Diploma College of Agriculture, Kathalagere

ಡಿಪ್ಲೊಮಾ (ಕೃಷಿ) ಮಹಾವಿದ್ಯಾಲಯ, ಕತ್ತಲಗೆರೆ

ಸ್ಥಾಪನೆ 2011.

Established in 2011.

ಮಹಾವಿದ್ಯಾಲಯದ ಬಗ್ಗೆ

About The College

dean_pgs

Dr. Ananda Kumar B.M. M.Sc.(Agri.), Ph.D

ಡಾ. ಆನಂದಕುಮಾರ್ ಬಿ.ಎಮ್. ಎಮ್‌.ಎಸ್ಸಿ(ಕೃಷಿ), ಪಿಎಚ್.ಡಿ

Principal, Diploma(Agri.) College,AHRS, Kathalagere, Karnataka, INDIA ಪ್ರಾಂಶುಪಾಲರು, ಡಿಪ್ಲೊಮಾ(ಕೃಷಿ) ಮಹಾವಿದ್ಯಾಲಯ, ಕತ್ತಲಗೆರೆ,

diplomakathalagere@gmail.com , bmanandakumar@rediffmail.com
+91 94808 38974
+91 8180 273795

The Diploma (Agri.) College at Kathalagere was started in 2011 with an intake capacity of 35 students per year functioning in the premises of Agricultural and Horticultural research station, Kathalagere. The Diploma (Agri.) college is having good infrastructure facilities like separate college building (construction going on), well established computer laboratory and library, separate hostel for boys and girls, play ground, students counseling and other co-curricular activities. The institute is providing quality practical oriented education to the students in the field of agriculture along with regular classroom teaching. The students are also exposed to various advancements in the field of agriculture through 15 days state education tour and they are also exposed to field problems, faced by problems through 15 days village stay. The students of the institute have excelled in academics, sports, literary and cultural activities, main thrust is given on the overall personality developments of the students. My best wishes to those who seek to be a part of this institute and congratulate all the students completing their degree programme from Diploma (Agri.) College, AHRS, Kathalagere

Dr. Ananda Kumar, B.M.
Principal

ಡಿಪ್ಲೊಮಾ (ಕೃಷಿ) ಮಹಾವಿದ್ಯಾಲಯ, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಕತ್ತಲಗೆರೆಯು ವರ್ಷಕ್ಕೆ ೩೫ ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯದೊಂದಿಗೆ ೨೦೧೧ರಲ್ಲಿ ಪ್ರಾರಂಭವಾಯಿತು. ಮಹಾವಿದ್ಯಾಲಯವು ಪ್ರತ್ಯೇಕ ಕಟ್ಟಡ (ನಿರ್ಮಾಣ ಹಂತದಲ್ಲಿದೆ), ಸುಸಜ್ಜಿತ ಗಣಕಯಂತ್ರ ಪ್ರಯೋಗಾಲಯ, ಗ್ರಂಥಾಲಯ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯಗಳು, ಆಟದ ಮೈದಾನ, ವಿದ್ಯಾರ್ಥಿ ಸಮಾಲೋಚನೆ ಮತ್ತು ಇತರೆ ಉತ್ತಮ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ. ಮಹಾವಿದ್ಯಾಲಯವು ನಿಯಮಿತ ತರಗತಿ ಭೋದನೆಯ ಜೊತೆಗೆ ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರದಲ್ಲಿ ಗುಣಮಟ್ಟದ ಪ್ರಾಯೋಗಿಕ ಶಿಕ್ಷಣವನ್ನು ನೀಡುತ್ತಿದೆ.

ಬೋಧನಾ ಮಾಧ್ಯಮ : ಕನ್ನಡ

ಅವಧಿ : ಎರಡು ವರ್ಷಗಳು (ನಾಲ್ಕು ಷಣ್ಮಾಸಿಕಗಳು)

ಅವಕಾಶಗಳು : ಪ್ರತಿ ವರ್ಷ 35 ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲಾಗುತ್ತಿದೆ

ಈಗಾಗಲೇ 5 ಬ್ಯಾಚ್ ವಿದ್ಯಾರ್ಥಿಗಳು ಡಿಪ್ಲೊಮಾ (ಕೃಷಿ) ಮುಗಿಸಿರುತ್ತಾರೆ. ಅಂದರೆ ಸುಮಾರು 220 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇವರುಗಳಲ್ಲಿ ಕೆಲ ಅಭ್ಯರ್ಥಿಗಳು ಸರ್ಕಾರೇತರ ಸಂಸ್ಥೆಗಳಲ್ಲಿ ಹಾಗೂ ಸ್ವಂತ ಉದ್ದಿಮೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಇನ್ನಿತರರು ಬಿ.ಎಸ್ಸಿ. (ಕೃಷಿ)ಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

೧೫ ದಿನಗಳ ಶೈಕ್ಷಣಿಕ ಪ್ರವಾಸದ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಕೃಷಿ ಸಂಬಂಧಿತ ಸಂಸ್ಥೆಗಳಲ್ಲಿನ ಕೃಷಿ ಸಂಬಂಧಿತ ಅಭಿವೃದ್ಧಿಗಳು ಮತ್ತು ೧೫ ದಿನಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಮೂಲಕ ಗ್ರಾಮೀಣ ಪ್ರದೇಶದಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆಲ್ಲುವುದರ ಮೂಲಕ ಅತ್ಯುತ್ತಮ ವಿದ್ಯಾರ್ಥಿಗಳೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಒಟ್ಟಾರೆ ವ್ಯಕ್ತಿತ್ವ ಬೆಳವಣಿಗೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಈ ಮಹಾವಿದ್ಯಾಲಯದ ಭಾಗವಾಗಲು ಬಯಸುವ ವಿದ್ಯಾರ್ಥಿಗಳಿಗೆ ನನ್ನ ಶುಭಾಶಯಗಳು ಹಾಗೂ ಈ ಮಹಾವಿದ್ಯಾಲಯದಿಂದ ಡಿಪ್ಲೊಮಾ (ಕೃಷಿ) ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ ನನ್ನ ಅಭಿನಂದನೆಗಳು.

ಡಾ. ಬಿ.ಎಮ್. ಆನಂದಕುಮಾರ್
ಪ್ರಾಂಶುಪಾಲರ

dcoa_k