ಡಾ.ಎಸ್.ಶ್ರೀಧರ
ಎಂ. ಎಸ್ಸಿ. (ಕೃಷಿ ), ಪಿಹೆಚ್.ಡಿ.ಪಿಜಿಡಿಎಇಎಂ,
ಪ್ರಾಧ್ಯಾಪಕರು(ಬೇಸಾಯಶಾಸ್ತ್ರ ) & ಸಂಯೋಜಕರು, ಅಂತರಾಷ್ಟ್ರೀಯ ವ್ಯವಹಾರಗಳು
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ.
ಕೆ.ಶಿ.ನಾ.ಕೃ.ತೋ.ವಿ.ವಿ.ಯು ಅಂತರ್ರಾಷ್ಟ್ರೀಯ ಮಾನ್ಯತೆ ಕಡೆಗೆ ನೂತನ ಉಪಕ್ರಮ
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗವು, ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗಾಗಿ ಅಂತಾರಾಷ್ಟಿçÃಯ ವ್ಯವಹಾರಗಳು ಎಂಬ ಪ್ರತ್ಯೇಕ ವಿಭಾಗವನ್ನು ತೆರೆಯುವ ಮೂಲಕ ಅಂತಾರಾಷ್ಟಿçÃಯ ಮಾನ್ಯತೆ ನೀಡುವ ನೂತನ ವಿಭಾಗವನ್ನು ಪ್ರಾರಂಭಿಸಿದೆ. ಈ ಕೆಳಗಿನ ಉದ್ದೇಶಗಳೊಂದಿಗೆ ಸಂಯೋಜಕರು, ಅಂತರ್ರಾಷ್ಟ್ರೀಯ ವ್ಯವಹಾರಗಳ ವಿಭಾಗ, ಇವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಉದ್ದೇಶಗಳು:
೧. ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗದ ನಡುವೆ ಪ್ರಮುಖ ವಿಶ್ವವಿದ್ಯಾಲಯಗಳು ಮತ್ತು ಅಂತಾರಾಷ್ಟಿçÃಯ ಖ್ಯಾತಿಯ ಸಂಶೋಧನಾ ಸಂಸ್ಥೆಗಳೊAದಿಗೆ ಒಡಂಬಡಿಕೆಯ ಒಪ್ಪಂದ ಮಾಡಿಕೊಳ್ಳುವುದು.
೨. ಹೊಸ ಉದಯೋನ್ಮುಖ ಹಾಗೂ ನಾವೀನ್ಯ ಕ್ಷೇತ್ರಗಳಿಗೆÀ ವಿದೇಶಿ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳಲ್ಲಿ ಅಂತಾರಾಷ್ಟಿçÃಯ ಮಾನ್ಯತೆ ಪಡೆಯುವುದು. ಇಲ್ಲಿ ವಿದ್ಯಾರ್ಥಿಗಳನ್ನು ತರಬೇತಿಗೆ ತೊಡಗಿಸುವುದು ಹಾಗೂ ಅಧ್ಯಾಪಕರನ್ನು ನಿಯೋಜಿಸುವುದು. ಇದರ ಜೊತೆಗೆ ಸಂಶೋಧನೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿಪಡಿಸುವುದು.
೩. ಸಹಸ್ರಮಾನದ ಅಭಿವೃದ್ಧಿ ಗುರಿಗಳ ಅಗತ್ಯತೆಗಳನ್ನು ಪೂರೈಸಲು ಮತ್ತು ಪರಸ್ಪರ ಹಿತಾಸಕ್ತಿಯ ನಾವೀನ್ಯ ಕ್ಷೇತ್ರಗಳ ಅಗತ್ಯಗಳನ್ನು ಪೂರೈಸಲು ಬಹು-ಸಾಂಸ್ಥಿಕ ಮತ್ತು ಬಹುರಾಷ್ಟಿçÃಯ ಸಂಶೋಧನೆ ಮತ್ತು ತರಬೇತಿ ಪ್ರಸ್ತಾವÀಗಳನ್ನು ಅಭಿವೃದ್ಧಿಪಡಿಸುವುದು.
ಪ್ರಸ್ತುತ ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗವು ಈ ಕೆಳಗಿನ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
೧. ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿ, ಕಾನ್ಸಾಸ್, ಅಮೆರಿಕಾ
೨. ನೆಬ್ರಸ್ಕಾ ವಿಶ್ವವಿದ್ಯಾಲಯ, ಲಿಂಕನ್, ಅಮೆರಿಕಾ
೩. ಗೊಟ್ಟಿಂಗನ್ ವಿಶ್ವವಿದ್ಯಾಲಯ, ಜರ್ಮನಿ
ಇಲ್ಲಿಯವರೆಗೆ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 15 ಅಧ್ಯಾಪಕರು ಈ ಸೌಲಭ್ಯವನ್ನು ವಿಶ್ವಬ್ಯಾಂಕ್ ಅನುದಾನಿತ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ(ಐಸಿಎಆರ್) ಅಡಿಯಲ್ಲಿ ಬರುವ ರಾಷ್ಟಿçÃಯ ಕೃಷಿ ಉನ್ನತ ಶಿಕ್ಷಣ ಪ್ರಾಯೋಜನೆ (ಎನ್‌ಎಹೆಚ್‌ಇಪಿ)-ಸಾಂಸ್ಥಿಕ ಅಭಿವೃದ್ಧಿ ಯೋಜನೆ(ಐಡಿಪಿ)ಯ ಮೂಲಕ ಪ್ರಯೋಜನ ಪಡೆದುಕೊಂಡಿದ್ದಾರೆ. ಪ್ರಸ್ತುತ 15 ವಿದ್ಯಾರ್ಥಿಗಳು 2024-25 ರ ಅವಧಿಯಲ್ಲಿ ಅಂತಾರಾಷ್ಟಿçÃಯ ತರಬೇತಿ ಪಡೆಯಲು ದಾಖಲಾಗಿದ್ದಾರೆ.