ಗಣೇಶಪ್ಪ ಕೆ.
GANESHAPPA K.
ಕೃಷಿ ಮತ್ತು ತೋಟಕಾರಿಕೆ ವಿಶ್ವವಿದ್ಯಾಲಯವು, ಕರ್ನಾಟಕ ಸರ್ಕಾರ, ಭಾರತೀಯ ಅನುಸಂಧಾನ ಪರಿಷತ್ತು ಮತ್ತು ಭಾರತ ಸರ್ಕಾರ ಇವುಗಳಿಂದ ವಿವಿಧ ಯೋಜನೆಗಳಿಗೆ ನಿಯಮಿತ ಮತ್ತು ಅನಿಯಮಿತ(Adhoc) ಅನುದಾನಗಳನ್ನು ಪಡೆಯುತ್ತದೆ.
ಹಣಕಾಸಿನ ಲೆಕ್ಕನಿರ್ವಹಣೆಯನ್ನು ಸ್ಥಿರನಿಧಿ ತಳಹದಿಯ ಮೇಲೆ (Fund Based Accounting System) ಗಣಕೀಕೃತಗೊಳಿಸಿ, ಎಲ್ಲ ವ್ಯವಹಾರಗಳನ್ನು ಕ್ರೋಡೀಕರಿಸಿ ಜಮಾ ಮತ್ತು ಖರ್ಚುಗಳ ವಿವರ ಪ್ರತಿಫಲಿಸುವಂತೆ ನಿರ್ವಹಿಸಲಾಗುತ್ತಿದೆ. ಕೃಷಿ ಮತ್ತು ತೋಟಕಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ನಿಬಂಧನೆ ಮತ್ತು ಪರಿನಿಯಮಗಳ ಅನುಸಾರ ದ್ವಿಲೆಕ್ಕಪದ್ದತಿಯನ್ನು (Double Entry System) ಅಳವಡಿಸಲಾಗಿದೆ. ಸದ್ಯ ಕರ್ನಾಟಕ ಸರ್ಕಾರ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ಭಾರತ ಸರ್ಕಾರ ಮತ್ತು ಇತರ ಅನಿಯಮಿತ (Adhoc) ಯೋಜನೆಗಳು ಈ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತವೆ.
ವಿವಿಧ ಧ್ಯೇಯೋದ್ದೇಶಗಳಿಗನುಸಾರ ಶಿಕ್ಷಣದಡಿಯಲ್ಲಿ, ಒಂದು ಕೃಷಿ ಮಹಾವಿದ್ಯಾಲಯ, ಎರಡು ತೋಟಗಾರಿಕೆ ಮಹಾವಿದ್ಯಾಲಯಗಳು, ಒಂದು ಅರಣ್ಯ ಮಹಾವಿದ್ಯಾಲಯ ಮತ್ತು ಎರಡು ಡಿಪ್ಲೊಮಾ ಮಹಾವಿದ್ಯಾಲಯಗಳು ಕಾರ್ಯನಿರ್ವಹಿಸುತ್ತವೆ. ಸಂಶೋಧನೆ ಅಡಿಯಲ್ಲಿ ನಾಲ್ಕು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳು ಮತ್ತು ಒಂಭತ್ತು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳು ಈ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತವೆ. ಅಲ್ಲದೇ ವಿಸ್ತರಣೆ ಅಡಿಯಲ್ಲಿ ಎರಡು ವಿಸ್ತರಣಾ ಶಿಕ್ಷಣ ಘಟಕಗಳು, ನಾಲ್ಕು ವಿಸ್ತರಣಾ ಘಟಕಗಳು ಮತ್ತು ನಾಲ್ಕು ಕೃಷಿ ವಿಜ್ಞಾನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
The University is getting funds through various sources such as Government of Karnataka, Indian Council of Agricultural Research and Government of India through regular projects and adhoc projects.
Financial Accounting is computerized on Fund Based Accounting System and programmed as to reflect all the financial transactions with regard to receipts and payments. Double entry system of accounting (FBAS- Fund Based Accounting System) has been implemented in accordance with the acts and statutes of University of Agricultural and Horticultural Sciences, Shivamogga. Presently, GOK-projects, GOI-projects, ICAR-projects and Adhoc schemes are functioning in the university.
As per objectives of the University, under Education, one Agricultural College, two Horticultural colleges, one Forestry College and two Diploma (Agri.) colleges are functioning in the University. Under Research four Zonal Agricultural and Horticultural Research Stations, nine Agricultural and Horticultural Research Stations are functioning in the University. Under Extension there are two Extension Education Units, four Extension Units and four Krishi Vigyana Kendras are functioning in the university.
Designed, Developed and Maintained by PRABHAT SERVICES ®™© for UAHS® All right Reserved.