
M.Sc.(Agri.), Ph.D, PGDMM, PGDAEM, PGDHRM Editor
Editor
ಇಮೇಲ್: editorucc@uahs.edu.in / ucc.uahs@gmail.com
ಫೋನ್ : 94808 38218
ತಮಗೆಲ್ಲರಿಗೂ ವಿಶ್ವವಿದ್ಯಾಲಯದ ಸಂವಹನ ಕೇಂದ್ರಕ್ಕೆ ಸುಸ್ವಾಗತ. ಇದು ವಿಶ್ವವಿದ್ಯಾಲಯಕ್ಕೆ ಸೇವೆ ಸಲ್ಲಿಸುವ ಒಂದು
ಸಮನ್ವಯ ಕೇಂದ್ರವಾಗಿರುತ್ತದೆ. ಸಂವಹನ ಕೇಂದ್ರವು ದಿನಾಂಕ:೦೭.೦೭.೨೦೧೪ರಂದು ಸ್ಥಾಪನೆಯಾಗಿದ್ದು, ಅಂದಿನಿಂದ ತನ್ನ
ಕಾರ್ಯವನ್ನು ಆರಂಭಿಸಿರುತ್ತದೆ. ಈ ಕೇಂದ್ರವು ಶಿಕ್ಷಣ ನಿರ್ದೇಶನಾಲಯದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಈ ಕೇಂದ್ರವು
ವಿಶ್ವವಿದ್ಯಾಲಯದ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ವಿಭಾಗಗಳ ಮುದ್ರಣಾ ಕಾರ್ಯಗಳ ಸಂಯೋಜನಾ ಕೇಂದ್ರವಾಗಿ
ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರವು ವಿಶ್ವವಿದ್ಯಾಲಯದ ಎಲ್ಲಾ ಪ್ರಕಟಣೆಗಳಿಗೆ ನೋಂದಣಿ ಸಂಖ್ಯೆ ನೀಡುವ ವ್ಯವಸ್ಥೆಯನ್ನು
ಆರಂಭಿಸಲಾಗಿದೆ. ವಿಶ್ವವಿದ್ಯಾಲಯ ಸಂವಹನ ಕೇಂದ್ರವು ೨೦೧೫ ಜನವರಿಯಿಂದ ನೇಗಿಲ ಮಿಡಿತ ಕನ್ನಡ ಕೃಷಿ ಪತ್ರಿಕೆಯನ್ನು
ಆರಂಭಿಸಿ, ನಿರಂತರವಾಗಿ ಪ್ರಕಟಿಸುತ್ತಾ ಬಂದಿದ್ದು, ಇದನ್ನು ರೈತರು ಹಾಗೂ ಓದುಗರು ಅತ್ಯಂತ ಸಂತಸದಿಂದ ಸ್ವೀಕರಿಸಿದ್ದಾರೆ
. ಈ ನೇಗಿಲ ಮಿಡಿತ ಕೃಷಿ ಪತ್ರಿಕೆಯು ನಮ್ಮ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿಯೂ ಸಹ ಲಭ್ಯವಿರುತ್ತದೆ. ಸಂವಹನ
ಕೇಂದ್ರದಿಂದ ವಿಶ್ವವಿದ್ಯಾಲಯದ ನ್ಯೂಸ್‌ಲೆಟರ್ ಅನ್ನು ಸಹ ನಿರಂತರವಾಗಿ ಪ್ರಕಟಿಸಲಾಗುತ್ತಿದೆ
ಕಾರ್ಯ ಚಟುವಟಿಕೆಗಳು
- ಕನ್ನಡದಲ್ಲಿ ನೇಗಿಲ ಮಿಡಿತ ಕೃಷಿ ಪತ್ರಿಕೆಯ ವಿನ್ಯಾಸ ಮತ್ತು ಪ್ರಕಟಣೆ
- ವಿಶ್ವವಿದ್ಯಾಲಯದ ನ್ಯೂಸ್ ಲೆಟರ್ ವಿನ್ಯಾಸ ಮತ್ತು ಪ್ರಕಟಣೆ
- ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳ ಪ್ರಕಟಣೆಗಳಿಗೆ (ತಾಂತ್ರಿಕ ಕೈಪಿಡಿ, ಹಸ್ತಪ್ರತಿ, ಇತ್ಯಾದಿ) ವಿಶ್ವವಿದ್ಯಾಲಯ ಸಂಖ್ಯೆಯನ್ನು ನೀಡುವುದು.
- ವಿಶ್ವವಿದ್ಯಾಲಯದ ಪ್ರಮುಖ ಕಾರ್ಯಕ್ರಮಗಳಾದ ಘಟಿಕೋತ್ಸವ, ಸಂಸ್ಥಾಪನಾ ದಿನಾಚರಣೆ, ಇತ್ಯಾದಿಗಳ ಆಮಂತ್ರಣ ಪತ್ರಿಕೆ, ಬ್ಯಾನರ್, ಪ್ರಮುಖ ಪ್ರಮಾಣ ಪತ್ರಗಳು, ಇತ್ಯಾದಿಗಳ ವಿನ್ಯಾಸ ಮತ್ತು ಪ್ರಕಟಣೆ.
- ವಿಶ್ವವಿದ್ಯಾಲಯದ ಗೋಡೆ ಕ್ಯಾಲೆಂಡರ್, ಟೇಬಲ್ ಕ್ಯಾಲೆಂಡರ್, ಟೆಲಿಫೋನ್ ಡೈರೆಕ್ಟರಿ ಇತ್ಯಾದಿಗಳ ವಿನ್ಯಾಸ ಮತ್ತು ಪ್ರಕಟಣೆ.
- ವಿಶ್ವವಿದ್ಯಾಲಯದ ವಾರ್ಷಿಕ ವರದಿಯನ್ನು ಸಂಪಾದನೆ ಮಾಡುವುದು (Editing)
- ರೈತರಿಗೆ, ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನಿಗಳಿಗೆ ಉಪಯುಕ್ತವಾದ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ವಿನ್ಯಾಸ ಮತ್ತು ಮುದ್ರಣ.
- ವಿಶ್ವವಿದ್ಯಾನಿಲಯದ ಪ್ರೊಫೈಲ್ (KSNUAHS Profile) ವಿನ್ಯಾಸ ಮತ್ತು ಮುದ್ರಣ.
ಸಂಪಾದಕೀಯ ಸಮಿತಿ
ಅಧ್ಯಕ್ಷರು
ಡಾ. ಆರ್. ಸಿ. ಜಗದೀಶ್, ಕುಲಪತಿಗಳು
ಸದಸ್ಯರು
ಡಾ. ಬಿ. ಹೇಮ್ಲಾ ನಾಯಕ್, ಶಿಕ್ಷಣ ನಿರ್ದೇಶಕರು
ಡಾ. ದುಷ್ಯಂತ್ ಕುಮಾರ್, ಸಂಶೋಧನಾ ನಿರ್ದೇಶಕರು
ಡಾ. ಕೆ ಟಿ ಗುರುಮೂರ್ತಿ,ವಿಸ್ತರಣಾ ನಿರ್ದೇಶಕರು
ಡಾ ಡಿ. ತಿಪ್ಪೇಶ್, ಗ್ರಂಥಪಾಲಕರು
ಡಾ . ಬಸವರಾಜ್ ಬೀರಣ್ಣವರ್, ಸಂಪಾದಕರು ಮತ್ತು ಸದಸ್ಯರು ಕಾರ್ಯದರ್ಶಿಗಳು
ಡಾ. ಟಿ. ಎಂ. ಸೌಮ್ಯ, ಸಹಾಯಕ ಸಂಪಾದಕರು
ಸಂವಹನ ಕೇಂದ್ರದ ಸಿಬ್ಬಂದಿ ವರ್ಗ
ಡಾ. ಎಂ. ಸಿ. ಮಲ್ಲಿಕಾರ್ಜುನ, ಸಹಾಯಕ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ
ಶ್ರೀ. ಯೋಗೀಶ್ ಕೆ., ಸಹಾಯಕರು ಕಂ. ಕಂಪ್ಯೂಟರ್ ಆಪರೇಟರ್
ಶ್ರೀಮತಿ ಎಂ. ಎಸ್. ಸುಪ್ರಿಯ, ಸಹಾಯಕರು ಕಂ. ಕಂಪ್ಯೂಟರ್ ಆಪರೇಟರ್
ಶ್ರೀ. ವಿನಯ್ ಡಿ., ಸಂದೇಶ ವಾಹಕ
ವಿಶ್ವವಿದ್ಯಾಲಯ ಸಂವಹನ ಕೇಂದ್ರದಿಂದ ಪ್ರಕಟಣೆಗೊಂಡ ಪುಸ್ತಕಗಳ ವಿವರ
ಕ್ರ. ಸಂ. | ಶೀರ್ಷಿಕೆ | ದರ |
1 | ಕೆರೆ ಪದಕೋಶ | 100.00 |
2 | ಜಿ. ಎಂ. ಬೆಳೆಗಳು: ಸವಾಲುಗಳು ಮತ್ತು ಅವಕಾಶಗಳು | 150.00 |
3 | ಕೃಷಿಯಲ್ಲಿ ಪೀಡೆನಾಶಕಗಳು ಮತ್ತು ಅವುಗಳ ಸುರಕ್ಷಿತ ಬಳಕೆ | 160.00 |
4 | ಅಡಿಕೆ | 350.00 |
5 | ಬಾಳೆ | 100.00 |
6 | ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಕೀಟಗಳ ನಿರ್ವಹಣೆ | 155.00 |
7 | ಎಣ್ಣೆಕಾಳು ಬೆಳೆಗಳು | 60.00 |
8 | ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ರೋಗಗಳ ನಿರ್ವಹಣೆ | 90.00 |
9 | ಕಪ್ಪು ಹೊನ್ನು-ಕಾಳುಮೆಣಸು | 60.00 |
10 | ಗೇರು ಕೃಷಿ | 55.00 |
11 | ಸಮಗ್ರ ಕೃಷಿ ಪದ್ಧತಿಗಳು | 100.00 |
12 | ಕೃಷಿ ಹವಾಮಾನ: ಬದಲಾವಣೆ ಮತ್ತು ನಿರ್ವಹಣೆ | 75.00 |
13 | ಪಶುವೈದ್ಯಾಮೃತ: ಪ್ರಾಣಿಲೋಕದ ರೋಚಕ ಸಂಗತಿಗಳು | 75.00 |
14 | ಅಡಿಕೆ ಕೃಷಿ | 65.00 |
15 | ಪೌಷ್ಟಿಕ ಸಿರಿಧಾನ್ಯಗಳು | 55.00 |
16 | ವಾಣಿಜ್ಯ ಸಂರಕ್ಷಿತ ಪುಷ್ಪಕೃಷಿ | 55.00 |
17 | ಸಂರಕ್ಷಿತ ವಾತಾವರಣದಲ್ಲಿ ಆಂಥೂರಿಯA ಬೇಸಾಯ | 55.00 |
18 | PESTICIDE USAGE IN AGRICULTURAL CROPS | 80.00 |
19 | ತೋಟಗಾರಿಕಾ ಬೆಳೆಗಳಲ್ಲಿ ಕೋಯ್ಲೋತ್ತರ ನಿರ್ವಹಣೆ ಮತ್ತು ಮೌಲ್ಯವರ್ಧನೆ | 60.00 |