header Gandhiji

VICE CHANCELLOR ಕುಲಪತಿಗಳು

 

vc

ಡಾ. ಮಂಜುನಾಥ ಕೆ.ನಾಯ್ಕ್

ಪಿಹೆಚ್.ಡಿ(ಐಎಆರ್‍ಐ), ಪಿಡಿಎಫ್(ಇಕ್ರಿಸ್ಯಾಟ್),ಎಫ್‍ಬಿಎಫ್(ಯುಎಸ್‍ಎ), ಎಫ್‍ಪಿಎಸ್‍ಐ, ಎಫ್‍ಎನ್‍ಎಬಿಎಸ್

Dr. Manjunatha K. Naik

Ph.D(IARI), PDF(ICRISAT), FBF(USA), FPSI, FNABS
vcuahss2014@gmail.com
+91 94808 38999
+91 8182 267011

 

ಕುಲಪತಿಗಳ ಸಂದೇಶ

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯದಲ್ಲಿನ ಮೊಟ್ಟ ಮೊದಲ ಸಮಗ್ರ ವಿಶ್ವವಿದ್ಯಾಲಯವಾಗಿದ್ದು, ಇದು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಷಯಗಳನ್ನು ತನ್ನ ವ್ಯಾಪ್ತಿಯಲ್ಲಿ ಒಳಗೊಂಡಿರುತ್ತದೆ. ಕರ್ನಾಟಕ ಕಾಯ್ದೆ ಸಂಖ್ಯೆ 38, 2012 ಅಧಿಸೂಚನೆ ಸಂಖ್ಯೆ: ಸಂ.ವ್ಯ.ಶಾ. ಇಲಾಖೆ, 19 ಶಾಸನ, 2012. ದಿನಾಂಕ 21-09-2012ರಂದು ಕರ್ನಾಟಕ ವಿಶೇಷ ಗೆಜೆಟ್‍ನ ಭಾಗ IV-J ಸಂಖ್ಯೆ 656, ತಕ್ಷಣಕ್ಕೆ ಜಾರಿಗೆ ಬರುವಂತೆ ಪ್ರಕಟಿಸಲಾಗಿರುತ್ತದೆ.

ವಿಶ್ವವಿದ್ಯಾಲಯವು ಶಿವಮೊಗ್ಗ, ಮೂಡಿಗೆರೆ, ಪೊನ್ನಂಪೇಟೆ, ಹಿರಿಯೂರು, ಕತ್ತಲಗೆರೆ ಹಾಗೂ ಬ್ರಹ್ಮಾವರಗಳನ್ನು ಒಳಗೊಂಡ ಈ 6 ಶೈಕ್ಷಣಿಕ ಸಂಸ್ಥೆಗಳು; ಶಿವಮೊಗ್ಗ, ಹಿರಿಯೂರು, ಮೂಡಿಗೆರೆ ಮತ್ತು ಬ್ರಹ್ಮಾವರಗಳಲ್ಲಿ 4 ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳು; ಕತ್ತಲಗೆರೆ, ಉಲ್ಲಾಳ, ತೀರ್ಥಹಳ್ಳಿ, ಪೊನ್ನಂಪೇಟೆ, ಶೃಂಗೇರಿ, ಬಾವಿಕೆರೆ, ಹೊನ್ನವಿಲೆ, ಮಡಿಕೇರಿ ಹಾಗೂ ಕಡೆಮಡ್ಕಲ್‍ಗಳಲ್ಲಿ 9 ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ. ವಿಶ್ವವಿದ್ಯಾಲಯದ ಶಿವಮೊಗ್ಗ (ನವಿಲೆ), ಚಿತ್ರದುರ್ಗ (ಹಿರಿಯೂರು), ಚಿಕ್ಕಮಗಳೂರು (ಮೂಡಿಗೆರೆ) ಹಾಗೂ ಉಡುಪಿ (ಬ್ರಹ್ಮಾವರ) ಗಳಲ್ಲಿ 4 ಕೃಷಿ ವಿಜ್ಞಾನ ಕೇಂದ್ರಗಳು; ಕತ್ತಲಗೆರೆ ಮತ್ತು ಪೊನ್ನಂಪೇಟೆಗಳಲ್ಲಿ 2 ವಿಸ್ತರಣಾ ಶಿಕ್ಷಣ ಘಟಕವನ್ನು ಸ್ಥಾಪಿಸಲಾಗಿದ್ದು, ರೈತಸಮುದಾಯದ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ವಿಭಿನ್ನ ಕೃಷಿ-ಪರಿಸರ ಸನ್ನಿವೇಶಗಳನ್ನು ಹೊಂದಿದ್ದು, ವಿವಿಧ ಭೂ ಬಳಕೆಯ ವ್ಯವಸ್ಥೆಗಳು ಹಾಗೂ ಪಶ್ಚಿಮ-ಘಟ್ಟಗಳನ್ನು ಒಳಗೊಂಡ ಜೀವವೈವಿಧ್ಯವುಳ್ಳ ಅರಣ್ಯ ಪ್ರದೇಶದ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳು ಪ್ರಕೃತಿದತ್ತವಾಗಿವೆ. ವಿಶ್ವವಿದ್ಯಾಲಯವು ಪದವಿ ಶಿಕ್ಷಣ, ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಮತ್ತು ತರಬೇತಿ ವ್ಯವಸ್ಥೆಗಳ ವ್ಯಾಪ್ತಿಯನ್ನು ಮಟ್ಟಸವಾಗಿ ಸೇರಿಸುವ ಅಗತ್ಯವಿದ್ದು ಮತ್ತು ಈ ಕ್ಷೇತ್ರದ ಬೆಳವಣಿಗೆಗೆ ಅಪಾರವಾದ ಸಾಮರ್ಥ್ಯ ವನ್ನು ಬಳಸಿದರೆ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳ ಪಠ್ಯಕ್ರಮವನ್ನು ಪುನರ್‍ ನಿರ್ಮಾಣ ಮಾಡುವುದರ ಮೂಲಕ ಏಕಮುಖಿಯಾಗಿ(ಲಂಬವಾಗಿ) ಸೇರಿಸಿಕೊಳ್ಳಬೇಕಾಗಿರುತ್ತದೆ. ವಿಶ್ವವಿದ್ಯಾಲಯದಿಂದ ಹೊರಹೊಮ್ಮುವ ಹಾಗೂ ಬೋಧನಾ ಆವರಣಗಳು, ಕೃಷಿ ಶಿಕ್ಷಣದ ವೈವಿಧ್ಯೀಕರಣ, ನೂತನ ಉದಯೋನ್ಮುಖ ಪ್ರದೇಶಗಳಲ್ಲಿ ಸಂಶೋಧನೆ ನಡೆಸಲು ಅಗತ್ಯವಾದ ಮೂಲಸೌಕರ್ಯಗಳ ಸೌಲಭ್ಯಗಳನ್ನು ಸೃಜಿಸುವುದು ಮತ್ತು ಸ್ಥಳ ನಿರ್ದಿಷ್ಟ ತಂತ್ರಜ್ಞಾನ ಪ್ರಸಾರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ವಿಶ್ವವಿದ್ಯಾಲಯವು ಹಲವು ವಿಧಗಳಲ್ಲಿ ಬೆಳೆಯಬೇಕಾಗಿದೆ. ಹೀಗಾಗಿ ನಮ್ಮ ಸಾಧನೆಗಳು, ಗುರಿಗಳ ಬಗ್ಗೆ ಆತ್ಮಾವಲೋಕನವನ್ನು ಮಾಡಿಕೊಳ್ಳಲು ಮತ್ತು ಸಂಸ್ಥೆಯ ರಚನೆ ಹಾಗೂ ಕಾರ್ಯನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಯನ್ನು ತರಬೇಕಾಗಿದೆ. ಅಲ್ಲದೆ ಉದಯೋನ್ಮುಖ ಸವಾಲುಗಳನ್ನು ಎದುರಿಸಲು ಹೆಚ್ಚಿನ ಹಂಬಲವನ್ನು ಹೊಂದಲಾಗಿದೆ.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ಗುಣಮಟ್ಟದ ಶಿಕ್ಷಣದ (ಸ್ನಾತಕ ಮತ್ತು ಸ್ನಾತಕೋತ್ತರ ಎರಡೂ) ಉತ್ತೇಜನಕ್ಕೆ ಜವಾಬ್ದಾರನಾಗಿರುವ ಕಾರಣ, ವಿವಿಧ ಕೃಷಿ-ಪರಿಸರದ ಪರಿಸ್ಥಿತಿಯಲ್ಲಿ ಕೃಷಿ, ತೋಟಗಾರಿಕೆ ಮತ್ತು ಅರಣ್ಯಶಾಸ್ತ್ರಗಳಲ್ಲಿ ಅವಶ್ಯಾಧಾರಿತ ಸಂಶೋಧನೆ, ವಿಚಾರಗೋಷ್ಠಿಗಳ, ಕಾರ್ಯಾಗಾರಗಳು ಮತ್ತು ವಿವಿಧ ಪಲಾನುಭವಿಗಳಿಗೆ ತರಬೇತಿ, ಸವಾಲುಗಳನ್ನು ಎದುರಿಸಲು ಅಪೇಕ್ಷಿತ ಮೂಲಭೂತ ಸೌಕರ್ಯಗಳ ಸೃಷ್ಟಿ, ಅಧಿಕಾರಿಗಳ ನೇಮಕಾತಿ, ವಿಜ್ಞಾನಿಗಳು ಮತ್ತು ಬೆಂಬಲಿತ ಸಿಬ್ಬಂದಿ, ವಿಸ್ತರಣೆ ಶಿಕ್ಷಣ ಸಂಸ್ಥೆಗಳ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ವಿಸ್ತರಣೆ ಘಟಕಗಳು, ಕೃಷಿ ಮೇಳ, ಕ್ಷೇತ್ರೋತ್ಸವಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸುವುದು, ನೂತನ ಕಟ್ಟಡಗಳ ಸ್ಥಾಪನೆ ಮತ್ತು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಎಲ್ಲ ಶಾಸನಬದ್ಧ ಹಾಗೂ ಶಾಸನಬದ್ಧ ಸಮಿತಿಗಳನ್ನು ಒಳಗೊಂಡ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಮೂಲಕ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ, ಸಂಶೋಧನೆ, ವಿಸ್ತರಣೆ, ವಿದ್ಯಾರ್ಥಿ ಚಟುವಟಿಕೆಗಳನ್ನು ಆಯೋಜಿಸಿ, ಯೋಜಿಸಿ ಮತ್ತು ಕಾರ್ಯಗತಗೊಳಿಸುವುದು. ರಾಜ್ಯ ಸರ್ಕಾರ, ಕೇಂದ್ರ ಸರಕಾರ ಮತ್ತು ವಿವಿಧ ಹಣಕಾಸು ಸಂಸ್ಥೆಗಳಿಂದ ವಿಶ್ವವಿದ್ಯಾಲಯದ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸುವುದು ಮತ್ತು ಎಲ್ಲಾ ನಿರ್ದೇಶನಾಲಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಬಜೆಟ್ ಬೆಂಬಲವನ್ನು ಸೂಕ್ತವಾಗಿ ಒದಗಿಸುವುದು ಸಹ ಸೇರಿರುತ್ತದೆ.

ಹೊಸದಾಗಿ ರೂಪುಗೊಂಡ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಶೈಕ್ಷಣಿಕ, ಸಂಶೋಧನೆ, ಅಭಿವೃದ್ಧಿ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ನೋಡಿಕೊಳ್ಳುವುದು, 2012ರಿಂದಲೂ ವಿಶ್ವವಿದ್ಯಾಲಯವು ಸೂಕ್ತವಾದ ಕಾರ್ಯನಿರ್ವಹಣೆಗಾಗಿ ಸಾಮಾನ್ಯ ಮತ್ತು ವೈಜ್ಞಾನಿಕ ಆಡಳಿತವನ್ನು ಸಹ ಹೊಂದಿರುತ್ತದೆ.

ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನಿಂದ ನೂತನ ವಿಶ್ವವಿದ್ಯಾಲಯ ಮತ್ತು ಅದರ ಅಂಗ ಸಂಸ್ಥೆಗಳಾದ ಮಹಾವಿದ್ಯಾಲಯಗಳಿಗೆ 5 ವರ್ಷದ ಮಾನ್ಯತೆ ಪಡೆಯಲಾಗಿದೆ.

ಆರು ಅಖಿಲ ಭಾರತ ಸಮನ್ವಯ ಸಂಶೋಧನಾ ಪ್ರಾಯೋಜನೆಗಳಾದ ಅಡಿಕೆ, ತೆಂಗು, ದಪ್ಪಕಡಲೆ, ನೆಲಗಡಲೆ, ಕೃಷಿ-ಅರಣ್ಯ, ಬೇರುಗಂಟು ರೋಗಗಳು ಮತ್ತು ಮೆಕ್ಕೆ ಜೋಳ ಕುರಿತಂತೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಅನುಮೋದಿಸಿದ್ದು ಹಾಗೂ ಅದನ್ನು ಜಾರಿಗೊಳಿಸಲಾಗುತ್ತಿದೆ.

ಬ್ರಹ್ಮಾವರದಲ್ಲಿ ಒಂದು ಹೊಸ ಕೃಷಿ ಡಿಪ್ಲೊಮಾ ಕಾಲೇಜು ಪ್ರಾರಂಭಿಸಲಾಗಿದೆ.

ನೂತನ ವಿಶ್ವವಿದ್ಯಾಲಯ ಆವರಣ ಸ್ಥಾಪನೆಗೆ 777.07 ಎಕರೆ ಭೂಮಿಯನ್ನು ಕರ್ನಾಟಕ ಸರ್ಕಾರ ಅನುಮೋದಿಸಿರುತ್ತದೆ.

ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿದ್ದು ಮತ್ತು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಜ್ಞಾನಗಳ 24 ವಿಭಾಗಗಳಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಒದಗಿಸಲು ನೂತನ ವಿಶ್ವವಿದ್ಯಾಲಯದ ಆವರಣವನ್ನು ಹಾಗೂ ಸ್ನಾತಕೋತ್ತರ ಆವರಣ ಸ್ಥಾಪಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ.

ದೂರದೃಷ್ಟಿ 2030 ದಾಖಲೆಯನ್ನು ಸಿದ್ಧಪಡಿಸಲಾಗಿದ್ದು, ಇದು ಮುಂದಿನ 10-15 ವರ್ಷಗಳಲ್ಲಿ ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನಕ್ಕಾಗಿ ವಿಶ್ವವಿದ್ಯಾಲಯದಲ್ಲಿ ಮಾರ್ಗದರ್ಶಿ ನಕ್ಷೆಯಾಗಿ ರೂಪುಗೊಂಡಿರುತ್ತದೆ.

ಸೂಕ್ಷ್ಮ ನೀರಾವರಿ ಸೌಕರ್ಯವನ್ನು ಅಳವಡಿಸಿಕೊಳ್ಳುವ ಮೂಲಕ ವಿಶ್ವವಿದ್ಯಾಲಯದಲ್ಲಿನ ಎಲ್ಲಾ ಕೃಷಿಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ.

ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಿಕ್ಕೆ ಮೂಲಸೌಕರ್ಯ ಸೌಲಭ್ಯಗಳನ್ನು ಸೃಜಿಸಲು ನೆರವಾದ ವಿವಿಧ ಹಣಕಾಸು ಸಂಸ್ಥೆಗಳಿಂದ ಅನೇಕ ಯೋಜನೆಗಳನ್ನು ಪಡೆಯುವಲ್ಲಿ ಸಾಧ್ಯವಾಗಿಸಿದೆ.

ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ವ್ಯವಸ್ಥೆಯೊಂದಿಗೆ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ಸೃಜಿಸುವ ಹಾಗೂ ಎಲ್ಲಾ ಗ್ರಂಥಾಲಯಗಳಲ್ಲಿ ಅಂತರ್ಜಾಲವನ್ನು ಸ್ಥಾಪಿಸಲಾಗಿದೆ.

ಗೌರವಾನ್ವಿತ ಪ್ರಧಾನಮಂತ್ರಿಗಳು 'ನನ್ನ ಗ್ರಾಮ ನನ್ನ ಹೆಮ್ಮೆ' ಘೋಷಣೆಯಿಂದ ಸ್ಫೂರ್ತಿ ಪಡೆದ ನಮ್ಮ ವಿಶ್ವವಿದ್ಯಾಲಯವು ದತ್ತು ಗ್ರಾಮ ಕಾರ್ಯಕ್ರಮವನ್ನು ಪರಿಚಯಿಸಿದೆ. ಈ ಗ್ರಾಮಗಳಲ್ಲಿನ ರೈತರ ಬೆಳೆ ಉತ್ಪಾದಕತೆಯನ್ನು ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ವಿಶ್ವವಿದ್ಯಾಲಯ ವ್ಯಾಪ್ತಿಯ ಇಪ್ಪತ್ತು ಗ್ರಾಮಗಳನ್ನು ಗುರುತಿಸಲಾಗಿದೆ ಮತ್ತು ಈ ಗ್ರಾಮಗಳಿಗೆ ವಿಶೇಷ ಒತ್ತನ್ನು ನೀಡಲಾಯಿತು.

ಗ್ರಾಮೀಣ ಯುವಕರನ್ನು ಕೃಷಿಯತ್ತ ಆಕರ್ಷಿಸಲು ಹಾಗೂ ಗ್ರಾಮೀಣ ಯುವಕರಿಗೆ ಸ್ವಯಂ ಉದ್ಯೋಗವನ್ನು ಒದಗಿಸಲು, ಜೇನುಸಾಕಣೆ, ಸೂಕ್ಷ್ಮ ನೀರಾವರಿ, ಮೌಲ್ಯವರ್ಧನೆ ಕುರಿತ ಸರ್ಟಿಫಿಕೇಟ್ ಕೋರ್ಸ್‍ಅನ್ನು ವಿಶ್ವವಿದ್ಯಾಲಯ ಪ್ರಾರಂಭಿಸಿದೆ.

ಆಹಾರ ಸುರಕ್ಷತಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮೌಲ್ಯವರ್ಧಿತ ಆಹಾರ ಉತ್ಪನ್ನಗಳನ್ನು ತಯಾರಿಸಲು ಪ್ರಯೋಗಾಲಯಗಳನ್ನು ಸ್ಥಾಪಿಸಲು ಗೃಹವಿಜ್ಞಾನ ವಿಭಾಗದ ವಿಜ್ಞಾನಿಗಳಿಗೆ ಹೆಚ್ಚಿನ ಬೆಂಬಲವನ್ನು ನೀಡಲಾಗಿದೆ.

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೃಷಿ ಸಮುದಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇವೆಯನ್ನು ಪೂರೈಸಲು ಗುರಿಗಳನ್ನು ಮತ್ತು ಆದ್ಯಾದೇಶಗಳನ್ನು ಸಾಧಿಸಲು ಶಿಕ್ಷಕರ, ಆಡಳಿತಾತ್ಮಕ ಸಿಬ್ಬಂದಿಗಳ ಬೆಂಬಲ ಹಾಗೂ ಕೃಷಿ ಕಾರ್ಮಿಕರ ಬೆಂಬಲ ವಿಶ್ವವಿದ್ಯಾಲಯಕ್ಕೆ ಉತ್ತಮವಾಗಿ ದೊರೆತಿದೆ.

ಈ ಕಿರಿಯ ವಿಶ್ವವಿದ್ಯಾಲಯಕ್ಕೆ ಮುಂಬರುವ ದಿನಗಳಲ್ಲಿ ಶಿಕ್ಷಕರು, ಸಂಶೋಧಕರು, ವಿಸ್ತರಣಾ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸಿಬ್ಬಂದಿಗಳ ಬೆಂಬಲದಿಂದ ಆದ್ಯಾದೇಶಗಳನ್ನು ಮತ್ತು ದೃಷ್ಟಿಕೋನವನ್ನು ಸಾಧಿಸಲು ಪ್ರಯತ್ನಿಸುತ್ತಿದೆ ಮತ್ತು ಕೃಷಿ ಸಮುದಾಯದ ಅಗತ್ಯಗಳನ್ನು ಪೂರೈಸಲು ದಿಟ್ಟ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ಶಿವಮೊಗ್ಗ, ಚಿತ್ರದುರ್ಗ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿರುವ ವಿವಿಧ ಕೃಷಿ ಚಟುವಟಿಕೆಗಳ ಮೂಲಕ ಕೃಷಿ ಸಮುದಾಯದ ಅಗತ್ಯತೆಗಳನ್ನು ಪೂರೈಸುವ ಮೂಲಕ ವಿಶ್ವವಿದ್ಯಾಲಯವು ವಿವಿಧ ವಿಸ್ತರಣಾ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ. ಮುಂಚೂಣಿ ಪ್ರಾತ್ಯಕ್ಷಿಕೆ, ಕೃಷಿ ಪರೀಕ್ಷೆ, ಸಂವಾದ ಸಭೆಗಳು, ರೈತರ ಕ್ಷೇತ್ರ ಪಾಠಶಾಲೆ, ಕೃಷಿಮೇಳ, ಕ್ಷೇತ್ರೋತ್ಸವಗಳು, ಬೀಜಗಳು ಮತ್ತು ಗುಣಮಟ್ಟದ ಬಿತ್ತನೆ ಸಾಮಗ್ರಿಗಳನ್ನು ಸರಬರಾಜು ಮಾಡುವುದರ ಜೊತೆಗೆ, ಸಕಾಲಿಕ ಕೃಷಿ ಸಲಹಾ ಕಾರ್ಯಗಳು ಮತ್ತು ಕೃಷಿ ಪ್ರಕಟಣೆಗಳನ್ನು ಕೈಗೊಳ್ಳಲಾಗುತ್ತಿದೆ.

ನಮ್ಮ ವಿದ್ಯಾರ್ಥಿಗಳು ಐಸಿಎಆರ್-ಜೆಆರ್‍ಎಫ್ ಪರೀಕ್ಷೆಯಲ್ಲಿ ರ್ಯಾಂಕ್‍ಗಳನ್ನು ಸಾಧಿಸಿದ್ದಾರೆ ಮತ್ತು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಂಡಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ.

ಈ ಸಂದರ್ಭದಲ್ಲಿ, ನಮ್ಮ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ. ಇವರುಗಳು ವಿಶ್ವವಿದ್ಯಾಲಯಕ್ಕೆ ಕೀರ್ತಿಯನ್ನು ತಂದು ಕೊಟ್ಟು ವಿಶ್ವವಿದ್ಯಾಲಯದ ಬೆಳವಣಿಗೆಗೆ ಕೊಡುಗೆ ನೀಡಿದ ಎಲ್ಲರಿಗೂ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ನೀವು ಇದೇ ರೀತಿ ನಿರಂತರವಾಗಿ ಬೆಂಬಲ, ಮಾರ್ಗದರ್ಶನ ಮತ್ತು ನೆರವನ್ನು ನೀಡುತ್ತೀರೆಂಬ ವಿಶ್ವಾಸದಿಂದ ಹಾಗೂ ವಿಶ್ವವಿದ್ಯಾಲಯದ ಪ್ರತಿಯೊಬ್ಬರಿಗೂ, ವಿಶ್ವವಿದ್ಯಾಲಯದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಸುತ್ತೇನೆ.

Message from the Vice Chancellor

The University of Agricultural and Horticultural Sciences, Shivamogga is the first integrated University in the State of Karnataka, which has both Agricultural and Horticultural Sciences under its purview. It was established under the Karnataka Act no. 38 of 2012, vide notification no. Sam. Vya. Sha. Ilakhe, 19 Shasana 2012, dated 21.09.2012 published in the Special Gazette of Karnataka, part IV-A, No. 656 on 21.09.2012 bringing it into immediate effect.

The University has six educational institutes at Shivamogga, Mudigere, Ponnampet, Hiriyur, Kathalagere and Brahmavara, four Zonal Agricultural and Horticultural Research Stations at Shivamogga, Hiriyur, Mudigere and Brahmavar and nine Agricultural and Horticultural Research Stations at Bavikere, Kathalagere, Honnavile, Thirthahalli, Sringeri, Ponnampet, Madikeri, Kademadkal and Ullal and two Extension Education Units at Kathalagere and Madikeri functioning to solve the various problems of the farming community.

The University of Agricultural and Horticultural Sciences, Shivamogga is blessed with diverse agro-ecological situations, varied land use systems and valuable natural resources including western-ghats, a biodiversity hot spot. University needs to expand horizontally adding a range of degree courses, postgraduate programmes and training systems and vertically by adding, restructuring the curriculum of all the degree and postgraduate programmes if its immense potential is to be harnessed for the growth of the region. The University has to grow in many folds in terms of students out-turn, teaching campuses, diversification of agricultural education, creating infrastructure facilities required to carry out research in new emerging areas and to address location specific technology dissemination programmes. Thus, it is the time for us to have introspection about our achievements, goals and foresee the changes to be brought in structure and functioning of the organisation to make it more vibrant to address emerging challenges.

Being the Executive Head of the University of Agricultural and Horticultural Sciences, Shivamogga responsible for promotion of quality education (both UG and PG), need based research in different agro-ecological situations in Agriculture, Horticulture and Forestry, organising Seminars, Workshops and Trainings for different stake holders, creation of desired infrastructure to meet challenges, recruitment of officers, scientists and supporting staff, effective outreach activities through Extension Education institutions such as Krishi Vigyan Kendras and Extension units, organising Krishimela, Field days and demonstrations, establishment and development of new institutions and organise, plan and implement various academic, research, extension, student activities of the University through a decision making process involving all statutory and non-statutory Committees of the University. Mustering the financial requirements of the University from the State Government, Central Government and various funding agencies and suitably providing budgetary support to all the Directorates and Educational Institutions are also addressed.

The newly formed University of Agricultural and Horticultural Sciences, Shivamogga, taking care of the academic, research, development and extension activities of the University besides general and scientific administration for proper functioning of the University since, 2012.

Instrumental in getting a 5 year accreditation of the new University and its constituent colleges from Indian Council of Agriculture Research.

Six All India Coordinated Research Projects viz., Arecanut, Palm, Chickpea, Groundnut, Agro-forestry, Nematodes and Maize were approved by ICAR and are being implemented.

One new Agriculture Diploma college was started at Brahmavar.

For establishment of new University campus, 777.07 acres of land was approved by Government of Karnataka

Master plan is prepared and tender process is completed for establishment of new university campus as PG campus for imparting PG education in 24 disciplines of Agriculture, Horticulture and Forestry sciences.

Vision 2030 document is prepared which provides Road map for the University to plan and programme for the next 10-15 years.

All farms in the University have been developed by adopting micro irrigation facility.

Instrumental in getting many projects from various funding agencies which helped to create the infrastructure facilities for developing the technologies.

Networking of all libraries with ICAR system and creation of video conferencing facility has been established.

Inspired by the Hon’ble Prime Ministers slogan ‘My village my pride’, our University introduced Village Adoption programme. Twenty villages were identified and special stress was given in these villages for improving the crop productivity and socio-economic conditions of the farmers

To attract rural youth for agriculture and to provide self-employment for rural youths certificate courses, Bee keeping, Micro irrigation, Value addition was started by the University.

The scientists of Home Science Department were given big support to establish laboratories for preparation of value added food products keeping in view the food safety issues.

The University is well supported by the Teachers, Administrative Support Staff and Agriculture Labours to achieve its mandates and goals to serve the farming community in the State and Country at large.

The young upcoming University is trying to do well with the support of teachers, researchers, extension staff and administrative staff to achieve the mandates and vision and is taking bold and appropriate steps to cater to the needs of the farming community.

The University is catering to the needs of farming community through Krishi Vigyan Kendras located at Shivamogga, Chitradurga, Udupi and Chikkmagaluru districts by undertaking various extension activities viz., frontline demonstration, on farm testing, discussion meetings, farmers field school, krishi mela, field days, besides supplying seeds and quality planting materials, timely farm advisory works and farm publications.

I am happy to mention that our students have achieved ranks in ICAR-JRF Examination and excelled in extra–curricular activities including sports and cultural activities.

On this occasion, I wish to congratulate all the staff and students, who brought laurels to the University and extend my sincere thanks to everyone who have contributed for the development of the University.

On behalf of the University, this office assures continued support, guidance and help and extends warm welcome and best wishes to all the individuals associated with the University.

Correspondence: ಪತ್ರವ್ಯವಹಾರ:
University of Agricultural and Horticultural Sciences ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ
Navile,
SHIVAMOGGA - 577204,
KARNATAKA, INDIA
ನವಿಲೆ,
ಶಿವಮೊಗ್ಗ - 577204,
ಕರ್ನಾಟಕ, ಭಾರತ
Communication: ಸಂವಹನ:
Vice Chancellor ಕುಲಪತಿಗಳ ಕಛೇರಿ   +91 8182 267001,   vcuahss2014@gmail.com
Registrar ಕುಲಸಚಿವರ ಕಛೇರಿ   +91 8182 267011,   registrarshimoga@gmail.com
Director of Research ಸಂಶೋಧನಾ ನಿರ್ದೇಶನಾಲಯ   +91 8182 267013,   druahs@gmail.com
Director of Extension ವಿಸ್ತರಣಾ ನಿರ್ದೇಶನಾಲಯ   +91 8182 267015,   uahsde@gmail.com
Director of Education ಶಿಕ್ಷಣ ನಿರ್ದೇಶನಾಲಯ   +91 8182 267013,   doe.uahs@gmail.com
Director of PG Studies ಸ್ನಾತಕೋತ್ತರ ನಿರ್ದೇಶನಾಲಯ   +91 8182 267012,   deanpgs.uahs@gmail.com
Director of SC/ST Cell ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕ   +91 94808 38207,   dirscstcelluahs@gmail.com
Page Hits : 202370
ಪುಟ ಭೇಟಿ : 202370
Last modified on :
18 August 2020
ಕೊನೆಯ ಬಾರಿ ಮಾರ್ಪಡಿಸಲಾಗಿದೆ :
18 August 2020

Designed, Developed and Maintained by PRABHAT SERVICES ®™© for UAHS® All right Reserved.