತು ಬಾಲಕಿಯರಿಗೆ ಉತ್ತಮ ವಸತಿ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗಿದೆ.

ಬಾಲಕರ ವಸತಿ ಗೃಹದಲ್ಲಿ ಮಲ್ಟಿ ಜಿಮ್ನಾಷಿಯಂ ಕೇಂದ್ರವಿದೆ.

Well developed Hostel facility for both Boys and Girls.

Multi gymnasium centre at the Boy’s Hostel.

ಕ್ಷೇತ್ರಬೆಳೆಘಟಕ Instructional Farm

ಕ್ಷೇತ್ರಬೆಳೆ ಘಟಕ, ಪ್ರಮುಖ ತೋಟಗಾರಿಕೆ ಬೆಳೆಗಳು, ನರ್ಸರಿ ಘಟಕ, ಆದ್ರ್ರಭೂಮಿ, ಪಶುಸಾಕಣೆ ಘಟಕ, ಉತ್ಪಾದನಾ ಸೌಲಭ್ಯಗಳು, ಗೋಬರ್ ಅನಿಲ ಘಟಕ ಇತ್ಯಾದಿಗಳನ್ನು ಒಳಗೊಂಡಂತೆ ಶೈಕ್ಷಣಿಕ ಕೃಷಿಯನ್ನು ಪರಿಣಾಮಕಾರಿ ಬೋಧನೆಗಾಗಿ ಸ್ಥಾಪಿಸಲಾಗಿದೆ.

Instructional Farm including field crop unit, major horticultural crops, nursery unit, wet land, animal production unit, compost production facilities, gobar gas plant etc., has been established for effective teaching.

ಅತಿಥಿಗೃಹ Guest House

ವಿಜ್ಞಾನಿಗಳು, ಗಣ್ಯರು ಮತ್ತು ವಿದ್ಯಾರ್ಥಿಗಳ ಪೋಷಕರನ್ನುಭೇಟಿಮಾಡಲು ಅತಿಥಿ ಗೃಹವನ್ನು ಒದಗಿಸಲಾಗಿದೆ.

Well furnished Guest House for visiting scientists, dignitaries and parents of students etc.,

ಆಪ್ತಸಮಾಲೋಚನಾ ಘಟಕ Counseling Unit

ವಿದ್ಯಾರ್ಥಿ ಆಪ್ತ ಸಮಾಲೋಚನಾ ಘಟಕ ಏಪ್ರಿಲ್, 1999ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.ಇದರ ಮೂಲಕ, ಪ್ರತಿವರ್ಷವೂ ವ್ಯಕ್ತಿತ್ವ ವಿಕಾಸ ಮತ್ತು ಪ್ರೇರಣೆಗೆ ನಿಯಮಿತ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

Student Counseling Unit started functioning from April, 1999. Through this, a regular program on Personality Development and Motivation, organized every year.

ಸುಸಜ್ಜಿತ ಸಭಾಂಗಣ Multi Purpose Hall

ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳು ಇತ್ಯಾದಿಗಳನ್ನು ನಡೆಸಲು ಸುಸಜ್ಜಿತ ಉತ್ತಮವಾದ ಸಭಾಂಗಣ ರೂಪಿಸಲಾಗಿದೆ.

Well equipped Seminar hall for conducting seminars and workshops etc.,

ಎನ್ಎಸ್ಎಸ್ NSS

ಕಡ್ಡಾಯವಾಗಿರುವ ಎನ್ಎಸ್ಎಸ್ ಕಾರ್ಯಾಕ್ರಮದ ಮೂಲಕ ಸಮಾಜಸೇವೆ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಲಾಗಿದೆ

Students participate in Social Service activities through NSS programme which is compulsory.

Cricket Ground

Well established Cricket ground registered by Karnataka State Cricket Association (KSCA)

Achievementಸಾಧನೆಗಳು

Sl. No Name of the Student Rank Subject
ಕ್ರ.ಸಂ. ವಿದ್ಯಾರ್ಥಿಯ ಹೆಸರು ಶ್ರೇಯಾಂಕ ವಿಷಯ

Staff Detailsಸಿಬ್ಬಂದಿ ವಿವರ

{{staff.name}}
{{staff.name}}

{{staff.title}}
{{staff.location}}
Contact : {{staff.contact.tel}}
Email : {{staff.contact.mail}}

CONTACTಸಂಪರ್ಕಿಸಿ

Dean (Agri.) ಡೀನ್ ( ಕೃಷಿ )

COLLAGE OF AGRICULTURE,
SHIVAMOGGA, KARNATAKA INDIA
ಕೃಷಿ ಮಹಾವಿದ್ಯಾಲಯ,
ಶಿವಮೊಗ್ಗ, ಕರ್ನಾಟಕ, ಭಾರತ
+91 94808 38960
+91 8182 267086
deanagrishimoga.uahs@gmail.com

Correspondence: ಪತ್ರವ್ಯವಹಾರ:
University of Agricultural and Horticultural Sciences ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ
Navile,
SHIVAMOGGA - 577204,
KARNATAKA, INDIA
ನವಿಲೆ,
ಶಿವಮೊಗ್ಗ - 577204,
ಕರ್ನಾಟಕ, ಭಾರತ
Communication: ಸಂವಹನ:
Vice Chancellor ಕುಲಪತಿಗಳ ಕಛೇರಿ   +91 8182 267001,   vcuahss2014@gmail.com
Registrar ಕುಲಸಚಿವರ ಕಛೇರಿ   +91 8182 267011,   registrarshimoga@gmail.com
Director of Research ಸಂಶೋಧನಾ ನಿರ್ದೇಶನಾಲಯ   +91 8182 267013,   druahs@gmail.com
Director of Extension ವಿಸ್ತರಣಾ ನಿರ್ದೇಶನಾಲಯ   +91 8182 267015,   uahsde@gmail.com
Director of Education ಶಿಕ್ಷಣ ನಿರ್ದೇಶನಾಲಯ   +91 8182 267013,   doe.uahs@gmail.com
Director of PG Studies ಸ್ನಾತಕೋತ್ತರ ನಿರ್ದೇಶನಾಲಯ   +91 8182 267012,   deanpgs.uahs@gmail.com
Director of SC/ST Cell ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕ   +91 94808 38207,   dirscstcelluahs@gmail.com
Page Hits : 202341
ಪುಟ ಭೇಟಿ : 202341
Last modified on :
23 September 2021
ಕೊನೆಯ ಬಾರಿ ಮಾರ್ಪಡಿಸಲಾಗಿದೆ :
23 September 2021

Designed, Developed and Maintained by PRABHAT SERVICES ®™© for UAHS® All right Reserved.