Latest News

ಕುಲಸಚಿವರು

ಡಾ. ಕೆ ಸಿ ಶಶಿಧರ್
PhD( Civil Engineering);PhD (Science),MSc(Ag.Soil & water Engineerig)

                                                                                                                                    ಕುಲಸಚಿವರು

 ಇಮೇಲ್: registrar@uahs.edu.in 
 ದೂರವಾಣಿ: +91 94808 38958, 

ಕುಲಸಚಿವರ ಸಂದೇಶ

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ. ವಿಶ್ವವಿದ್ಯಾಲಯವು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ ಬೋಧನೆ ಮಾಡುತ್ತಿದೆ. ರಚನಾತ್ಮಕ ಪಠ್ಯಕ್ರಮವನ್ನು ಅನುಸರಿಸುವುದರ ಜೊತೆಗೆ ಅತ್ಯಧಿಕ ಅರ್ಹತೆಯುಳ್ಳ ಪ್ರಾಧ್ಯಾಪಕರ ಮೂಲಕ ಜ್ಞಾನವನ್ನು ಈ ಕೋರ್ಸುಗಳಲ್ಲಿ ನೀಡಲಾಗುತ್ತಿದೆ. ಕಲಿಕೆಯ ಕೌಶಲ್ಯ ಹಾಗೂ ಆರೋಗ್ಯಕರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಹೆಚ್ಚಿನ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ. ಇದು ನಮ್ಮ ಪ್ರಯತ್ನಶೀಲತೆಯಿಂದಾಗಿ ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೈಕ್ಷಣಿಕ ಹಾಗೂ ಬೋಧಕರಿಗೆ ಮತ್ತು ಸಿಬ್ಬಂದಿಗೆ ಸಕಾಲಿಕ ಆಡಳಿತ ಸೇವೆಯನ್ನು ಒದಗಿಸುವಲ್ಲಿ ಸಂತೋಷವೆನಿಸಿದ್ದು ಹಾಗೂ ಇದೊಂದು ಉತ್ತಮ ಅವಕಾಶವೆನಿಸಿದೆ. ನಮ್ಮ ಕಛೇರಿಯು, ಪ್ರವೇಶಾತಿಗಳು, ನೋಂದಣಿಗಳು, ಪಠ್ಯಕ್ರಮಗಳ ನಿರ್ವಹಣೆ, ತರಗತಿಯ ಸಮಯ ಸಿದ್ಧಪಡಿಸುವಿಕೆ, ಪ್ರಾರಂಭಿಕ ಪ್ರಮಾಣಪತ್ರ, ಪದವಿ ಪರಿಶೀಲನೆಗಳು, ಅಂತಿಮ ಶ್ರೇಣಿಗಳು, ನಕಲು ಪ್ರತಿಯ ಅವಶ್ಯಕತೆಗಳು, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಾಮಾನ್ಯ ಆಡಳಿತದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಸಾಮಾನ್ಯವಾಗಿ ಉನ್ನತ ಶಿಕ್ಷಣ ಹಾಗೂ ನಿರ್ದಿಷ್ಟ ತಾಂತ್ರಿಕ ಶಿಕ್ಷಣವನ್ನು ವೈಯಕ್ತಿಕವಾಗಿ ಹಾಗೂ ರಾಷ್ಟ್ರೀಯ ಆರ್ಥಿಕತೆಗೆ ಸಮಂಜಸವಾದ ಭರವಸೆಗಳನ್ನು ಮೂಡಿಸಲು ನಿರ್ವಹಿಸಲಾಗುತ್ತದೆ. ಅಲ್ಲದೆ ಇವು ಸ್ವಾಭಿಮಾನದ ಹಾಗೂ ಘನತೆಯ ಪ್ರಜ್ಞೆಯನ್ನು ಬೆಳೆಸುತ್ತವೆ. ಜಾಗತೀಕರಣದ ಇಂದಿನ ಯುಗದಲ್ಲಿ, ಗುಣಮಟ್ಟವು ಪ್ರತಿಯೊಂದು ಕ್ಷೇತ್ರದಲ್ಲೂ ಆರ್ಥಿಕತೆಯ ಯಶಸ್ಸಿಗೆ ಒಂದು ಪ್ರಮುಖ ಅಂಶವಾಗಿದೆ. ಇದು ಶೈಕ್ಷಣಿಕ ಗುಣಮಟ್ಟವನ್ನು ಒದಗಿಸುವ ಅಂಶವನ್ನು ಸಹ ಒಳಗೊಂಡಿರುತ್ತದೆ. ನಾವು ಆಧುನಿಕ ಜಗತ್ತಿನ ಅಗತ್ಯವಿರುವ ಪ್ರತಿಭಾ ಕ್ರಿಯಾ ಶಕ್ತಿಯನ್ನು ರೂಪಿಸುವ ಗುರಿಯನ್ನು ಹೊಂದಿದ್ದೇವೆ. ನಮ್ಮಲ್ಲಿ ಹೆಚ್ಚಿನ ಬದ್ಧತೆ ಹಾಗೂ ಸಮರ್ಪಣಾ ಭಾವದ ಬೋಧಕವರ್ಗದವರು, ನಾಳಿನ ಜಗತ್ತಿನ ನಾಯಕರನ್ನಾಗಿ ರೂಪಿಸುವಲ್ಲಿ ಅವರು ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ವಿಧಾನಗಳ, ಮೂಲಕ ಖಚಿತವಾಗಿ ಪ್ರಜ್ಞಾವಂತರನ್ನಾಗಿ ರೂಪಿಸಲಾಗುವುದು. ವಿಶ್ವವಿದ್ಯಾಲಯದ ಪರವಾಗಿ, ನಮ್ಮ ಕಛೇರಿಯು ನಿರಂತರ ಬೆಂಬಲ, ಮಾರ್ಗದರ್ಶನ ಹಾಗೂ ನೆರವನ್ನು ನೀಡುತ್ತದೆ. ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಹಾಗೂ ಸಹಯೋಗ ಬಯಸುವ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಸ್ವಾಗತ ಹಾಗೂ ಶುಭಕೋರು

Scroll to Top