COLLEGE OF AGRICULTURE, SHIVAMOGGA

ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ

ಸ್ಥಾಪನೆ 1990.

Established in 1990.

ಕೃಷಿ ಮಹಾವಿದ್ಯಾಲಯದ ಬಗ್ಗೆ

About the College

dean_agri

Dr. H. M. Chidanandappa. M.Sc(Agri) , Ph.D

Dean (Agri.),College of Agriculture,Navile, Shivamogga, Karnataka, India

deanagrishimoga.uahs@gmail.com
+91 94808 38960
+91 8182 267086

ಶಿವಮೊಗ್ಗ ನಗರವು ರಸ್ತೆ ಮತ್ತು ರೈಲು ಸೌಲಭ್ಯಗಳಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಶಿವಮೊಗ್ಗ ಜಿಲ್ಲೆಯು ಬೆಳೆಯುತ್ತಿರುವ ವಿವಿಧ ತೋಟಗಾರಿಕೆ ಮತ್ತು ಕ್ಷೇತ್ರ ಬೆಳೆಗಳಿಗೆ ಸಮಂಜಸವಾದಂತಹ ಕೃಷಿ ವಾತಾವರಣವನ್ನು ಹೊಂದಿದೆ. ಈ ಮಹಾವಿದ್ಯಾಲಯವು ರೈತ ಸಮುದಾಯವನ್ನು ರಾಜ್ಯದಲ್ಲಿನ ಕೃಷಿ ಸಮುದಾಯಕ್ಕೆ ನೆರವು ಹಾಗೂ ವಿಶೇಷವಾಗಿ ಶಿವಮೊಗ್ಗದಲ್ಲಿ ಉತ್ತಮ ತರಬೇತಿ ಪಡೆದ ಜನಬಲ ಒದಗಿಸುವಿಕೆ, ನೈಜ ಕೃಷಿ ಪರಿಕರಗಳು ಮತ್ತು ಗ್ರಾಮೀಣ ಸಮುದಾಯದ ಎಲ್ಲರ ಅಭಿವೃದ್ಧಿಗೆ ಕಾಲಕಾಲಕ್ಕೆ ಮಾಹಿತಿಯನ್ನು ನೀಡುತ್ತ್ತಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಡಿಯಲ್ಲಿ ಶಿವಮೊಗ್ಗ ಕೃಷಿ ಮಹಾವಿದ್ಯಾಲಯವು 1990ರಲ್ಲಿ ಬಿ.ಎಸ್.ಸಿ. (ಕೃಷಿ) ಆರಂಭಿಸಿದ್ದು, ಗ್ರಾಮೀಣೀಕರಣದ ಭಾಗವಾಗಿ ಕೃಷಿ ಶಿಕ್ಷಣದ ಪಠ್ಯವನ್ನು ಅಳವಡಿಸಲಾಗಿರುತ್ತದೆ. ಮತ್ತು ಇದು ಸೆಪ್ಟೆಂಬರ್ 2012ರಿಂದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಭಾಗವಾಯಿತು. ಈ ಮಹಾ ವಿದ್ಯಾಲಯದ ಆವರಣವು ಸವಳಂಗ ರಸ್ತೆಯ ನವುಲೆಯಲ್ಲಿದ್ದು, ಶಿವಮೊಗ್ಗ ನಗರಕ್ಕೆ 5 ಕಿ.ಮೀ. ದೂರದಲ್ಲಿದೆ. ಇದು ಬಾಪೂಜಿ ಆಯುರ್ವೇದಿಕ್ ಮಹಾವಿದ್ಯಾಲಯದ ಎದುರಿನಲ್ಲಿದ್ದು ಹಾಗೂ ಜೆಎನ್‍ಎನ್ ಇಂಜಿನಿಯರಿಂಗ್ ಮಹಾವಿದ್ಯಾಲಯದ ನಂತರದ ಶೈಕ್ಷಣಿಕ ವಲಯವಾಗಿರುತ್ತದೆ. ಅಲ್ಲದೆ ಕೃಷಿ ವಲಯದೊಂದಿಗೆ 78 ಹೆಕ್ಟೇರ್ ಪ್ರದೇಶದ ಆವರಣವನ್ನು ಹೊಂದಿದ್ದು ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಸಾವಯವ ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರಗಳನ್ನು ಒಳಗೊಂಡಿದೆ. 2001ರಲ್ಲಿ ಅಡಿಕೆ ಮಾರುಕಟ್ಟೆ ಸಹಕಾರ ಸಂಘದವರಿಂದ ಅಡಿಕೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸ್ವ ಸುಸ್ಥಿರತೆ ವಿಧಾನದ ಆಧಾರದ ಮೇಲೆ ಪರಿಕರ ವಿತರಕರಿಗಾಗಿ ವಿಸ್ತರಣಾ ಸೇವೆಗಳ ಕೃಷಿ ಡಿಪ್ಲೊಮಾ ತರಗತಿಗಳನ್ನು ನಡೆಸಲಾಗುತ್ತಿದೆ.

ಈ ಮಹಾವಿದ್ಯಾಲಯವು ಬೋಧನೆ ಮತ್ತು ಸಂಶೋಧನೆ ಉದ್ದೇಶಗಳಿಗಾಗಿ ಉತ್ತಮ ಪ್ರಯೋಗಾಲಯಗಳನ್ನು ಅಳವಡಿಸಿರುತ್ತದೆ. ಕಂಪ್ಯೂಟರ್‍ಕೃತ ಪ್ರಯೋಗಾಲಯ, ಕೃಷಿ ಸಂಶೋಧನೆ ಮಾಹಿತಿ ವ್ಯವಸ್ಥೆ (ಎರಿಸ್), ಅತ್ಯಧಿಕ ವೇಗದ ಅಂತರ್ಜಾಲಗಳ ಸಂಪರ್ಕ ಹೊಂದಿರುವ ವಿ-ಸ್ಯಾಟ್, ಶಾಶ್ವತ ಮಳೆನೀರು ಕೊಯ್ಲಿನ ರಚನೆಗಳು, ಉತ್ತಮವಾದ ಅಡಿಕೆ ತೋಟ, ಉತ್ತಮ ಉಪನ್ಯಾಸ ಕೊಠಡಿಗಳು, ಇತ್ತೀಚಿನ ಆಡಿಯೋ ದೃಶ್ಯಾವಳಿಗಳು, 11,000 ಕ್ಕಿಂತ ಹೆಚ್ಚು ದಾಖಲಾತಿಗಳು, ಸಿಡಿ ರಾಮ್‍ಗಳು, ಇ-ಗ್ರಂಥಾಲಯ ಮತ್ತು ನೆಟ್ವರ್ಕಿಂಗ್ ಸೌಕರ್ಯ, ಬಾಲಕರು ಮತ್ತು ಬಾಲಕಿಯರಿಗಾಗಿ ಉತ್ತಮವಾಗಿ ಅಭಿವೃದ್ಧಿಪಡಿಸಿದ ವಸತಿ ಸೌಲಭ್ಯ, ಬೆಳೆ ಉತ್ಪಾದನೆಗೆ ಸೂಚನಾ ಕೇಂದ್ರಗಳು, ತೋಟಗಾರಿಕೆ ನರ್ಸರಿಗಳು, ಸಂದರ್ಶಕರಿಗೆ ಅತಿಥಿಗೃಹದ ಸೌಕರ್ಯ, ವಿದ್ಯಾರ್ಥಿ ಆಪ್ತಸಮಾಲೋಚನೆ, ವ್ಯಕ್ತಿತ್ವ ವಿಕಾಸ ಮತ್ತು ಪ್ರೇರಣೆ ನೀಡುವ ಕಾರ್ಯಕ್ರಮಗಳನ್ನು ಒದಗಿಸಲಾಗುತ್ತಿದೆ.

ಪ್ರಸ್ತುತ ಮಹಾವಿದ್ಯಾಲಯವು ಕರ್ನಾಟಕ ಶಿಕ್ಷಣ ಆಡಳಿತದ ಮೂಲಕ ಸೇವೆ ಸಲ್ಲಿಸುತ್ತಿದ್ದು, 100 ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿದೆ. 2002ರಲ್ಲಿ ಕೃಷಿ ಕೀಟಶಾಸ್ತ್ರ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು ಆರಂಭಿಸಿತ್ತು. ಪ್ರಸ್ತುತ ಆರು ವಿಭಾಗಗಳಲ್ಲಿ (ಕೃಷಿ ಕೀಟಶಾಸ್ತ್ರ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಆನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ, ಸಸ್ಯ ರೋಗ ಶಾಸ್ತ್ರ ಹಾಗೂ ಕೃಷಿ ವಿಸ್ತರಣೆ) ಎಂಎಸ್ಸಿ ಪದವಿಯನ್ನು ಪ್ರತಿ ವಿಭಾಗಗಳಲ್ಲಿ ಆರು ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಬಹುದಾಗಿರುತ್ತದೆ. ಕೃಷಿ ವಿಸ್ತರಣೆಯನ್ನು ಹೊರತುಪಡಿಸಿ ಇತರೆ ಐದು ವಿಭಾಗಗಳಲ್ಲಿ ಪ್ರತಿ ಎರಡು ವಿದ್ಯಾರ್ಥಿಗಳಂತೆ ಪ್ರತಿ ವಿಭಾಗದಲ್ಲಿ ಪಿಹೆಚ್.ಡಿ ಪದವಿ ಕಾರ್ಯಕ್ರಮಗಳಿಗೆ ಪ್ರವೇಶಾತಿ ಪಡೆಯಬಹುದಾಗಿರುತ್ತದೆ.

ಕೃಷಿ ಮಹಾವಿದ್ಯಾಲಯವು ಸ್ನಾತಕ ಪದವಿ ಶಿಕ್ಷಣವನ್ನು ಕೃಷಿಯಲ್ಲಿ ಬಿ.ಎಸ್.ಸಿ (ಕೃಷಿ) ಪದವಿ ಕಾರ್ಯಕ್ರಮವನ್ನು ಮತ್ತು ಬೇಸಾಯ ಶಾಸ್ತ್ರ, ಆನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಸಸ್ಯ ರೋಗ ಶಾಸ್ತ್ರ ಹಾಗೂ ಕೃಷಿ ವಿಸ್ತರಣೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಗಳನ್ನು ನೀಡುತ್ತಿದೆ. ಪರಿಕರಗಳ ಮಾರಾಟಗಾರರಿಗೆ ಒಂದು ವರ್ಷದ ಡಿಪ್ಲೊಮಾ(ಭಾನುವಾರಗಳು ಮಾತ್ರ) ಪರಿಕರ ವಿತರಕರಿಗೆ ಕೃಷಿ ವಿಸ್ತರಣಾ ಸೇವೆಗಳಲ್ಲಿ ಸಹ ನೀಡಲಾಗುತ್ತಿದೆ. ಬೇಸಾಯಶಾಸ್ತ್ರ, ಆನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಕೃಷಿ ಕೀಟಶಾಸ್ತ್ರ ಹಾಗೂ ಸಸ್ಯರೋಗಶಾಸ್ತ್ರ ವಿಷಯಗಳಲ್ಲಿ ಪಿಹೆಚ್.ಡಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ.

Shivamogga is well connected by road and train facilities. Shivamogga district has varied agro climatic conditions congenial for growing various field and horticultural crops. The college would help the farming community in the state in general and Shivamogga in particular by way of producing well trained man power, genuine agricultural inputs and information from time to time for over all development of rural community.

College of Agriculture, Shivamogga started in 1990 for B.Sc. (Agri) course as part of ruralisation of agricultural education under the University of Agril. Sciences, Bangalore and became part of the University of Agril. & Horticultural sciences, Shivamogga from September 2012.The college campus is located at Navile about 5 km away from Shivamogga town on Savalanga road. It is an education zone next to JNN College of Engineering and opposite to Bapuji Ayurvedic college . The campus has an area of 78 hectares with Zonal Agril. and Horticultural Research station, Organic Farming Research Centre and Krishi Vignana Kendra. The campus also has Areca nut research centre funded by Areca marketing societies  in 2001 and diploma in Agril. Extension services for input dealers (DEASI) on self-sustaining mode. Shivamogga is well connected by road and train facilities. Shivamogga district has varied agro climatic conditions congenial for growing various field and horticultural crops.

The college has well equipped laboratories for teaching and research purposes, computer laboratory, Agricultural research information system(ARIS), computers with high speed internet connectivity through v- sat, permanent rain water harvesting structures, well established areca nut garden, lecture halls equipped with  latest audio visual aids, well developed library with more than 11,000 accessions, CD roms, e library and networking facility, well developed hostel facility for both boys and girls, instructional farms for crop production, horticulture nurseries, well developed guesthouse for visitors, student counselling, programs on personality development and motivation are available.

At present college admits 100 under graduate students served through Karnataka education Administration. Post graduate programmes have been started in Agril.Entomology and Soil Science and Agril.Chemistry in 2002. At present six departments (Agril.Entomology, Soil Science and Agril.Chemistry, Agronomy, Genetics and Plant breeding, Plant pathology and Agril.Extension) offer M.Sc. (Agri with an intake of six students, and except Agril.Extension other five departments offer Ph.D degree programmes with an intake of two students.

The Agriculture College imparts undergraduate education in agriculture leading to B.Sc.(Agri) degree programme and Post-Graduate degree Programmes in the subjects of Agronomy, Genetics and Plant Breeding, Soil Science and Agricultural Chemistry, Agricultural Entomology, Plant Pathology and Agricultural Extension. One year Diploma (only Sundays) in Agricultural Extension Services to Input Dealers (DAESI) is also offered to input dealers. Ph.D. Programmes are offered in the disciplines of Agricultural Entomology, Agronomy, Genetic & Plant Breeding, Soil Science & Agricultural Chemistry and Plant Pathology.

coa coa coa coa
coa

MANDATE

  1. Imparting education in agricultural science to produce quality human resource needed for the development of state/nation.

  2. Advancement of agricultural science and technology through research on agriculture and allied sciences.

  3. Undertaking extension education for the benefit of rural population and extension workers.

  4. Supply of critical inputs like seeds/ plants of high yielding varieties to the farmers of the region.

  5. Promoting partnership with other lane department institutions.

ಆದ್ಯಾದೇಶಗಳು

  1. ರಾಜ್ಯ / ದೇಶದ ಅಭಿವೃದ್ಧಿಗೆ ಅಗತ್ಯವಾದ ಗುಣಮಟ್ಟದ ಮಾನವನ ಸಂಪನ್ಮೂಲವನ್ನು ಸಿದ್ಧಗೊಳಿಸಲು ಕೃಷಿ ವಿಜ್ಞಾನದಲ್ಲಿ ಶಿಕ್ಷಣವನ್ನು ಉತ್ತೇಜಿಸುವುದು.

  2. ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳ ಸಂಶೋಧನೆಯ ಮೂಲಕ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿ ಸಾಧಿಸುವುದು.

  3. ಗ್ರಾಮೀಣ ಜನತೆಗೆ ಮತ್ತು ವಿಸ್ತರಣಾ ಕಾರ್ಯಕರ್ತರ ಅನುಕೂಲಕ್ಕಾಗಿ ವಿಸ್ತರಣಾ ಶಿಕ್ಷಣವನ್ನು ಕೈಗೊಳ್ಳುವುದು

  4. ಆಯಾ ಪ್ರದೇಶದ ರೈತರಿಗೆ ಅಧಿಕ ಇಳುವರಿಯ ತಳಿಗಳ ಬೀಜಗಳು/ಸಸಿಗಳು ಪರಿಕರಗಳ ನಿರ್ಣಾಯಕ ಮಾಹಿತಿಗಳನ್ನು ಪೂರೈಸುವುದು.

  5. ಇತರ ಸಂಬಂಧಿತ ವಿಭಾಗ, ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಉತ್ತೇಜಿಸುವುದು.

TEACHING

Teaching activity on this campus covers undergraduate (UG) course – B.Sc. (Agri.), Post graduate (PG) courses in six subjects and Diploma course for Agricultural Input Dealers- DAESI. The 4 year (8 Semester) UG programme consists of Crop Production courses (32%), Plant Sciences (12%), Plant Protection (13%), Agril. Extension and Economics (10%), Rural Agricultural Work Experience (RAWP)(12%), Hands On Training (HOT) (12%) and Basic Sciences, Humanities and supplementary subjects (9%).

ಬೋಧನೆ

ಈ ಆವರಣದಲ್ಲಿ ಸ್ನಾತಕ ಪದವಿ(ಯುಜಿ) ಬಿ.ಎಸ್ಸಿ(ಕೃಷಿ) ಕೋರ್ಸ್ - ಆರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ (ಸ್ನಾತಕೋತ್ತರ) ಕೋರ್ಸುಗಳು ಮತ್ತು ಕೃಷಿ ಪರಿಕರ ವಿತರಕರ-ದೇಸಿ ಡಿಪೆÇ್ಲಮಾ ಕೋರ್ಸ್ ಇವುಗಳ ಬೋಧನಾ ಚಟುವಟಿಕೆಗಳು ನಡೆಯುತ್ತವೆ. ಸ್ನಾತಕ ಪದವಿ 4 ವರ್ಷದ ಕಾರ್ಯಕ್ರಮದಲ್ಲಿ (8 ಸೆಮಿಸ್ಟರ್) ಬೆಳೆ ಉತ್ಪಾದನೆ ಕೋರ್ಸುಗಳು(32%), ಸಸ್ಯ ವಿಜ್ಞಾನ (12%), ಸಸ್ಯ ಸಂರಕ್ಷಣೆ (13%), ಕೃಷಿ ವಿಸ್ತರಣೆ ಮತ್ತು ಅರ್ಥಶಾಸ್ತ್ರ (10%), ಗ್ರಾಮೀಣ ಕೃಷಿ ಕಾರ್ಯಾನುಭವ (ರಾವೆ) (12%), ಕೌಶಲ್ಯ ತರಬೇತಿ (ಹೆಚ್‍ಓಟಿ) (12%) ಮತ್ತು ಮೂಲ ವಿಜ್ಞಾನ, ಮಾನವಿಕ ವಿಜ್ಞಾನಗಳು ಮತ್ತು ಪೂರಕ ವಿಷಯಗಳು (9%) ಒಳಗೊಂಡಿರುತ್ತವೆ.

coa